ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಇಬ್ಬರ ಬಳಿ 4 ಕೋಟಿ ರು ಹೊಸ ನೋಟು ಪತ್ತೆ

ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರವೂ ದಾಳಿ ಮುಂದುವರೆಸಿದ್ದಾರೆ.ಏಕಕಾಲಕ್ಕೆ ನಗರದ 5 ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, 4ಕೋಟಿ ರು ಹೊಸ ನೋಟು ಪತ್ತೆಯಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 01: ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರವೂ ದಾಳಿ ಮುಂದುವರೆಸಿದ್ದಾರೆ.ಏಕಕಾಲಕ್ಕೆ ನಗರದ 5 ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, 4.7 ಕೋಟಿ ರು. ಹೊಸ ನೋಟು ಪತ್ತೆಯಾಗಿದೆ. ಜತೆಗೆ ಐಷಾರಾಮಿ ಕಾರು ಲ್ಯಾಂಬೊರ್ಗಿನಿ ಕೂಡಾ ಜಪ್ತಿ ಮಾಡಲಾಗಿದೆ.

3 ವಾಹನಗಳಲ್ಲಿ ಬಂದಿರುವ ಐಟಿ ಅಧಿಕಾರಿಗಳು ಬೆಂಗಳೂರಿನ ವಿವಿಧೆಡೆ ದಾಳಿ ಮುಂದುವರೆಸಿದ್ದಾರೆ. ದಾಳಿಗೆ ಒಳಪಟ್ಟವರಿಬ್ಬರು ಹಿರಿಯ ಅಧಿಕಾರಿಗಳು ಎಂದು ತಿಳಿದು ಬಂದಿದೆ.

IT raids in Bengaluru- Rs 4 crore in new currency, Lamborghini found in two locations

ಇಬ್ಬರ ಬಳಿ ಎಷ್ಟು ಪ್ರಮಾಣದಲ್ಲಿ ಹೊಸ ನೋಟು ಲಭ್ಯವಾಗಲಿದೆ ಎಂಬುದರ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇಬ್ಬರ ಬಳಿ 4.7 ಕೋಟಿ ರುಗೂ ಅಧಿಕ ಮೊತ್ತದ ನಗದು ಹೊಸ ನೋಟು, ಏಳು ಕೆಜಿ ಆಭರಣ, ಲ್ಯಾಂಬೊರ್ಗಿನಿ ಕಾರು ಪತ್ತೆಯಾಗಿರುವುದು ಹಾಗೂ ಜಪ್ತಿ ಮಾಡಿರುವುದನ್ನು ಐಟಿ ಅಧಿಕಾರಿಗಳು ದೃಢಪಡಿಸಿದ್ದಾರೆ.

ಅಷ್ಟೇ ಅಲ್ಲದೆ ಬಂಧಿತರಿಂದ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನೂ ಸಹ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

English summary
A raid on two individuals at Bengaluru has led to a major seizure of up to Rs 4 crore in cash which were largely new notes. The raids are said to have taken place at the homes of two senior bureaucrats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X