RCB V/s CSK: ಆರ್‌ಸಿಬಿ ಮ್ಯಾಚ್ ನೋಡೋಕೆ ಚಿನ್ನಸ್ವಾಮಿ ಸ್ಟೇಡಿಯಂ ಕಡೆ ಹೋಗ್ತಾ ಇದ್ದಿರಾ? ಒಮ್ಮೆ ಇಲ್ಲಿ ಓದಿ
ಬೆಂಗಳೂರು, ಮೇ. 18: ಐಪಿಎಲ್ 2024ರ ಹೈವೋಲ್ಟೇಜ್ ಪಂದ್ಯ ಮೇ. 18ರ ಶನಿವಾರ ಸಿಲಿಕಾನ್ ಸಿಟಿಯ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಸಕತ್ ಕುತೂಹಲಕ್ಕೆ ಕಾರಣವಾಗಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪೈಪೋಟಿ ನಡೆಸಲಿವೆ.
ಪ್ಲೇ ಆಫ್ ಲೆಕ್ಕಾಚಾರದಲ್ಲಿರುವ ಆರ್‌ಸಿಬಿ ತಂಡಕ್ಕೆ ಇದು ತುಂಬಾ ಮುಖ್ಯವಾದ ಪಂದ್ಯ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳ ಕೂಡ ಅವರಿಗೆ ಸಾಥ್ ನೀಡಲು ಚಿನ್ನಸ್ವಾಮಿ ಸ್ಟೇಡಿಯಂ ಕಡೆಗೆ ದೌಡಾಯಿಸಲಿದ್ದಾರೆ. ಆದರೆ, ಹೀಗೆ ಚಿನ್ನಸ್ವಾಮಿ ಮೈದಾನದ ಕಡೆ ಹೋಗುವ ಮುನ್ನ ಬೆಂಗಳೂರು ಸಂಚಾರಿ ಪೊಲೀಸರು ಹೊರಡಿಸಿರುವ ಸಂಚಾರ ಸಲಹೆಯನ್ನು ಒಮ್ಮೆ ತಿಳಿದುಕೊಳ್ಳುವುದು ಮುಖ್ಯ.

ಆರ್‌ಸಿಬಿ- ಸಿಎಸ್‌ಕೆ ಪಂದ್ಯಕ್ಕೆ ಸಂಚಾರ ಸಲಹೆ
ಮೇ 18, 2024 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಸಂಚಾರಿ ಸೂಚನೆ ನೀಡಿದ್ದಾರೆ. ಮಧ್ಯಾಹ್ನ 3:00 ರಿಂದ ರಾತ್ರಿ 11:00 ರವರೆಗೆ ವಿಶೇಷ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಟ್ರಾಫಿಕ್ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
"ದಿನಾಂಕ: 18.05.2024 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಟಾ ಐ.ಪಿ.ಎಲ್ 2024 ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಧ್ಯಾಹ್ನ 03:00 ಗಂಟೆಯಿಂದ ರಾತ್ರಿ 11:00 ಗಂಟೆಯವರೆಗೆ ರಸ್ತೆ ಬಳಕೆದಾರರ ಅನುಕೂಲಕ್ಕಾಗಿ ಈ ಕೆಳಕಂಡಂತೆ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ" ಎಂದು ಹೇಳಿದೆ.

ವಾಹನಗಳ ನಿಲುಗಡೆ ನಿಷೇಧವಿರುವ ರಸ್ತೆಗಳ ವಿವರ
* ಕ್ಲೀನ್ಸ್ ರಸ್ತೆ, ಎಂ.ಜಿ ರಸ್ತೆ, ಎಂ.ಜಿ ರಸ್ತೆ ಯಿಂದ ಕಬ್ಬನ್ ರಸ್ತೆ, ರಾಜಭವನ ರಸ್ತೆ.
* ಸೆಂಟ್ರಲ್ ಸ್ಪೀಟ್ ರಸ್ತೆ, ಕಬ್ಬನ್‌ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ. ಮ್ಯೂಸಿಯಂ ರಸ್ತೆ
* ಕಸ್ತೂರಿ ಬಾ ರಸ್ತೆ, ಅಂಬೇಡ್ಕರ್ ವೀದಿ ರಸ್ತೆ, ಟ್ರಿನಿಟಿ ವೃತ್ತ, ಲ್ಯಾವೆಲ್ಲೆ ರಸ್ತೆ
* ವಿಠಲ್ ಮಲ್ಯ ರಸ್ತೆ, ಕಿಂಗ್ಸ್ ರಸ್ತೆ ಮತ್ತು ನೃಪತುಂಗ ರಸ್ತೆ.
ಸಾರ್ವಜನಿಕ ವಾಹನಗಳ ನಿಲುಗಡೆ ಸ್ಥಳಗಳು
* ಸೆಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಮೈದಾನ
* ಯು.ಬಿ ಸಿಟಿ ಪಾರ್ಕಿಂಗ್ ಸ್ಥಳ
* ಬಿ.ಎಂ.ಟಿ.ಸಿ ಬಸ್ ನಿಲ್ದಾಣದ ಮೊದಲನೆ ಮಹಡಿ ಮತ್ತು ಓಲ್ಡ್ ಕೆ.ಜಿ.ಐ.ಡಿ ಬಿಲ್ಡಿಂಗ್
* ಕಿಂಗ್ಸ್ ರಸ್ತೆ (ಕಬ್ಬನ್‌ಪಾರ್ಕ್ ಒಳಭಾಗದಲ್ಲಿ ಪಾರ್ಕಿಂಗ್ ಮಾಡಬಹುದು)












Click it and Unblock the Notifications