ತನಿಖಾ ಸಂಸ್ಥೆಗಳು ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದಿರಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ಸೆಪ್ಟೆಂಬರ್ 13: ಸೈಬರ್ ಅಪರಾಧ ತಡೆಗೆ ತನಿಖಾ ಸಂಸ್ಥೆಗಳು ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದಿರಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ದಕ್ಷಿಣ ಭಾರತ ರಾಜ್ಯಗಳ ಪೋಲೀಸ್ ಮಹಾನಿದೇರ್ಶಕರ ಸಮನ್ವಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಹಗಲಿರುಳು ಎನ್ನದೇ ಕಾರ್ಯನಿರ್ವಹಿಸುವ ಪೋಲಿಸ್ ಪಡೆಗಳ ಕಾರ್ಯವನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ಸೈಬರ್ ಅಪರಾಧಗಳನ್ನು ತಡೆಗಟ್ಟುವಲ್ಲಿ ನಿಟ್ಟಿನಲ್ಲಿ ಪೋಲಿಸರು ಕ್ರಿಯಾತ್ಮಕವಾಗಿರಬೇಕು. ಕಳೆದ ಹಲವು ವರ್ಷಗಳಲ್ಲಿ ಸೈಬರ್ ದಾಳಿಗಳು ವಿವಿಧ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ಆನ್ ಲೈನ್ ಮೂಲಕ ಮೋಸ ಮಾಡುವುದು ಅಧಿಕವಾಗಿದೆ. ಇದು ವ್ಯಕ್ತಿಗತವಾಗಿ ಹಾನಿಯಲ್ಲದೇ ರಾಷ್ಟ್ರೀಯ ಭದ್ರತೆಗೂ ಅಪಾಯಕಾರಿಯಾಗಿದೆ' ಎಂದರು.

Investigating agencies must be one step ahead of criminals: Chief Minister Siddaramaiah

ಅತ್ಯಾಧುನಿಕ ವಿಧಿವಿಜ್ಞಾನ ಸಾಧನಗಳು ಸೈಬರ್ ಅಪರಾಧಿಗಳನ್ನು ಮಟ್ಟಹಾಕಲು ಸಹಾಯಕವಾಗಿವೆ. 2003 ರಲ್ಲಿ ಸೈಬರ್ ಅಪರಾಧಗಳ ಪೋಲೀಸ್ ಠಾಣೆಯನ್ನು ತೆರೆದ ಮೊದಲ ರಾಜ್ಯ ಕರ್ನಾಟಕ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸೈಬರ್ ಅಪರಾಧ ತಡೆಗಾಗಿ ಸಿಇಎನ್ ಪೋಲಿಸ್ ಠಾಣೆಗಳನ್ನು ರಾಜ್ಯ ಹೊಂದಿದೆ. ಇಂಥ ಪ್ರಕರಣಗಳನ್ನು ನಿರ್ವಹಿಸಲೆಂದೇ ಸೈಬರ್ ಠಾಣೆಯ ಪೋಲಿಸ್ ಅಧಿಕಾರಿಗಳು ವಿಶೇಷ ತರಬೇತಿ ಪಡೆದಿದ್ದಾರೆ ಎಂದರು.

ಆಂತರಿಕ ಭದ್ರತೆ

ನಮ್ಮ ದೇಶದ ಬುನಾದಿ ಹಾಗೂ ಸಮಾಜದ ಸಂರಚನೆಗೆ ಸವಾಲಾಗಿರುವ ಆಂತರಿಕ ಭದ್ರತಾ ವಿಷಯಗಳು ತಮ್ಮ ಸಂಪೂರ್ಣ ಗಮನ ಮತ್ತು ಸಹಯೋಗ ಅಗತ್ಯ ಎಂದರು. ಕಾನೂನು ಸುವ್ಯವಸ್ಥೆ ಕಾಪಾಡುವುದು, ಸಾರ್ವಜನಿಕ ವ್ಯವಸ್ಥೆ ಹಾಗೂ ತಮ್ಮ ಪ್ರದೇಶದ ಪ್ರತಿಯೊಬ್ಬರ ಸುರಕ್ಷತೆ ಹಾಗೂ ಭದ್ರತೆಯ ಜವಾಬ್ದಾರಿಯನ್ನು ಹೊತ್ತಿರುವ ಪೋಲೀಸರಿಂದ ಅಚಲ ಬದ್ಧತೆ, ಸಮರ್ಪಣೆ ಹಾಗೂ ಕರ್ತವ್ಯಪರತೆಯನ್ನು ನಿರೀಕ್ಷಿಸಲಾಗುತ್ತದೆ ಎಂದರು.

