ಐಪಿಎಸ್ ಅಧಿಕಾರಿ ಆರ್. ಪಿ. ಶರ್ಮಾಗೆ ಗುಂಡೇಟು; ಆಸ್ಪತ್ರೆಗೆ ದಾಖಲು

ಬೆಂಗಳೂರು, ಸೆಪ್ಟೆಂಬರ್ 02: ಹಿರಿಯ ಐಪಿಎಸ್ ಅಧಿಕಾರಿ ಆರ್. ಪಿ. ಶರ್ಮಾ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದೆ.

Recommended Video

      MJ Appaji Gowda JDS ಶಕ್ತಿ ಭದ್ರಾವತಿ ಶಾಸಕ ಇನ್ನಿಲ್ಲ | Oneindia Kannada

      ಬುಧವಾರ ರಾತ್ರಿ ತಮ್ಮ ನಿವಾಸಿದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್ ಡಿಜಿಯಾಗಿರುವ ಆರ್. ಪಿ. ಶರ್ಮಾಗೆ ಗುಂಡೇಟು ತಗುಲಿದೆ. ಎದೆಯ ಎಡಭಾಗಕ್ಕೆ ಗುಂಡು ತಗುಲಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

      ಕೊತ್ತನೂರಿನ ನಿವಾಸದಲ್ಲಿ ತಮ್ಮ ಪಿಸ್ತೂಲ್‌ನಿಂದ ಆಕಸ್ಮಿಕವಾಗಿ ಹಾರಿದ ಗುಂಡಿನಿಂದಾಗಿ ಆರ್. ಪಿ. ಶರ್ಮಾ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

      IPS Officer RP Sharma Injured As Gun Misfires In Bengaluru

      ಆರ್. ಪಿ. ಶರ್ಮಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೆಬ್ಬಾಳದಲ್ಲಿರುವ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದು ಅಧಿಕಾರಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.

      ಆರ್. ಪಿ. ಶರ್ಮಾ 1977ನೇ ಬ್ಯಾಚ್ ಐಪಿಎಸ್ ಅಧಿಕಾರಿ. ಬಿಎಂಟಿಎಫ್ ಎಡಿಜಿಪಿಯಾಗಿದ್ದ ವೇಳೆಯಲ್ಲಿ ತಮ್ಮ ಕಾರ್ಯ ವೈಖರಿ ಮೂಲಕ ಅವರು ಬಹಳ ಖ್ಯಾತಿಗಳಿಸಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+