ಪವಿತ್ರಾ ಗೌಡ ಜೊತೆ ಜೈಲುಪಾಲು: ನಟ ದರ್ಶನ್‌ಗೆ ವಿಜಯಲಕ್ಷ್ಮಿ ಡಿವೋರ್ಸ್..?
ಬೆಂಗಳೂರು, ಜೂನ್ 12: ಪ್ರೇಯಸಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಎನ್ನುವ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎನ್ನುವಾತನ ಕೊಲೆಗೆ ಕಾರಣವಾದ ಆರೋಪದ ಮೇಲೆ ನಟ ದರ್ಶನ್‌ನನ್ನು ಬಂಧಿಸಲಾಗಿದೆ. ಜೊತೆಗೆ ಪ್ರೇಯಸಿ ಪವಿತ್ರಾ ಗೌಡರನ್ನು ಕೂಡ ಬಂಧಿಸಲಾಗಿದೆ. ಪ್ರಕರಣ ಸಂಬಂಧ ಒಟ್ಟು 13 ಮಂದಿಯನ್ನು ಪೊಲೀಸರು ಬಂಧಿಸಿದ್ದು, 6 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ನಟ ದರ್ಶನ್ ಬಂಧನ ಅಭಿಮಾನಿಗಳಿಗೆ ಶಾಕ್ ನೀಡಿದ್ದು, ಈಗ ಮತ್ತೊಂದು ಆಘಾತಕಾರಿ ವಿಚಾರ ವೈರಲ್ ಆಗುತ್ತಿದೆ. ಪವಿತ್ರ ಗೌಡ ವಿಚಾರಕ್ಕೆ ನಡೆದ ಕೊಲೆ ಪ್ರಕರಣದಲ್ಲಿ ಬಂಧನ ಬೆನ್ನಲೇ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಈಗಾಗಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ದರ್ಶನ್ ಅವರನ್ನು ಅನ್‍ಫಾಲೋ ಮಾಡಿದ್ದಾರೆ. ಅಲ್ಲದೇ ತಾವು ಫಾಲೋ ಮಾಡುತ್ತಿದ್ದ ಎಲ್ಲರನ್ನೂ ಅನ್‍ಫಾಲೋ ಮಾಡಿದ್ದಾರೆ. ಜೊತೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಡಿಪಿಯನ್ನು ಕೂಡ ಡಿಲೀಟ್ ಮಾಡಿದ್ದಾರೆ. ಈ ಮೂಲಕ ವಿಜಯಲಕ್ಷ್ಮಿ ಮೌನಕ್ಕೆ ಶರಣಾಗಿದ್ದಾರೆ. ಪವಿತ್ರಾ ಗೌಡ ವಿಚಾರದಲ್ಲಿ ದರ್ಶನ್ ಎಡವಟ್ಟುಗಳನ್ನು ಸಹಿಸಿಕೊಂಡು ಬರುತ್ತಿದ್ದ ವಿಜಯಲಕ್ಷ್ಮಿ ಈ ಬಾರಿ ಪತಿಯಿಂದ ದೂರಾಗುವ ನಿರ್ಧಾರಕ್ಕೆ ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ.
ಹೆಂಡತಿ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದ ದರ್ಶನ್
ನಟ ದರ್ಶನ್ 2011ರಲ್ಲಿ ಹೆಂಡತಿ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸಿದ್ದರು. ಅಲ್ಲದೇ ಪತ್ನಿ ವಿಜಯಲಕ್ಷ್ಮೀ ನೀಡಿದ ದೂರಿನ ಮೇರೆಗೆ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲಿಗೂ ಹೋಗಿದ್ದರು. ಕೆಲ ದಿನಗಳು ಜೈಲಿನಲ್ಲಿದ್ದ ದರ್ಶನ್ ಅವರನ್ನು ಚಿತ್ರರಂಗದ ಹಿರಿಯರು ಹಾಗೂ ಕಾನೂನು ಸಲಹೆಗಾರರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ ನಡೆಸಿ ಬಿಡುಗಡೆಗೊಳಿಸಲಾಗಿತ್ತು.
