ಐಟಿ ಕಂಪನಿಗಳು ಈ ಕಾರಣಕ್ಕೆ ಬೆಂಗಳೂರು ಬಿಡಲಿವೆ: ಮೆಟ್ರೋ ಫೋಟೋ ವೈರಲ್, ಬೆಂಗಳೂರಿಗರು ಹೇಳಿದ್ದೇನು ?
ಕರ್ನಾಟಕದಲ್ಲಿ ಕನ್ನಡ ಮಾತನಾಡಬೇಕು. ಕರ್ನಾಟಕದಲ್ಲಿದ್ದರೆ ಕನ್ನಡ ಕಲಿತುಕೊಳ್ಳಬೇಕು ಎಂದು ಹೇಳುತ್ತಿರುವುದು ಕೆಲವು ನಾರ್ಥಿಗಳಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ದಿನಕ್ಕೊಂದು ಕ್ಯಾತೆ ತೆಗೆಯುತ್ತಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು. ಮುಂದಿನ ದಿನಗಳಲ್ಲಿ ಐಟಿ ಕಂಪನಿಗಳು ಬೆಂಗಳೂರು ತೊರೆಯಲಿವೆ ಎಂದು ಹೇಳಲಾಗಿದೆ. ಇಷ್ಟಕ್ಕೂ ಕನ್ನಡಿಗರನ್ನು ಇವರು ಪದೇ ಪದೇ ಕೆಣಕುತ್ತಿರುವುದಕ್ಕೆ ಕಾರಣ ಮತ್ತದೇ ಭಾಷಾ ವಿವಾದ ಎನ್ನುವುದರಲ್ಲಿ ಅನುಮಾನವಿಲ್ಲ. ಹಿಂದಿ ಶ್ರೇಷ್ಠತೆಯ ವ್ಯಸನಕ್ಕೆ ಒಳಗಾಗಿರುವ ಕೆಲವರು ದಿನಕ್ಕೊಂದು ವಿವಾದಗಳನ್ನು ಹುಡುಕಿಕೊಂಡು ಬರುತ್ತಿದ್ದಾರೆ.
ನನ್ನ ಮಕ್ಕಳು ಭವಿಷ್ಯದಲ್ಲಿ "ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಿಂದ ಏಕೆ ಸ್ಥಳಾಂತರಗೊಂಡವು?" ಎಂದು ಕೇಳಿದಾಗ, ನಾನು ಅವರಿಗೆ ಇದನ್ನು ತೋರಿಸುತ್ತೇನೆ ಎನ್ನುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು ನಮ್ಮ ಮೆಟ್ರೋದಲ್ಲಿನ ಸೇವೆಯ ಫೋಟೋ ಪೋಸ್ಟ್‌ವೊಂದನ್ನು Paakittadnya ಎನ್ನುವ ಹಿಂದಿ ಖಾತೆಯಿಂದ ಹಂಚಿಕೊಳ್ಳಲಾಗಿದ್ದು. ಅದರಲ್ಲಿ ಈ ರೀತಿ ಬರೆದುಕೊಳ್ಳಲಾಗಿದೆ. ಈ ವಿಚಾರವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಬೆಂಗಳೂರು ಮೆಟ್ರೋ ಕೌಂಟರ್‌ನಲ್ಲಿ ಬರೆದಿರುವುದು ಏನು ಅಂತ ನೋಡೋಣ.

ನಮ್ಮ ಮೆಟ್ರೋದ ಟಿಕೆಟ್ ಕೌಂಟರ್‌ನಲ್ಲಿ ಬಿಎಂಆರ್‌ಸಿಎಲ್ ಕನ್ನಡ ಸಂಘದಿಂದ "ದಯವಿಟ್ಟು ಕನ್ನಡದಲ್ಲಿ ಮಾತನಾಡಿ" ಎಂದು ಬರೆಯಲಾಗಿದೆ. ಅಲ್ಲದೇ ಇದೇ ವಾಕ್ಯವನ್ನು ಇಂಗ್ಲಿಷ್‌ನಲ್ಲಿಯೂ ಬರೆಯಲಾಗಿದೆ. ಇದನ್ನು ಹಂಚಿಕೊಂಡಿರುವ ವ್ಯಕ್ತಿ, ಈ ಕಾರಣಕ್ಕೆ ಬೆಂಗಳೂರಿನಿಂದ ಐಟಿ ಕಂಪನಿಗಳು ಸ್ಥಳಾಂತರಗೊಳ್ಳಲಿವೆ ಎಂದು ಬರೆದುಕೊಂಡಿದ್ದಾನೆ. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಅಲ್ಲದೇ ಮುಂದುವರಿದು ಕಮೆಂಟ್‌ನಲ್ಲಿ ಕೆಲವು ಕಂಪನಿಗಳು ಬೆಂಗಳೂರಿನಿಂದ ಹೈದರಾಬಾದ್‌ಗೆ ಯಾಕೆ ಸ್ಥಳಾಂತರಗೊಳ್ಳುತ್ತಿವೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಕಮೆಂಟ್ ಮಾಡಿದ್ದು. ಇದಕ್ಕೆ ಇದು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಜಾಗತಿಕ ಕೇಂದ್ರವಾಗಲು ಸ್ಪರ್ಧಿಸುತ್ತಿರುವ ನಗರಕ್ಕೆ ಇಂತಹ ಅಸಂಬದ್ಧ ನಡೆಯು ಆತ್ಮಹತ್ಯೆಗೆ ಸಮಾನ ಎಂದು ಪೋಸ್ಟ್ ಮಾಡಿರುವ ವ್ಯಕ್ತಿ ಕಮೆಂಟ್ ಮಾಡಿದ್ದಾನೆ.
ಕನ್ನಡಿಗರಿಂದ ತರಾಟೆ: ಇನ್ನು ಈ ಪೋಸ್ಟ್‌ಗೆ ಕನ್ನಡಿಗರು ತರಾಟೆ ತೆಗೆದುಕೊಂಡಿದ್ದಾರೆ. ಈ ಬೋರ್ಡ್‌ನಲ್ಲಿ ಕನ್ನಡದಲ್ಲಿ ಮಾತನಾಡಿ ಅಂತ ಹಾಕಲಾಗಿದೆ. ಇದು ಬೆಂಗಳೂರು. ಬೆಂಗಳೂರಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದಿದ್ದಾರೆ. ಶೈಲೇಶ್ ಕೆಂಪೇಗೌಡ ಎನ್ನುವವರು, ನೀವು ಇದನ್ನು ಟೈಪ್ ಮಾಡುತ್ತಿರುವಾಗ ಯುರೋಪ್ ಸೆಮಿಕಂಡಕ್ಟರ್ ಕಂಪನಿಗಳು $2 ಬಿಲಿಯನ್ ಹೂಡಿಕೆ ಮಾಡಲು ಒಪ್ಪಂದಕ್ಕೆ ಸಹಿ ಹಾಕಿವೆ. ಹೊಸ GCC ಭಾರತದಲ್ಲಿ ಸ್ಟಾರ್ಟ್ಅಪ್ ಯೂನಿಕಾರ್ನ್‌ಗಳನ್ನು ತೆರೆಯುತ್ತಿವೆ ಮತ್ತು ಅಗ್ರಸ್ಥಾನದಲ್ಲಿವೆ ಎಂದಿದ್ದಾರೆ.
When my children ask me in the future,"Why did IT and Electronics MNCs move out of Bengaluru?", I will show them this. pic.twitter.com/vZCVDVBCQE
— पाकीट तज्ञ (@paakittadnya) June 23, 2025
ಇನ್ನು ಇದರಲ್ಲಿ ರಾಜಕೀಯ ಚರ್ಚೆಯನ್ನೂ ಸೇರಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಒಡೆದು ಆಳುವ ನೀತಿಯನ್ನು ಮುಂದುವರಿಸಿದೆ. ಭಾಷಾ ವಿಚಾರದಲ್ಲಿ ಒಡೆದು ಆಳುವ ನೀತಿ ಅನುಸರಿಸಲಾಗುತ್ತಿದೆ ಎಂದೂ ಆರೋಪಿಸಲಾಗಿದೆ.
ಹೂಡಿಕೆ ಹೆಚ್ಚಾಗುತ್ತಿದೆ: ಇನ್ನು ಇದಕ್ಕೆ ರಿಪ್ಲೈ ಮಾಡಿರುವ ಕನ್ನಡಿಗರು ಈ ನಾರ್ಥಿಗಳು ಈ ರೀತಿ ಆರೋಪ, ವ್ಯಂಗ್ಯವಾಡುತ್ತಲ್ಲೇ ಇರಲಿ. ನಾವು ಅಭಿವೃದ್ಧಿಯಲ್ಲಿ ಮುಂದೆ ಸಾಗುತ್ತಲ್ಲೇ ಇದ್ದೇವೆ. ನಮ್ಮಲ್ಲಿ ಡೆನ್ಮಾರ್ಕ್ ಸೇರಿದಂತೆ ವಿವಿಧ ದೇಶಗಳಿಂದ ಹೂಡಿಕೆ ಹೆಚ್ಚಾಗುತ್ತಿದೆ. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮಹತ್ವದ ಹೂಡಿಕೆಯಾಗಿದೆ ಎಂದು ಕೆಲವರು ರಿಪ್ಲೈ ಮಾಡಿದ್ದಾರೆ.












Click it and Unblock the Notifications