ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್ಕಿಡ್ಸ್ ಶಾಲೆ ಆರಂಭ, ಪೋಷಕರ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಅ.27 : ಜಾಲಹಳ್ಳಿ ಕ್ರಾಸ್ ಸಮೀಪದ ಆರ್ಕಿಡ್ಸ್ ಶಾಲೆಯಲ್ಲಿ ಮೂರೂವರೆ ವರ್ಷದ ನರ್ಸರಿ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ನಂತರ ಮುಚ್ಚಲಾಗಿದ್ದ ಶಾಲೆ ಸೋಮವಾರ ಪುನರಾರಂಭಗೊಂಡಿದೆ. ಆದರೆ, 6 ಮತ್ತು 7ನೇ ತರಗತಿಯನ್ನು ಆರಂಭಿಸಿಲ್ಲ ಎಂದು ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮೂರೂವರೆ ವರ್ಷದ ನರ್ಸರಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದ ನಂತರ ಶಾಲೆಯನ್ನು ಕಳೆದ ವಾರ ಮುಚ್ಚಲಾಗಿತ್ತು. ಸೋಮವಾರ 1ರಿಂದ 5ರವರೆಗಿನ ತರಗತಿಯನ್ನು ಆರಂಭಿಸಲಾಗಿದ್ದು, ಶಾಲೆ ಅವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.[ಆರ್ಕಿಡ್ಸ್ ಶಾಲೆಯಲ್ಲೇ ಅತ್ಯಾಚಾರ ನಡೆದಿದೆ : ಐಒ]

Orchids

ಪೋಷಕರು ಶಾಲೆಯ ಬಳಿಗೆ ಬಂದು ಮಕ್ಕಳನ್ನು ಬಿಟ್ಟು ಹೋಗುತ್ತಿದ್ದಾರೆ. ಆದರೆ, 6 ಮತ್ತು 7ನೇ ತರಗತಿಗಳನ್ನು ಆರಂಭಿಸದ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ತರಗತಿಯನ್ನು ಆರಂಭಿಸುವಂತೆ ಒತ್ತಾಯಿಸುತ್ತಿದ್ದಾರೆ. [ಜಾಲಹಳ್ಳಿ ಪೊಲೀಸರ ವಶಕ್ಕೆ ಆರೋಪಿ ಗುಂಡಣ್ಣ]

6 ಮತ್ತು 7ನೇ ತರಗತಿಯನ್ನು ಆರಂಭಿಸಲು ಆರ್ಕಿಡ್ಸ್ ಶಾಲೆ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂಬ ಮಾಹಿತಿ ಬೆಳಕಿಗೆ ಬಂದಿತ್ತು. ಆದ್ದರಿಂದ ತರಗತಿ ಆರಂಭಿಸದಂತೆ ಇಲಾಖೆ ಪತ್ರಬರೆದು ಸೂಚಿಸಿದ್ದರೆ, ಅದನ್ನು ಪೋಷಕರಿಗೆ ತೋರಿಸಬೇಕು ಎಂದು ಪ್ರತಿಭಟನಾನಿರತರು ಆಡಳಿತ ಮಂಡಳಿಗೆ ಬೇಡಿಕೆ ಇಟ್ಟಿದ್ದಾರೆ.

ಪೊಲೀಸ್ ವಶಕ್ಕೆ ಗುಂಡಪ್ಪ : ಆರ್ಕಿಡ್ಸ್ ಶಾಲೆಯ ಮೂರೂವರೆ ವರ್ಷದ ನರ್ಸರಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಶಾಲೆ ಅಟೆಂಡರ್ ಗುಂಡಪ್ಪ (45)ನನ್ನು ಆರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ವಿಶೇಷ ನ್ಯಾಯಾಲಯ ಭಾನುವಾರ ಆದೇಶ ನೀಡಿದೆ.

English summary
After a gap of nearly one week, the high profile Orchids, The International School's Jalahalli Bangalore re-opened on Monday, October 27. Parents visited the premises of school to satisfy themselves with the arrangements being made to ensure the security of students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X