ಪೋಲಿಸ್ ತಂತ್ರಗಾರಿಕೆಯಲ್ಲಿ ನಿರಂತರ ಮಾರ್ಪಾಡು ಅಗತ್ಯ

ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಪರಾಧಿ ಚಟುವಟಿಕೆಗಳಿಂದ ಹಿಡಿದು ಡಿಜಿಟಲ್ ವಲಯದ ಬೆದರಿಕೆಗಳನ್ನೂ ದೇಶ ಎದುರಿಸುತ್ತಿದೆ. ಆಧುನಿಕ ಸಮಾಜದ ಸಂಕೀರ್ಣತೆಗಳೂ ಕೂಡ ಹೊಸ ಮಾದರಿಯ ಅಪರಾಧಗಳನ್ನು ಹೆಚ್ಚಿಸಿವೆ. ಇದರಿಂದಾಗಿ ಪೋಲಿಸ್ ತಂತ್ರಗಾರಿಕೆಯಲ್ಲಿಯೂ ನಿರಂತರವಾಗಿ ಮಾರ್ಪಾಡು ತರಬೇಕಾದ ಅವಶ್ಯಕತೆ ಇದೆ ಎಂದರು.

Investigating agencies must be one step ahead of criminals: Chief Minister Siddaramaiah

ಕಾನೂನು ಪಾಲಕರಾಗಿ ತಾವುಗಳು ಸಮಾಜದ ಸ್ವಾಸ್ವ್ಥವನ್ನು ಹಾಳು ಮಾಡುವವರಿಂದ, ಶಾಂತಿ ಕದಡುವವರಿಗಿಂತ ಒಂದು ಹೆಜ್ಜೆ ಮುಂದಿರಿರಬೇಕಲ್ಲದೇ ಶೀಘ್ರವಾಗಿ ಹೊಂದಿಕೊಂಡು ನವೀನ ಮಾದರಿಯನ್ನು ಅಳವಡಿಸಿಕೊಳ್ಳಬೇಕು ಎಂದರು.

ಮಾದಕವಸ್ತು ನಿಯಂತ್ರಣ

ಮಾದಕವಸ್ತು ನಿಯಂತ್ರಣದಲ್ಲಿ ಕರ್ನಾಟಕ ರಾಜ್ಯ ಪೋಲಿಸ್ ಅತ್ಯುತ್ತಮ ಕೆಲಸ ಮಾಡಿದ್ದು ಅಂತರರಾಷ್ಟ್ರೀಯ ಮಾದಕವಸ್ತು ಜಾಲವನ್ನು ಪತ್ತೆ ಹಚ್ಚಲಾಗಿದೆ. ಡಾರ್ಕ್‍ವೆಬ್ ಮೂಲಕ ನಡೆಸುವ ಡ್ರಗ್ಸ್ ಜಾಲವನ್ನೂ ಕೂಡ ಬೇಧಿಸಲಾಗಿದೆ ಎಂದರು. ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಿಗ್ರಹಿಸಲಾಗಿದ್ದರೂ, ಕರ್ನಾಟಕದ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಈ ಸಮಸ್ಯೆಯನ್ನು ಮಟ್ಟಹಾಕಲು ಹೆಚ್ಚಿನ ಸಹಕಾರ ಅಗತ್ಯ ಎಂದರು.

ಭಯೋತ್ಪಾದನೆ ನಿಗ್ರಹ:

ಭಯೋತ್ಪದನಾ ಚಟುವಟಿಕೆಗಳು ರಾಜ್ಯದಲ್ಲಿಯೂ ನಡೆದಿದ್ದು, ಇವುಗಳ ನಿಗ್ರಹಕ್ಕೆ ಮಾಹಿತಿ ಸಂಗ್ರಹಣೆ, ಸಮನ್ವಯ, ಸಹಕಾರ ಹಾಗೂ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಕ್ರಮ ಅಗತ್ಯ ಎಂದರು.

Investigating agencies must be one step ahead of criminals: Chief Minister Siddaramaiah

ಅಂತರ ರಾಜ್ಯಗಳ ಸಮನ್ವಯ

ಅಂತರ ರಾಜ್ಯ ಅಪರಾಧಿಗಳು ಹಾಗೂ ಗ್ಯಾಂಗ್ ಗಳ ಮೇಲೆ ನಿಗಾ ಅಗತ್ಯವೆಂದ ಮುಖ್ಯಮಂತ್ರಿಗಳು ಈ ಕುರಿತು ವಿವಿಧ ರಾಜ್ಯಗಳ ನಡುವೆ ಸಮನ್ವಯ ಹಾಗೂ ಸಹಕಾರವಿದ್ದರೆ ಅಪರಾಧಿಗಳನ್ನು ಮಟ್ಟಹಾಕುವುದು ಸುಲಭ ಎಂದರು.

ತೀವ್ರಗಾಮಿಗಳ ಪ್ರತ್ಯೇಕತೆಗೆ ಕ್ರಮ

ಜೈಲುಗಳಲ್ಲಿ ತೀವ್ರಗಾಮಿಗಳ ಪ್ರತ್ಯೇಕತೆಗೆ ಕ್ರಮ ಕೈಗೊಳ್ಳುವುದು ಅವಶ್ಯಕ ಎಂದ ಮುಖ್ಯಮಂತ್ರಿಗಳು ಪೋಲಿಸ್ ಅಧಿಕಾರಿಗಳಿಗೆ ತಂತ್ರಜ್ಞಾನದ ಬಳಕೆ, ತರಬೇತಿ, ಸಾಮಥ್ರ್ಯ ವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

ಗೃಹ ಸಚಿವರಾದ ಜಿ.ಪರಮೇಶ್ವರ್ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್ ಮೋಹನ್ ಉಪಸ್ಥಿತರಿದ್ದರು.

ಇತರೆ ಹೈಲೈಟ್ಸ್

*ದಕ್ಷಿಣ ಭಾರತ ರಾಜ್ಯಗಳ ಡಿಜಿಪಿ ಗಳ ಸಮ್ಮೇಳನದಲ್ಲಿ ಸಂತೋಷದಿಂದ ಭಾಗವಹಿಸುತ್ತಿದ್ದೇನೆ. ಈ ಸಮ್ಮೇಳನ ಅಪರಾಧ ಪತ್ತೆ ಮತ್ತು ಅಪರಾಧ ನಿಯಂತ್ರಣದಲ್ಲಿ ದಕ್ಷಿಣ ಭಾರತ ರಾಜ್ಯಗಳ ನಡುವೆ ಇನ್ನಷ್ಟು ಹೆಚ್ಚಿನ ಸಹಕಾರ ಮತ್ತು ಸಮನ್ವಯ ಏರ್ಪಡಿಸಿಕೊಳ್ಳಲು ನೆರವಾಗುತ್ತದೆ ಎನ್ನುವ ನಂಬಿಕೆ ನನಗಿದೆ

Investigating agencies must be one step ahead of criminals: Chief Minister Siddaramaiah

*ಅಪರಾಧ ಜಗತ್ತಿಗೆ ಗಡಿಗಳಿಲ್ಲ. ಮಿತಿಯೂ ಇಲ್ಲ. ಅಪರಾಧಗಳನ್ನು ಸಮರ್ಪವಾಗಿ ನಿಗ್ರಹಿಸಲು ನಾನಾ ರಾಜ್ಯಗಳ ನಡುವೆ ಮಾಹಿತಿ, ಸಂಪನ್ಮೂಲ ಮತ್ತು ತಂತ್ರಗಾರಿಕೆಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಅಪರಾಧ ಜಗತ್ತಿಗೆ ಗಡಿಗಳು ಇಲ್ಲದಿರುವಾಗ ಇದನ್ನು ನಿಗ್ರಹಿಸುವುದರಲ್ಲೂ ಭದ್ರತಾ ಪಡೆಗಳು, ತನಿಖಾ ಸಂಸ್ಥೆಗಳ ನಡುವೆ ಗಡಿಗಳು ಇರಬಾರದು

*ದಕ್ಷಿಣ ಭಾರತ ತನ್ನ ಸಾಂಸ್ಕೃತಿಕ ವೈವಿಧ್ಯತೆ, ಭಿನ್ನ ಭಾಷೆಗಳು ಮತ್ತು ಭೌಗೋಳಿಕತೆ ಕಾರಣದಿಂದ ಅಪರಾಧ ನಿಗ್ರಹದಲ್ಲಿ ಹಲವು ಸವಾಲುಗಳನ್ನು ಮುಂದಿಡುತ್ತಿದೆ. ಮಾದಕ ವಸ್ತು ಕಳ್ಳಸಾಗಣೆ, ಮಾನವ ಕಳ್ಳ ಸಾಗಣೆ, ಸಂಘಟಿತ ಅಪರಾಧ, ಸೈಬರ್ ಕ್ರೈಂ ಸಮಾಜದ ಮತ್ತು ಸಮುದಾಯದ ಶಾಂತಿ ಮತ್ತು ಸುರಕ್ಷತೆಗೆ ಅಪಾಯವನ್ನು ತಂದೊಡ್ಡುತ್ತಿದೆ. ಈ ಅಪರಾಧಗಳೆಲ್ಲಾ ರಾಜ್ಯಗಳ ಗಡಿ ದಾಟಿಯೂ ಕಾರ್ಯಾಚರಣೆ ಮಾಡುತ್ತಿರುವುದರಿಂದ ಇವುಗಳ ನಿಗ್ರಹದಲ್ಲೂ ಅಂತರ ರಾಜ್ಯ ಪೊಲೀಸ್ ತಂಡಗಳ ನಡುವೆ ಸಮನ್ವಯ ಮತ್ತು ಸಹಕಾರ ಅಗತ್ಯ

