ಬಾಂಗ್ಲಾದಿಂದ ಬಂದು ಯೂಟ್ಯೂಬ್ ನೋಡಿ ಕದ್ದರು: ಪೊಲೀಸರ ಕೈಗೆ ಸಿಕ್ಕಿಬಿದ್ದರು
ಬೆಂಗಳೂರು, ಏಪ್ರಿಲ್ 22: ಕಳ್ಳತನ ಮಾಡೋದು ಹೇಗೆ ಅನ್ನೊದನ್ನು ಕಲಿಯಬೇಕೆಂದರೆ ಶಾಲೆಗೆ ಹೋಗಬೇಕಿಲ್ಲ. ಖತರ್ನಾಕ್ ಕಳ್ಳರ ಜೊತೆಗೆ ಟ್ರೈನಿಂಗ್ ಮಾಡಬೇಕಿಲ್ಲ. ಆದರೂ ಕಳ್ಳತನದ ವಿದ್ಯೆಯನ್ನು ಕರತಲಮಲಕ ಮಾಡಿಕೊಳ್ಳಲು ಯೂಟ್ಯೂಬ್ ಒಂದಿದ್ದರೆ ಸಾಕು. ಯುಟ್ಯೂಬ್ ನೋಡಿ ಕಳ್ಳತನಕ್ಕೆ ಇಳಿದಿದ್ದವರನ್ನು ಸಂಜಯ್ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಏಳು ಮನೆಗಳ ಕಿಟಕಿ ಮುರಿದು ಕಳ್ಳತನವನ್ನು ಮಾಡಲಾಗಿತ್ತು. ಕಳ್ಳತನ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಸಂಜಯ್ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು ಇಬ್ಬರು ಅಂತಾರರಾಜ್ಯ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಂಟಿ ಮನೆಗಳೇ ಈ ಕಳ್ಳರ ಟಾರ್ಗೆಟ್:
ತೆಲಂಗಾಣ ಮೂಲದ ವಿನೋದ್ ಕುಮಾರ್ ಹಾಗೂ ಪಶ್ಚಿಮ ಬಂಗಾಳದ ರೋಹಿತ್ ಮಂಡಲ್ ಬಂಧಿತ ಆರೋಪಿಗಳು. ಇವರು ಕಳ್ಳತನಕ್ಕೆ ಇಳಿಯುವ ಮೊದಲು ಬೈಕ್ ಅನ್ನು ಕದಿಯುತ್ತಿದ್ದರು. ಅದೇ ಬೈಕ್ ನಲ್ಲಿ ಏರಿಯಾವನ್ನು ಸುತ್ತಸುತ್ತಿ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಆ ಒಂಟಿ ಮನೆಯ ಮಾಲೀಕರು ಯಾವಾಗ ಹೊರಗೆ ಹೋಗುತ್ತಾರೋ ಆ ಮನೆಯನ್ನು ಟಾರ್ಗೆಟ್ ಮಾಡಿ ಕಳ್ಳತನವನ್ನು ಮಾಡುತ್ತಿದ್ದರು.

