Get Updates
Get notified of breaking news, exclusive insights, and must-see stories!

Bengaluru PG: ಬೆಂಗಳೂರಿನ ಪಿಜಿಗಳಿಗೆ ಶಾಕ್‌ ಕೊಟ್ಟ ಐಟಿ ಉದ್ಯೋಗಿಗಳು

ಲಕ್ಷಾಂತರ ಮಂದಿಗೆ ವಾಸ್ತವ್ಯದ ಸೇವೆ ನೀಡುತ್ತಿರುವ ಬೆಂಗಳೂರಿನ ಪೇಯಿಂಗ್‌ ಗೆಸ್ಟ್‌ಗಳಿಗೆ (ಪಿಜಿ) ಇದೀಗ ಸಂಕಷ್ಟ ಎದುರಾಗಿದೆ ಎಂದು ವರದಿಯಾಗಿದೆ. ಮೊದಲೆಲ್ಲ ತುಂಬಿ ತುಳುಕಾಡುತ್ತಿದ್ದ ನಗರದ ಪಿಜಿಗಳು ಇತ್ತೀಚೆಗೆ ಖಾಲಿ ಖಾಲಿ ಹೊಡೆಯುತ್ತಿವೆ. ಉದ್ಯೋಗಿಗಳಿಗೆ ವರ್ಷಗಳ ಕಾಲ ಮನೆಯಂತಿದ್ದ ಪಿಜಿಗಳು ಇದೀಗ ಬಿಕೋ ಎನ್ನುತ್ತಿವೆ. ಇದು ಕ್ರಮೇಣ ಹೊಸ ಪಿಜಿಗಳನ್ನು ತೆರೆಯಬೇಕು ಎಂದುಕೊಂಡಿದ್ದವರಿಗೂ ದೊಡ್ಡ ಆಘಾತ ನೀಡಿದೆ. ಇಷ್ಟಕ್ಕೂ ದಿಢೀರನೆ ಪಿಜಿಗಳು ಖಾಲಿ ಹೊಡೆಯಲು ಕಾರಣ ಏನು ಗೊತ್ತಾ?

ಸಾಮಾನ್ಯವಾಗಿ ಬೇರೆ ಭಾಗಗಳಿಂದ ಬೆಂಗಳೂರಿಗೆ ಬಂದಿರುವ ಉದ್ಯೋಗಿಗಳು ಪಿಜಿಗಳಲ್ಲೇ ಹೆಚ್ಚಾಗಿ ಉಳಿದುಕೊಳ್ಳುತ್ತಿದ್ದರು. ಇಲ್ಲಿನ ಕಂಪನಿಗಳಲ್ಲಿ ಕೈತುಂಬಾ ಕೆಲಸ ಮಾಡಿಕೊಂಡು ಪಿಜಿಗಳಲ್ಲೇ ನೆಮ್ಮದಿಯಾಗಿ ವರ್ಷಗಳನ್ನು ಕಳೆಯುತ್ತಿದ್ದರು. ಎಷ್ಟೋ ಮಂದಿಯ ಪಾಲಿಗೆ ಪಿಜಿಗಳೇ ತವರು ಮನೆಯೂ ಆಗಿತ್ತು. ಆದರೆ ಕಳೆದ ಒಂದು ವರ್ಷದಿಂದ ಬೆಂಗಳೂರಿನ ಪಿಜಿಗಳನ್ನು ಆಶ್ರಯಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಪಿಜಿಗಳು ಕೂಡ ನಷ್ಟದ ಹಾದಿಯಲ್ಲಿ ಸಾಗಿವೆಯಂತೆ.

IT Job Layoffs In Bengaluru Impact PG Business Real Estate And Property Price

ವರದಿಗಳ ಪ್ರಕಾರ ಬೆಂಗಳೂರಿನಲ್ಲಿ ಲಕ್ಷಾಂತರ ಕಂಪನಿಗಳಿವೆ. ಇಲ್ಲಿನ ಉದ್ಯೋಗಿಗಳ ಸಂಖ್ಯೆ ಕೋಟಿಗೂ ದಾಟಿದೆ. ಇತ್ತೀಚಿನ ವರ್ಷಗಳಲ್ಲಿ ಉದ್ಯೋಗ ಕಡಿತ (Layoff) ಹೆಚ್ಚಾದ ಕಾರಣ ಉದ್ಯೋಗಿಗಳ ಕನಸು ನುಚ್ಚು ನೂರಾಗಿದೆ. ಮತ್ತೊಂದು ಕೆಲಸದ ಅಭದ್ರತೆಯಲ್ಲೇ ಹಲವರು ಆರ್ಥಿಕ ಸಂಕಷ್ಟದಲ್ಲಿಯೂ ಸಿಲುಕಿದ್ದಾರೆ ಎನ್ನಲಾಗಿದೆ. ಕಂಪನಿಗಳು ದಿಢೀರನೆ ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಇದು ಪಿಜಿ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ.