*ಜಂಟಿ ಕಾರ್ಯಾಚರಣೆಗಳು ಅಪರಾಧಿಗಳ ಬಲಕುಂದಿಸಲು ಸಹಕಾರಿಯಾಗಬಹುದು

*ವಿವಿಧ ಕಾನೂನು ರಕ್ಷಣೆಯ ಸಂಸ್ಥೆಗಳು ನಿರಂತರವಾಗಿ ಅಪರಾಧಿಗಳನ್ನು ಮಟ್ಟಹಾಕಲು ಜೊತೆಯಾಗಿ ಕೆಲಸ ಮಾಡುತ್ತಿವೆ ಎಂಬ ವಿಷಯವೇ ಅವರನ್ನು ಎದೆಗುಂದಿಸಬಹುದು

*ಇದರೊಂದಿಗೆ ಅಂತರರಾಜ್ಯ ಸಮನ್ವಯವು ಅಪರಾಧ ತಡೆಗಟ್ಟುವಲ್ಲಿನ ಉತ್ತಮ ಹಾಗೂ ವಿನೂತನ ಮಾದರಿಗಳನ್ನು ಹಂಚಿಕೊಳ್ಳಲು ವೇದಿಕೆಯಾಗಲಿದೆ

*ಪ್ರತಿ ರಾಜ್ಯವೂ ನಿರ್ದಿಷ್ಟ ಅಪರಾಧವನ್ನು ತಡೆಗಟ್ಟಲು ಒಂದು ಯಶಸ್ವಿ ಮಾದರಿಯ ಕಾರ್ಯತಂತ್ರವನ್ನು ರೂಪಿಸಿರಬಹುದು

*ಈ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ನಾವು ಪರಸ್ಪರರಿಂದ ಹಲವು ವಿಚಾರಗಳನ್ನು ಅರಿತುಕೊಳ್ಳಬಹುದಾಗಿದೆ ಹಾಗೂ ಇತರೆಡೆಗಳಲ್ಲಿ ಯಶಸ್ವಿಯಾದ ಕ್ರಮಗಳನ್ನು ಅನುಸರಿಸಲು ಸಾಧ್ಯವಾಗುತ್ತದೆ

*ಈ ತಿಳಿವಳಿಕೆಯ ಹಂಚಿಕೆಯು ಅಪರಾಧಿಗಳ ಕಾರ್ಯತಂತ್ರವನ್ನು ಭೇದಿಸಲು ಸಹಕಾರಿಯಾಗಲಿದೆ

*ಆದರೆ ಅಪರಾಧ ತಡೆಗಟ್ಟಲು ಅಂತರರಾಜ್ಯ ಸಮನ್ವಯ ಸಾಧಿಸಲು ಸದೃಢ ನಾಯಕತ್ವ, ಪರಿಣಾಮಕಾರಿ ಸಂವಹನ ಮತ್ತು ಬದ್ಧತೆ ಅತಿ ಅಗತ್ಯವಾಗಿದೆ

*ರಾಜ್ಯ ಸರ್ಕಾರಗಳು ಜಂಟಿ ಕಾರ್ಯಾಚರಣೆಗಾಗಿ ಟಾಸ್ಕ್‌ಫೋರ್ಸ್‌ಗಳು, ಜಂಟಿ ತರಬೇತಿ ಕಾರ್ಯಕ್ರಮಗಳು ಹಾಗೂ ಕಾನೂನು ರಕ್ಷಣೆಯ ಸಂಸ್ಥೆಗಳ ನಡುವೆ ಸಭೆಗಳನ್ನು ನಡೆಸುವ ಮೂಲಕ ಸಮನ್ವಯವನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕಾಗಿದೆ

*ಈ ಸಮ್ಮೇಳನವು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಜನರಿಗೆ ಸುರಕ್ಷಿತ ಪರಿಸರ ನಿರ್ಮಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಲಿದೆ ಎಂಬ ವಿಶ್ವಾಸ ನನಗಿದೆ. ನಾವೆಲ್ಲರೂ ಸೀಮಾತೀತವಾಗಿ ಜೊತೆಯಾಗಿ ಕೆಲಸ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿ ಅಪರಾಧಗಳನ್ನು ಯಶಸ್ವಿಯಾಗಿ ಮಟ್ಟ ಹಾಕುವುದರೊಂದಿಗೆ ಪ್ರತಿಯೊಬ್ಬ ನಾಗರಿಕನ ಹಿತರಕ್ಷಣೆ ಮಾಡೋಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+