ಖತರ್ನಾಕ್ ಆರೋಪಿಗಳ ಕಳ್ಳತನದ ಹಿಸ್ಟರಿ
ಸಂಜಯ್ ನಗರ ಪೊಲೀಸರು ಬಂಧಿಸಿರೋ ವಿನೋದ್ ಮೂಲತಃ ಹೈದರಾಬಾದ್ ನಿವಾಸಿ. 2015ರಲ್ಲಿ ಈತನ ವಿರುದ್ಧ ಆರು ಪ್ರಕರಣ ದಾಖಲಾಗಿ ಜೈಲಿಗೆ ಹೋಗಿ ಬಂದಿದ್ದ. ಆದರೆ ಈತ ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಈತನ ಕುಟುಂಬಸ್ಥರು ಮನೆಗೆ ವಾಪಸ್ ಸೇರಿಸಿಕೊಂಡಿರಲಿಲ್ಲ. ಇದರಿಂದಾಗಿ ವಿನೋದ್ ಕೋಲ್ಕತ್ತಾಗೆ ಹೋಗಿ ಮೂರು ವರ್ಷಗಳ ಕಾಲ ವಾಸವಾಗಿದ್ದ.
ಕಳ್ಳನ ಲವ್ ಕಹಾನಿ ಇಂಡಿಯಾ ಟು ಬಾಂಗ್ಲಾ ಜರ್ನಿ..!
ಕಳ್ಳ ವಿನೋದ್‌ಗೆ ಕೋಲ್ಕತ್ತಾದಲ್ಲಿ ಬಾಂಗ್ಲಾ ಮೂಲದ ಯುವತಿ ಪರಿಚಯವಾಗಿತ್ತು. ಆ ಬಳಿಕ ಪರಿಚಯ ಪ್ರೇಮಾಂಕುರವಾಗಿ ಮದುವೆ ಮಾಡಿಕೊಂಡಿದ್ದ. ಮದುವೆಯ ಬಳಿಕ ವಿನೋದ್ ಗೆ ರೋಹಿತ್ ಮಂಡಲ್ ಎಂಬಾತನ ಪರಿಚಯವಾಗಿತ್ತು. ಈ ಮೂವರು ಜೊತೆಗೊಡಿ ಹೆಸರು ಬದಲಾಯಿಸಿಕೊಂಡು ಬಾಂಗ್ಲಾಕ್ಕೂ ಹೋಗಿ ಕೆಲವು ತಿಂಗಳು ನೆಲೆಯೂರಿದ್ದರು. ಜೀವನ ನಡೆಸಲು ಕಷ್ಟವಾಗಿದ್ದರಿಂದ ಮತ್ತೆ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕಿ ಕಳ್ಳತನ ಮಾಡಲು ಯಶಸ್ವಿಯಾಗಿದ್ದರು.

ಕಳ್ಳತನ ಮಾಡಲು ಯ್ಯೂಟೂಬ್ ವಿಡಿಯೋ ಮೊರೆ..!
ಕಳ್ಳತನಕ್ಕಿಳಿಯುವ ಮೊದಲು ಸೆರೆಸಿಕ್ಕಿರುವ ಕಳ್ಳರು ಯ್ಯೂಟ್ಯೂಬ್ ನಲ್ಲಿ ಕಳ್ಳತನ ಮಾಡೋದು ಹೇಗೆ..? ಕಳ್ಳತನ ಮಾಡಲು ಬೇಕಾದ ಸಲಕರಣೆಗಳು ಯಾವುದು..? ಎಂದೆಲ್ಲ ಗಮನಿಸಿದ್ದರು. ಅದರಂತೆಯೇ ಕಳ್ಳತನ ಮಾಡಲು ಬೇಕಾದ ಸಲಕರಣೆಗಳನ್ನ ಯ್ಯೂಟೂಬ್ ನಲ್ಲಿ ನೋಡಿ ಖರೀದಿಸಿದ್ದರು. ಕೃತ್ಯ ಎಸಗಲು ನಗರದಲ್ಲಿ ಬೈಕ್ ಕದ್ದು ರಾತ್ರಿ ವೇಳೆ ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು.

ಇನ್ಸ್‌ಪೆಕ್ಟರ್ ಬಾಲರಾಜ್ ನೇತೃತ್ವದ ತಂಡದ ಭರ್ಜರಿ ಕಾರ್ಯಾಚರಣೆ
''ಇನ್ಸ್‌ಪೆಕ್ಟರ್ ಬಾಲರಾಜ್ ನೇತೃತ್ವದ ತಂಡ ತಮಗೆ ಸಿಕ್ಕ ಲೀಡ್ ಮತ್ತು ಸಿಸಿಟಿವಿಯ ಆಧಾರದಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು. ಇದರರಿಂದಾಗಿ ಅಂತರರಾಜ್ಯ ಖದೀಮರನ್ನು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬಂಧಿತ ಆರೋಪಿಗಳಿಂದ 79 ಲಕ್ಷ ಮೌಲ್ಯದ 792 ಗ್ರಾಂ ಚಿನ್ನಾಭರಣ, ವಿವಿಧ ಕಂಪೆನಿಯ ಮೊಬೈಲ್, ಲಾಪ್‌ಟಾಪ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 22 ಕಳವು ಪ್ರಕರಣ ಪತ್ತೆ ಹಚ್ಚಿದಂತಾಗಿದೆ,'' ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ತಿಳಿಸಿದ್ದಾರೆ.
Recommended Video
-
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Dawood Ibrahim: "ರಿಯಲ್ ