Train Travel: ವೃದ್ಧ ದಂಪತಿಗೆ ₹22000 ದಂಡ ವಿಧಿಸಿದಕ್ಕಾಗಿ ₹40,000 ಪರಿಹಾರ ತೆತ್ತ IRCTC

ಬೆಂಗಳೂರು, ಡಿಸೆಂಬರ್ 22: ಅತೀ ಕಡಿಮೆ ವೆಚ್ಚದಲ್ಲಿ ಮೂಲ ಸೌಕರ್ಯ ಸಹಿತ ಸಾರಿಗೆ ಸೇವೆ ನೀಡುತ್ತಿರುವ ರೈಲ್ವೆಯಲ್ಲಿ ಪ್ರಯಾಣಿಸಿದ್ದ ವೃದ್ಧ ದಂಪತಿಗೆ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು (IRCTC) ದಂಡ ವಿಧಿಸಿತ್ತು. ಈ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥ ಆಗಿದ್ದು, ಕೊನೆಗೆ ಆ ದಂಪತಿಗೇ ಸುಮಾರು 40,000 ಪರಿಹಾರ ನೀಡಬೇಕಾಗಿದೆ.

ಹೌದು, ಬೆಂಗಳೂರಿನ ವೃದ್ಧ ದಂಪತಿಗಳು ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅವರು ಎಸಿ ಪ್ರಥಮ ದರ್ಜೆ ಟಿಕೆಟ್ ಪರಿಶೀಲನಾಕಾರರಿಗೆ ತಮ್ಮ ಟಿಕೆಟ್ ದೃಢಪಡಿಸಿದರೂ ಸಹ ಟಿಸಿ ಅದನ್ನು ಒಪ್ಪಲಿಲ್ಲ. ಬದಲಾಗಿ ನೀವು ''ಟಿಕೆಟ್ ಇಲ್ಲದೇ'' ಪ್ರಯಾಣ ಮಾಡುತ್ತಿದ್ದೀರಿ ಎಂದು ಆ ದಂಪತಿಗಳಿಗೆ ಹಣಪಟ್ಟೆ ಕಟ್ಟಿದ್ದರು.

IRCTC Rs 22,000 fined to Elderly Couple travelling ticketless, Their son gets Rs 40000compensation

ಟಿಕೆಟ್ ರಹಿತ ಪ್ರಯಾಣ ಮಾಡಿದ್ದಕ್ಕೆ ದಂಡ ಕುಟ್ಟುವಂತೆ ಹೇಳಿದ್ದಾರೆ. ಜತೆಗೆ ಆ ವೃದ್ಧ ದಂಪತಿಗಳಿಗೆ ಒಟ್ಟು 22,000 ರೂ.ಗಿಂತಲೂ ಹೆಚ್ಚು ದಂಡವನ್ನು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದಿಂದ (IRCTC) ವಿಧಿಸಿದೆ. ಇದರಿಂದ ಆ ವೃದ್ಧ ದಂಪತಿಗಳು ಸಾಕಷ್ಟು ಮುಖಭಂಗ ಅನುಭವಿಸಬೇಕಾಯಿತು.

ರೈಲ್ವೆ ಅಧಿಕಾರಿಗಳ ವಿರುದ್ಧ ದಂಪತಿ ಪುತ್ರ ಕೋರ್ಟ್ ಮೊರೆ

ವೃದ್ಧ ದಂಪತಿಗಳ ಪುತ್ರ ವೈಟ್‌ಫೀಲ್ಡ್ ನಿವಾಸಿ ಅಲೋಕ್ ಕುಮಾರ್ ಅವರೇ ಐಆರ್‌ಸಿಟಿಸಿಯಲ್ಲಿ ಪೋಷಕರಿಗೆ ಟಿಕೆಟ್ ಬುಕ್ ಮಾಡಿದ್ದರು. ಹೀಗಾಗಿ ಅವರು ದಾಖಲೆಗಳ ಸಮೇತ ನೈಋತ್ಯ ರೈಲ್ವೆ (SWR) ಮತ್ತು IRCTC ಅಧಿಕಾರಿಗಳ ಮುಖ್ಯ ಬುಕಿಂಗ್ ಅಧಿಕಾರಿಗಳ ವಿರುದ್ಧ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದರು.

ಅಲೋಕ್ ಕುಮಾರ್ ಕಳೆದ 2022ರ ಮಾರ್ಚ್‌ನಲ್ಲಿ ಪ್ರಯಾಣಕ್ಕಾಗಿ ತಮ್ಮ 77 ಮತ್ತು 71 ವರ್ಷ ವಯಸ್ಸಿನ ತಮ್ಮ ಪೋಷಕರಿಗೆ ಐಆರ್‌ಸಿಟಿಸಿ ಪೋರ್ಟಲ್ ಬಳಸಿ ಎಸಿ ಪ್ರಥಮ ದರ್ಜೆ ಟಿಕೆಟ್ ಬುಕ್ ಮಾಡಿದ್ದರು. ಅದಕ್ಕಾಗಿ ಅವರು 6,995 ರೂ. ಖರ್ಚು ಮಾಡಿದ್ದರು.

22,300 ರೂಪಾಯಿ ದಂಡ ವಿಧಿಸಿದ್ದ ಟಿಸಿ

ಟಿಕೆಟ್ ಪರೀಕ್ಷರು (ಟಿಸಿ) ಟಿಕೆಟ್ ಮತ್ತು PNR ಸಂಖ್ಯೆ ಪರಿಶೀಲಿಸಿದ ನಂತರ ಅವರು ಸದರಿ ಟಿಕೆಟ್‌ಗಳನ್ನು ಒಪ್ಪಿಲ್ಲ. ಇದು ಸದರಿ ಕೋಚ್‌ ಟಿಕೆಟ್ ಅಲ್ಲ ಎಂದು ನಿರಾಕರಿಸಿದ್ದಾರೆ. ಇದು ದಂಪತಿಗಳಿಗೆ ಆಘಾತ ತಂದಿದೆ. ಒಪ್ಪದ ಟಿಸಿ ದಂಪತಿಗಳಿಗೆ ನೀವು ಟಿಕೆಟ್ ರಹಿ ಪ್ರಯಾಣಿಕರು ಎಂಬ ಹಣೆ ಪಟ್ಟಿ ಕಟ್ಟಿ ಸುಮಾರು 22,300 ರೂಪಾಯಿ ದಂಡ ವಿಧಿಸಿದ್ದರು ಎಂದು TOI ವರದಿ ಮಾಡಿದೆ.

ಪೋಷಕರಿಗೆ ಆದ ಈ ಕೆಟ್ಟ ಅನುಭವವ ಬಗ್ಗೆ ತಕ್ಷವನೇ ಅಲೋಕ್ ಕುಮಾರ್ IRCTC ಸಹಾಯವಾಣಿಗೆ ಇಮೇಲ್ ಮೂಲಕ ದೂರು ನೀಡಿದ್ದಾರೆ. ಆದರೆ ದೂರಿಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. IRCTC ಅಥವಾ ಬೆಂಗಳೂರಿನ SWR ನ ಅಧಿಕಾರಿಗಳಿಂದ ಸ್ಪಂದನೆ ಸಿಗಲಿಲ್ಲ.

IRCTC Rs 22,000 fined to Elderly Couple travelling ticketless, Their son gets Rs 40000compensation

IRCTC 40,000 ದಂಡ ಪಾವತಿಸುವಂತೆ ತೀರ್ಪು

ಹೀಗಾಗಿ ಅಲೋಕ್ ಕುಮಾರ್ 2022ರ ಏಪ್ರಿಲ್ ನಲ್ಲಿ ಶಾಂತಿನಗರದಲ್ಲಿರುವ ಬೆಂಗಳೂರು ನಗರ ಮೂರನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ನ್ಯಾಯ ಕೇಳಿದರು. ಅಲ್ಲಿ ನೈಋತ್ಯ ರೈಲ್ವೆ ಮತ್ತು ಐಆರ್‌ಸಿಟಿಸಿಯ ಮುಖ್ಯ ಬುಕಿಂಗ್ ಅಧಿಕಾರಿ ವಿರುದ್ಧ ದೂರು ದಾಖಲಿಸಿದರು.

ನ್ಯಾಯಾಲಯಕ್ಕೆ SWR ಅಧಿಕಾರಿಗಳು ಹಾಜರಾಗಲಿ.್. ಇತ್ತ IRCTC ವಕೀಲರು ಪ್ರಕರಣವನ್ನು ವಜಾಗೊಳಿಸಿದರು. ಕಾರಣವೇನೆಂದರೆ ಐಆರ್‌ಸಿಟಿಸಿ ಪ್ರಯಾಣಿಕರಿಗೆ ಆನ್‌ಲೈನ್ ಟಿಕೆಟಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ದಂಡ ತೆಗೆದುಕೊಳ್ಳಲು ಇದಕ್ಕೆ ಅನುಮತಿ ಇಲ್ಲ ಎಂದರು.

ಟಿಕೆಟ್ ಬುಕ್ಕಿಂಗ್ ದಾಖಲೆಗಳ ಪರಿಶೀಲಿಸಿ, ವಾದ ವಿವಾದ ಆಲಿಸಿದ ಗ್ರಾಹಕ ನ್ಯಾಯಾಲಯವು ಕುಮಾರ್ ಅವರ ಪೋಷಕರಿಗೆ 30,000 ರೂಪಾಯಿಗಳನ್ನು ಪರಿಹಾರವಾಗಿ ಮತ್ತು ಕುಮಾರ್ ಅವರ ವ್ಯಾಜ್ಯ ವೆಚ್ಚಕ್ಕಾಗಿ 10,000 ರೂಪಾಯಿಗಳನ್ನು ಐಆರ್‌ಸಿಟಿಸಿ ಪಾವತಿಸಬೇಕು ಎಂದು ಆದೇಶಿಸಿತು.

ಇಂತಹ ಘಟನೆಗಳು ಇದೇ ಮೊದಲೇನಲ್ಲ. ಇದಕ್ಕೂ ಮೊದಲು, ಎಸಿ ಪ್ರಥಮ ದರ್ಜೆ ಕಂಪಾರ್ಟ್‌ಮೆಂಟ್‌ನಲ್ಲಿ ಅನೇಕ ಟಿಕೆಟ್‌ಗಳಿಲ್ಲದ ಪ್ರಯಾಣಿಕರು ತುಂಬಿರುವ ವಿಡಿಯೋಗಳು ವೈರಲ್ ಆಗಿವೆ. ಆದ್ದರಿಂದ ಪ್ರಥಮ ದರ್ಜೆ ಟಿಕೆಟ್‌ಗಳಿಗೆ ಹೆಚ್ಚುವರಿ ಪಾವತಿಸುವ ಹಾಗೂ ಪ್ರಯಾಣಿಕರ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಕಾಡುವಂತೆ ಮಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+