ರಾಜಿ ಸಂಧಾನದ ಬಳಿಕ ವಿಜಯಲಕ್ಷ್ಮೀ ದೂರನ್ನು ವಾಪಸ್ ಪಡೆದಿದ್ದರು. ಈ ಘಟನೆ ನಡೆದು ಕೆಲವೇ ವರ್ಷಗಳಲ್ಲಿ ಅಂದರೆ 2016ರಲ್ಲಿ ಮತ್ತೆ ದರ್ಶನ್, ವಿಜಯಲಕ್ಷ್ಮೀ ಅವರ ಮೇಲೆ ಹಲ್ಲೆ ನಡೆಸಿದ ವಿಚಾರ ಸುದ್ದಿಯಾಗಿತ್ತು. ಈ ಪ್ರಕರಣವೂ ಕೂಡ ಪೊಲೀಸ್ ಠಾಣೆಯ ಮೆಟ್ಟಿಲೇರಿ ಕೊನೆಗೆ ರಾಜಿ ಸಂಧಾನದಲ್ಲಿ ಅಂತ್ಯವಾಗಿತ್ತು.

ಈ ಬಳಿಕ ದರ್ಶನ್-ವಿಜಯಲಕ್ಷ್ಮೀ ದಂಪತಿ ಮನಸ್ತಾಪ ಮರೆತು ಜೊತೆಯಾಗಿದ್ದು, ಎಲ್ಲೆಡೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಈ ನಡುವೆ ನಟಿ ಪವಿತ್ರ ಗೌಡ ಅವರೊಂದಿಗಿನ ದರ್ಶನ್ ಆಪ್ತತೆ, ವಿಜಯಲಕ್ಷ್ಮೀ ಅವರ ನೆಮ್ಮದಿ ಕೆಡಿಸುತ್ತಿತ್ತು. ದರ್ಶನ್ ಬಗ್ಗೆ ಪವಿತ್ರ ಗೌಡ ಒಲವು ವಿಜಯಲಕ್ಷ್ಮೀ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವಾರ್ ಕೂಡ ನಡೆದಿತ್ತು.
ಪವಿತ್ರಾ ಗೌಡ ಜೊತೆ ವಿಜಯಲಕ್ಷ್ಮಿ ಜಟಾಪಟಿ
ಇತ್ತೀಚಿಗಷ್ಟೆ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿಯೇ ವಿಜಯಲಕ್ಷ್ಮೀ- ಪವಿತ್ರಾ ಗೌಡ ಇಬ್ಬರ ನಡುವೆ ಜಟಾಪಟಿ ನಡೆದಿತ್ತು. ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡ ಪವಿತ್ರಾ ಗೌಡಗೆ ವಿಜಯಲಕ್ಷ್ಮಿ ನೇರವಾಗಿ ಎಚ್ಚರಿಕೆ ನೀಡಿ, ಅವರ ವೈಯಕ್ತಿಕ ಕೆಲವು ಫೋಟೋಗಳನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಬಳಿಕ ವಿಜಯಲಕ್ಷ್ಮಿ ಎಚ್ಚರಿಕೆಗೂ ಪವಿತ್ರಾ ಗೌಡ ತಿರುಗೇಟು ನೀಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ನಡುವೆ ಜಟಾಪಟಿ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ನಟನ ಎಚ್ಚರಿಕೆ ಬಳಿಕ ಇಬ್ಬರು ಕೂಡ ತಣ್ಣಗಾಗಿದ್ದರು. ಇದೀಗ ಮತ್ತೆ ಪವಿತ್ರ ಗೌಡ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾಗುವ ಸ್ಥಿತಿ ಬಂದಿದ್ದು, ಈ ಸಮಯದಲ್ಲಿ ವಿಜಯಲಕ್ಷ್ಮಿ, ದರ್ಶನ್ ವಿರುದ್ಧ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ದರ್ಶನ್ ಬಂಧನವಾಗಿ ಎರಡು ದಿನಗಳಾಗುತ್ತಿದ್ದು, ಪತ್ನಿ ವಿಜಯಲಕ್ಷಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ಸ್ಟಾಗ್ರಾಮ್‌ನಲ್ಲೂ ಮೌನಕ್ಕೆ ಶರಣಾಗಿರುವ ವಿಜಯಲಕ್ಷಿ, ದರ್ಶನ್ ವಿಚಾರವಾಗಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications