Get Updates
Get notified of breaking news, exclusive insights, and must-see stories!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳಿಗೆ ಅನುಮತಿ: ಕುನ್ಹಾ ಆಯೋಗ ಸೂಚಿಸಿದ ಕಠಿಣ ಷರತ್ತುಗಳು ಹೀಗಿವೆ

ಬೆಂಗಳೂರು: ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ರ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸಚಿವ ಸಂಪುಟ ಗುರುವಾರ ತಾತ್ವಿಕ ಅನುಮತಿ ನೀಡಿದೆ. ಆದರೆ, ಈ ಅನುಮತಿ ಕಠಿಣ ಷರತ್ತುಗಳಿಗೆ ಒಳಪಟ್ಟಿದ್ದು, ಅಂತಿಮ ಆದೇಶವನ್ನು ಗೃಹ ಇಲಾಖೆ ಹೊರಡಿಸಲಿದೆ. ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಆಯೋಗ ವರದಿ ಮತ್ತು ಮಹೇಶ್ವರ ರಾವ್ ತಜ್ಞ ಸಮಿತಿ ಶಿಫಾರಸುಗಳನ್ನು ಪರಿಗಣಿಸಿ ಈ ಆದೇಶ ಹೊರಡಿಸಲಾಗುತ್ತದೆ. ಸರ್ಕಾರವು ಕುನ್ಹಾ ಆಯೋಗದ ವರದಿಯನ್ನು ಗಂಭೀರವಾಗಿ ಪರಿಗಣಿಸಿದೆ.

2025ರ ಜೂನ್ 4ರಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಐಪಿಎಲ್ ಮೊದಲ ಜಯೋತ್ಸವದ ವೇಳೆ ಕ್ರೀಡಾಂಗಣದ ಹೊರಭಾಗದಲ್ಲಿ ಸಂಭವಿಸಿದ ನೂಕುನುಗ್ಗಲಿನಲ್ಲಿ 11 ಮಂದಿ ಸಾವನ್ನಪ್ಪಿದ್ದರು, ಅನೇಕರಿಗೆ ಗಾಯಗಳಾಗಿದ್ದವು. ಈ ದುರ್ಘಟನೆಯ ನಂತರ ಸರ್ಕಾರ ಕುನ್ಹಾ ಅವರ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿತು. ವರದಿಯಲ್ಲಿ ಕ್ರೀಡಾಂಗಣದ "ವಿನ್ಯಾಸ ಮತ್ತು ರಚನೆ" ಭಾರಿ ಜನಸಂದಣಿಗೆ "ಅನರ್ಹ ಮತ್ತು ಅಪಾಯಕಾರಿ" ಎಂದು ಹೇಳಲಾಗಿತ್ತು. ದೊಡ್ಡ ಪ್ರಮಾಣದ ಜನರು ಸೇರುವ ಕಾರ್ಯಕ್ರಮಗಳನ್ನು "ಹೆಚ್ಚು ಸೂಕ್ತವಾದ ಸ್ಥಳಗಳಿಗೆ" ಸ್ಥಳಾಂತರಿಸುವಂತೆ ಆಯೋಗ ಶಿಫಾರಸು ಮಾಡಿತ್ತು.

Chinnaswamy Stadium

ಗೃಹ ಸಚಿವ ಜಿ.ಪರಮೇಶ್ವರ್‌ ಅವರು ಕೆಎಸ್‌ಸಿಎ ಮತ್ತು ಆರ್‌ಸಿಬಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಆಯೋಗದ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ. ಮುಖ್ಯವಾಗಿ ಮೂಲಸೌಕರ್ಯ ಸಂಬಂಧಿತ ಶಿಫಾರಸುಗಳನ್ನು ನೀಡಲಾಗಿದೆ. ಗೇಟ್‌ಗಳ ಅಗಲ ಹೆಚ್ಚಿಸುವುದು, ಪಾರ್ಕಿಂಗ್ ವ್ಯವಸ್ಥೆ ಸುಧಾರಣೆ, ಹೋಲ್ಡಿಂಗ್ ಏರಿಯಾ ನಿರ್ಮಾಣ ಸೇರಿದಂತೆ ಕೆಲವು ತಕ್ಷಣ ಜಾರಿಗೆ ತರಬಹುದಾದ ಭದ್ರತಾ ಕ್ರಮಗಳನ್ನು ಸೂಚಿಸಲಾಗಿದೆ.

ಆಯೋಗದ ಶಿಫಾರಸುಗಳೇನು?

ಆಂಬುಲೆನ್ಸ್ ಮತ್ತು ವೈದ್ಯರ ನಿಯೋಜನೆ, ತುರ್ತು ಚಿಕಿತ್ಸಾ ಕೇಂದ್ರಗಳ ಸ್ಥಾಪನೆ, ಜನಸಂದಣಿ ನಿಯಂತ್ರಣ ವ್ಯವಸ್ಥೆ ಬಲಪಡಿಸುವುದು, ಪಂದ್ಯಗಳನ್ನು ಆಯೋಜಿಸುವವರು ಆರ್‌ಸಿಬಿ ಮತ್ತು ಕೆಎಸ್‌ಸಿಎ ಸಂಪೂರ್ಣ ಹೊಣೆ ಹೊತ್ತುಕೊಳ್ಳಬೇಕು. ಸರ್ಕಾರವನ್ನು ಹೊಣೆಗಾರರನ್ನಾಗಿಸಲಾಗುವುದಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ. ಹಾಲಿ ಚಾಂಪಿಯನ್ ಆಗಿರುವ ಆರ್‌ಸಿಬಿ 2026ರ ಐಪಿಎಲ್ ಮೊದಲ ಪಂದ್ಯವನ್ನು ಬೆಂಗಳೂರಿನಲ್ಲೇ ಆಡಲು ಮನವಿ ಮಾಡಿದೆ. ಆದರೆ, ಅಂತಿಮ ಅನುಮತಿ ಸರ್ಕಾರದ ಷರತ್ತುಗಳು ಮತ್ತು ಸಿದ್ಧತೆಗಳ ಮೇಲೆ ಅವಲಂಬಿತವಾಗಿರಲಿದೆ.

ಗೃಹ ಇಲಾಖೆ ಶೀಘ್ರದಲ್ಲೇ ವಿವರವಾದ ಆದೇಶ ಹೊರಡಿಸಿ, ಅನುಸರಿಸಬೇಕಾದ ಷರತ್ತುಗಳು, ಭದ್ರತಾ ಸಿದ್ಧತೆಗಳು ಮತ್ತು ಮೂಲಸೌಕರ್ಯ ಸುಧಾರಣೆಗಳ ಕುರಿತು ಸ್ಪಷ್ಟ ನಿರ್ದೇಶನ ನೀಡಲಿದೆ. ಡಿ ಕುನ್ಹಾ ಆಯೋಗ ಹಾಗೂ ತಜ್ಞ ಸಮಿತಿಗಳ ಶಿಫಾರಸುಗಳ ಜಾರಿಗೆ ಬಂದ ಬಳಿಕವೇ ಪಂದ್ಯಗಳ ಆಯೋಜನೆಗೆ ಪೂರ್ಣ ಅನುಮತಿ ಸಿಗಲಿದೆ. ಭದ್ರತೆ ವಿಚಾರದ ಆದ್ಯತೆ ಮೇರೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ ಎಂಬ ಸಂದೇಶವನ್ನು ಸರ್ಕಾರ ಸ್ಪಷ್ಟಪಡಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+