ಶೀಘ್ರವೇ ಐಟಿ ವಲಯದಲ್ಲಿ 2 ಲಕ್ಷ ಉದ್ಯೋಗ ಸೃಷ್ಟಿ

ಬೆಂಗಳೂರು, ನವೆಂಬರ್ 20; ವಿವಿಧ ಕಂಪನಿಗಳ ಉದ್ಯೋಗ ಕಡಿತದ ಸುದ್ದಿಯ ನಡುವೆ ಸಮಾಧಾನಕರವಾದ ಸುದ್ದಿಯೊಂದು ಬಂದಿದೆ. ಕೆಲವೇ ದಿನಗಳಲ್ಲಿ ಐಟಿ ಉದ್ಯಮ 2 ಲಕ್ಷ ಉದ್ಯೋಗಿಗಳ ನೇಮಕಾತಿ ಮಾಡಿಕೊಳ್ಳಲಿದೆ.

ಇನ್ಪೋಸಿಸ್‌ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಈ ಕುರಿತು ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಟೆಕ್ ಸಮಿಟ್ 2022ರಲ್ಲಿ ಬುಧವಾರ ಅವರು ಮಾತನಾಡಿದರು. ಆಗ ಹಲವಾರು ಅಂಶಗಳನ್ನು ಹಂಚಿಕೊಂಡರು.

ಕೋವಿಡ್ ಪರಿಸ್ಥಿತಿಯ ಬಳಿಕ ಐಟಿ ಉದ್ಯಮ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಉದ್ಯೋಗಿಗಳು ಕಚೇರಿಗೆ ಮರಳುವುದು, ಮೂನ್ ಲೈಟಿಂಗ್ ಸೇರಿದಂತೆ ಅನೇಕ ಸವಾಲುಗಳಿವೆ ಎಂದು ವಿವರಿಸಿದರು.

IT Industry Will Recruit Two Lakh People Says Kris Gopalakrishnan

ಸಾಂಕ್ರಾಮಿಕದ ಸಮಯದಲ್ಲಿ ಡಿಜಿಟಲೀಕರಣ ವೇಗಗೊಂಡಿದೆ. ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಯಾವುದೇ ಅಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿವೆ ಎಂದರು.

ಭಾರತೀಯ ಐಟಿ ಸೇವೆಗಳ ಜಾಗತಿಕ ವ್ಯವಹಾರಗಳು ಅಂತರರಾಷ್ಟ್ರೀಯ ಕಂಪನಿಗಳ ನಂಬಿಕೆಯನ್ನು ಹೆಚ್ಚಿಸಿವೆ. ಐಟಿ ಉದ್ಯಮ ಹಲವಾರು ಸವಾಲುಗಳನ್ನು ಎದುರಿಸುತ್ತಿವೆ. ಆದರೆ ಅವುಗಳನ್ನು ಸಮರ್ಥವಾಗಿ ಎದುರಿಸು ಮುಂದೆ ಸಾಗಲಿವೆ ಎಂದು ಹೇಳಿದರು.

ಹಲವಾರು ಸವಾಲುಗಳ ನಡುವೆಯೇ ಐಟಿ ಉದ್ಯಮವು ಶೀಘ್ರವೇ ಕನಿಷ್ಠ 2 ಲಕ್ಷ ಜನರ ನೇಮಕಾತಿ ಮಾಡಿಕೊಳ್ಳಲಿದೆ. ಈ ಉದ್ಯಮವು ಜಾಗತಿಕವಾಗಿ ಬೆಳೆಯುತ್ತಿದೆ ಮತ್ತು ಮುಂದಿನ ಹಲವು ವರ್ಷಗಳ ಕಾಲ ಉದ್ಯಮದಲ್ಲಿ ಹೂಡಿಕೆ ಆಗಲಿದೆ ಎಂದು ಕ್ರಿಸ್ ಗೋಪಾಲಕೃಷ್ಣನ್ ತಿಳಿಸಿದರು.

ಉದ್ಯಮದಲ್ಲಿ ಕೆಲವು ಏಳು-ಬೀಳುಗಳು ಆಗುತ್ತಿವೆ. ಆದರೆ ಇವೆಲ್ಲವೂ ತಾತ್ಕಾಲಿಕವಾಗಿದೆ. ಐಟಿ ವಲಯ ಇಂದು ಡೇಟಾ ಸುರಕ್ಷತೆ ಮತ್ತು ಖಾಸಗಿ ಮಾಹಿತಿ ಸೋರಿಕೆ ಅಂಶಗಳತ್ತ ಗಮನಹರಿಸಬೇಕು. ಮುಂದಿನ 25 ವರ್ಷಗಳ ಐಟಿ ಉದ್ಯಮ ಹಿಂದಿನ 25 ವರ್ಷಕ್ಕಿಂತ ಉನ್ನತ ಮಟ್ಟದಲ್ಲಿ ಇರಲಿದೆ ಎಂದರು.

ಉದ್ಯಮವು ಡೇಟಾ ರಕ್ಷಣೆ ಮತ್ತು ಗೌಪ್ಯತೆ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕರು ಹೇಳಿದ್ದಾರೆ. ''ಇದು ಐಟಿ ಉದ್ಯಮಕ್ಕೆ ಬಹಳ ರೋಚಕ ಅವಧಿ. ಮುಂದಿನ 25 ವರ್ಷಗಳು ಕಳೆದ 25 ವರ್ಷಗಳಿಗಿಂತ ಉತ್ತಮವಾಗಿರುತ್ತವೆ ಎಂದು ನಾನು ನಂಬುತ್ತೇನೆ ಎಂದು ಆಕ್ಸಿಲರ್ ವೆಂಚರ್ಸ್ ಅಧ್ಯಕ್ಷ ಗೋಪಾಲಕೃಷ್ಣನ್ ಹೇಳಿದ್ದಾರೆ.

ಈ ಗೋಷ್ಠಿಗೂ ಮೊದಲು ಹೊಸ ತಂತ್ರಜ್ಞಾನಗಳ ಆವಿಷ್ಕಾರ ಮತ್ತು ಹೊಸ ಹೂಡಿಕೆಗಳ ಬಗ್ಗೆ ಚರ್ಚೆಗಳು ನಡೆದವು. ಐಟಿ ವಲಯದ ಹೂಡಿಕೆಗೆ ಸಂಬಂಧಿಸಿದಂತೆ ಭಾರತ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದು ಚರ್ಚಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+