ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಮೇಶ್ವರ ಮನೆ ಮೇಲೆ ಐಟಿ ದಾಳಿ; ಇಡಿ ಅಧಿಕಾರಿಗಳ ಆಗಮನ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 14 : ಆದಾಯ ತೆರಿಗೆ ಇಲಾಖೆ ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮನೆ ಮೇಲೆ ದಾಳಿ ಮಾಡಿತ್ತು. ದಾಳಿಯ ಕುರಿತು ಮಾಹಿತಿ ಪಡೆಯಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಮಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

Recommended Video

G Parameshwara House Raided 4Crores In Cash Recovered | Oneindia Kannada

ಪರಮೇಶ್ವರ ಮನೆ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಹಣ ಮತ್ತು ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ದಾಳಿಯ ಕುರಿತು ಇಡಿ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದರು. ಆದ್ದರಿಂದ, ಐಟಿ ಕಚೇರಿಗೆ ಅಧಿಕಾರಿಗಳು ಆಗಮಿಸಿದ್ದಾರೆ.

ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಸೂಕ್ತ ದಾಖಲೆ ಒದಗಿಸುವೆ: ಜಿ ಪರಮೇಶ್ವರಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಸೂಕ್ತ ದಾಖಲೆ ಒದಗಿಸುವೆ: ಜಿ ಪರಮೇಶ್ವರ

IT Raid On G Parameshwara House ED Visits IT Office

ಪರಮೇಶ್ವರ ಮನೆಯಲ್ಲಿ ದಾಳಿಯ ವೇಳೆ ಸುಮಾರು 70 ಲಕ್ಷ ರೂ. ನಗದು ಪತ್ತೆಯಾಗಿದೆ. ಪತ್ತೆಯಾದ ಹಣಕ್ಕೆ ದಾಖಲೆಗಳು ಸಿಗದಿದ್ದರೆ ಇಡಿ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡು ತನಿಖೆ ನಡೆಸಲು ಅವಕಾಶವಿದೆ.

ಪರಮೇಶ್ವರ ಒಡೆತನದ ಶಿಕ್ಷಣ ಸಂಸ್ಥೆ ಮೇಲೆ ಐಟಿ ದಾಳಿ ಏಕೆ? ಪರಮೇಶ್ವರ ಒಡೆತನದ ಶಿಕ್ಷಣ ಸಂಸ್ಥೆ ಮೇಲೆ ಐಟಿ ದಾಳಿ ಏಕೆ?

ಡಾ. ಜಿ. ಪರಮೇಶ್ವರ ಬೆಂಗಳೂರಿನ ಸದಾಶಿವನಗರದ ನಿವಾಸ, ತುಮಕೂರಿನ ಸಿದ್ದಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೇಲೆ ಐಟಿ ದಾಳಿ ನಡೆದಿತ್ತು. ಎರಡೂ ಕಡೆ ದಾಳಿ ವೇಳೆ ಹಣ ಪತ್ತೆಯಾಗಿದೆ. ಈ ಹಣಕ್ಕೆ ದಾಖಲೆ ಇಲ್ಲವಾದಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲು ಮಾಡಿಕೊಳ್ಳಲಿದೆ.

ಜಿ. ಪರಮೇಶ್ವರ ಮಂಗಳವಾರ ಬೆಂಗಳೂರಿನಲ್ಲಿರುವ ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಪರಮೇಶ್ವರ ಆಪ್ತರ ಮನೆ ಮೇಲೆಯೂ ದಾಳಿ ನಡೆದಿತ್ತು. ಎಲ್ಲರಿಗೂ ವಿಚಾರಣೆಗೆ ಆಗಮಿಸುವಂತೆ ಐಟಿ ನೋಟಿಸ್ ನೀಡಿದೆ.

English summary
Enforcement directorate visits Bengaluru IT office. IT conducted raid on former minister G. Parameshwara house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X