ಆಟೋ ಚಾಲಕನ ಮನೆ ಮೇಲೆ ದಾಳಿ : ವಿದೇಶಿ ಮಹಿಳೆಗೆ ಐಟಿ ಕರೆ!

ಬೆಂಗಳೂರು, ಮೇ 05 : ಬೆಂಗಳೂರಿನಲ್ಲಿ ಆಟೋ ಚಾಲಕ ಸುಬ್ರಮಣಿ ಮನೆ ಮೇಲೆ ನಡೆದ ಐಟಿ ದಾಳಿ ಪ್ರಕರಣಕ್ಕೆ ತಿರುವು ಸಿಕ್ಕಿದೆ. ವಿದೇಶಿ ಮಹಿಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಜೊತೆ ಈ ಕುರಿತು ಮಾತುಕತೆ ನಡೆಸಿದ್ದಾರೆ.

ಏಪ್ರಿಲ್ 16ರಂದು ವೈಟ್ ಫೀಲ್ಡ್‌ ಪ್ರದೇಶದಲ್ಲಿರುವ 'ದ್ವಾರಕಮಾಯಿ' ಹೆಸರಿನ ವಿಲ್ಲಾ ಮೇಲೆ ಐಟಿ ದಾಳಿ ನಡೆಸಲಾಗಿತ್ತು. ಈ ವಿಲ್ಲಾ ಆಟೋ ಚಾಲಕ ಸುಬ್ರಮಣಿ ಅವರಿಗೆ ಸೇರಿದ್ದಾಗಿತ್ತು. ಆಟೋ ಚಾಲಕ ಸುಮಾರು 1.6 ಕೋಟಿ ಮೌಲ್ಯದ ವಿಲ್ಲಾ ಖರೀದಿ ಮಾಡಿದ್ದು ಹೇಗೆ? ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು.

ಐಟಿ ಅಧಿಕಾರಿಗಳು ದಾಳಿಯ ಬಳಿಕ ಸುಬ್ರಮಣಿ ವಿರುದ್ಧ ಬೇನಾಮಿ ಆಸ್ತಿ ವರ್ಗಾವಣೆಗಳ ಕಾಯ್ದೆ 1988ರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಸುಬ್ರಮಣಿ ವಿಚಾರಣೆ ನಡೆಸುವ ವೇಳೆ ವಿದೇಶಿ ಮಹಿಳೆ ನಂಟಿನ ಬಗ್ಗೆ ವಿಷಯ ಬಹಿರಂಗವಾಗಿತ್ತು.

'ದ್ವಾರಕಮಾಯಿ' ಹೆಸರಿನ ವಿಲ್ಲಾ ಖರೀದಿ ಮಾಡಲು ವಿದೇಶಿ ಮಹಿಳೆ ನೆರವು ನೀಡಿದ್ದಳು ಎಂದು ಸುಬ್ರಮಣಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದ. ಆದ್ದರಿಂದ, ಐಟಿ ಅಧಿಕಾರಿಗಳು ಮಹಿಳೆಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಹೇಳಿಕೆ ಪಡೆದಿದ್ದಾರೆ...

ವಿದೇಶಿ ಮಹಿಳೆಗೆ ಕರೆ

ವಿದೇಶಿ ಮಹಿಳೆಗೆ ಕರೆ

ಆಟೋ ಚಾಲಕ ಸುಬ್ರಮಣಿ ಬಳಿ ನಂಬರ್ ಪಡೆದ ಐಟಿ ಇಲಾಖೆ ಅಧಿಕಾರಿಗಳು ವಿದೇಶಿ ಮಹಿಳೆ ಲಾರಾಗೆ ಕರೆ ಮಾಡಿ ಸುಬ್ರಮಣಿ ಬಗ್ಗೆ ಮಾಹಿತಿ ನೀಡಿದ್ದರು. ವೈಟ್‌ಫೀಲ್ಡ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಸುಬ್ರಮಣಿ ಪರಿಚಯವಾಗಿತ್ತು. ಪ್ರತಿನಿತ್ಯ ಕಚೇರಿಗೆ ಆತನೇ ಕರೆದುಕೊಂಡು ಹೋಗುತ್ತಿದ್ದ, ವಾಪಸ್ ಡ್ರಾಪ್ ಮಾಡುತ್ತಿದ್ದ ಎಂದು ಲಾರಾ ಹೇಳಿಕೆ ನೀಡಿದ್ದಾಳೆ.

ವಿಲ್ಲಾ ಖರೀದಿಗೆ ಹಣ ನೀಡಿದ್ದೆ

ವಿಲ್ಲಾ ಖರೀದಿಗೆ ಹಣ ನೀಡಿದ್ದೆ

ವಿದೇಶಿ ಮಹಿಳೆ ಲಾರಾ ಆಟೋ ಚಾಲಕ ಸುಬ್ರಮಣಿ 'ದ್ವಾರಕಮಾಯಿ' ಹೆಸರಿನ ವಿಲ್ಲಾ ಖರೀದಿ ಮಾಡಲು ಹಣ ನೀಡಿದ್ದೆ. ನಿಮಗೆ ಈ ಬಗ್ಗೆ ಯಾವುದೇ ಮಾಹಿತಿ ಬೇಕಾದರೂ ನೀಡಲು ಸಿದ್ಧ ಎಂದು ಹೇಳಿಕೆ ಕೊಟ್ಟಿದ್ದಾಳೆ.

ಮಕ್ಕಳ ಶಿಕ್ಷಣಕ್ಕೂ ಸಹಾಯ

ಮಕ್ಕಳ ಶಿಕ್ಷಣಕ್ಕೂ ಸಹಾಯ

ಆಟೋ ಚಾಲಕ ಸುಬ್ರಮಣಿ ಮನೆ ಖರೀದಿ ಮಾತ್ರವಲ್ಲ. ಮಕ್ಕಳ ಶಿಕ್ಷಣಕ್ಕೂ ಸಹಾಯ ಮಾಡಿರುವುದಾಗಿ ಲಾರಾ ಹೇಳಿಕೆ ನೀಡಿದ್ದಾಳೆ. ಐಟಿ ಅಧಿಕಾರಿಗಳು ದೂರವಾಣಿ ಕರೆಯ ಮೂಲಕವೇ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ.

ವಿಲ್ಲಾ ಖರೀದಿ ದಾಖಲೆ ಹಸ್ತಾಂತರ

ವಿಲ್ಲಾ ಖರೀದಿ ದಾಖಲೆ ಹಸ್ತಾಂತರ

'ದ್ವಾರಕಮಾಯಿ' ಹೆಸರಿನ ವಿಲ್ಲಾ ಖರೀದಿ ಮಾಡಿದ ಬಗ್ಗೆ ಆಟೋ ಚಾಲಕ ಸುಬ್ರಮಣಿ ಐಟಿ ಅಧಿಕಾರಿಗಳಿಗೆ ದಾಖಲೆ ಹಸ್ತಾಂತರ ಮಾಡಿದ್ದಾನೆ. ವಿಲ್ಲಾ ಖರೀದಿ ಬಗ್ಗೆ ನಗರದ ಬಿಲ್ಡರ್ ವೊಬ್ಬರಿಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+