Take a Poll

ಹೆಚ್ಚಾಗಿ ಟೆಕ್‌ ಕೆಲಸಗಳಿಂದ ಉದ್ಯೋಗಿಗಳು ವಜಾಗೊಳ್ಳುತ್ತಿದ್ದಾರೆ. ಇದರಿಂದ ಪಿಜಿ ವಸತಿ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಉಂಟಾಗುತ್ತಿದೆ. ಅಮೆಜಾನ್‌ನಂತಹ ಕಂಪನಿಗಳು ನೂರಾರು ಸಂಖ್ಯೆಯ ಉದ್ಯೋಗ ಕಡಿತ ಮಾಡುತ್ತಿರುವ ಹಿನ್ನೆಲೆ ನಗರದಲ್ಲಿ ಬಾಡಿಗೆ ಬೇಡಿಕೆ ಕೂಡ ಕುಸಿಯುತ್ತಿದೆ. ಕ್ರಮೇಣ ಇದು ಆಸ್ತಿ ಮಾಲೀಕರು ಮತ್ತು ಹೂಡಿಕೆದಾರರ ಮೇಲೆ ಪರಿಣಾಮ ಬೀರುತ್ತಿದೆ.

IT Job Layoffs In Bengaluru Impact PG Business Real Estate And Property Price

ಈಗಿನ ಉದ್ಯೋಗ ಬಿಕ್ಕಟ್ಟಿನಿಂದಾಗಿ ವಿಶೇಷವಾಗಿ ನಗರದ ಔಟರ್ ರಿಂಗ್ ರೋಡ್‌ ಅಕ್ಕಪಕ್ಕದ ಏರಿಯಾಗಳಲ್ಲಿ ಖಾಲಿ ಇರುವ ಬಾಡಿಗೆ ಆಸ್ತಿಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಆಸ್ತಿ ಬೆಲೆಗಳು ಕೂಡ ಕ್ಷೀಣಿಸುತ್ತಿವೆ. ಮೊದಲೆಲ್ಲ ಐಟಿ ಉದ್ಯೋಗಿಗಳಿಂದಲೇ ತುಂಬಿ ತುಳುಕಾಡುತ್ತಿದ್ದ ಪಿಜಿ ವಸತಿ ಸೌಕರ್ಯಗಳು ಈಗ ಬಾಡಿಗೆದಾರರನ್ನು ಹುಡುಕಲು ಹೆಣಗಾಡುತ್ತಿವೆ. ಈ ಪರಿಸ್ಥಿತಿಯಿಂದಾಗಿ ನಗರದ ಪಿಜಿ ಮಾಲೀಕರು ಮತ್ತು ರಿಯಲ್ ಎಸ್ಟೇಟ್ ಹೂಡಿಕೆದಾರರು ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.

IT Job Layoffs In Bengaluru Impact PG Business Real Estate And Property Price

ಅಮೆಜಾನ್ ಸಂಸ್ಥೆಯೇ ಇತ್ತೀಚೆಗೆ ಸುಮಾರು 14,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ನಿರ್ಧಾರ ತೆಗೆದುಕೊಂಡಿದೆ. ಕಳೆದ ನವೆಂಬರ್‌ನಲ್ಲಿ ಒಂದು ಸುತ್ತಿನ ಉದ್ಯೋಗ ಕಡಿತ ನಡೆದಿದ್ದರೂ ಇದೀಗ ಮತ್ತೆ ಉದ್ಯೋಗಿಗಳಿಗೆ ಶಾಕ್‌ ನೀಡಿದೆ. ಸದ್ಯ ಅಲ್ಲಿಯೇ 18,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಯಿತು. ವೆಚ್ಚ ಕಡಿತದ ನೆಪದಲ್ಲಿ ನಡೆಯುತ್ತಿರುವ ಲೇಆಫ್‌ಗಳು ಬೆಂಗಳೂರಿನ ಬಾಡಿಗೆ ಮಾರುಕಟ್ಟೆಯ ಮೇಲೆ ತೀವ್ರ ಸ್ವರೂಪದ ಪರಿಣಾಮ ಬೀರಿವೆ. ಏಕೆಂದರೆ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಕೈಗೆಟುಕುವ ದರದಲ್ಲಿ ಪಿಜಿ ಅಥವಾ ಬಾಡಿಗೆ ಅಪಾರ್ಟ್‌ಮೆಂಟ್‌ಗಳನ್ನೇ ಅವಲಂಬಿಸಿದ್ದರು. ಇದರಿಂದ ಪಿಜಿ ಉದ್ಯಮ ಮಾತ್ರವಲ್ಲ, ರಿಯಲ್‌ ಎಸ್ಟೇಟ್‌ ಕೂಡ ನೆಲಕಚ್ಚಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+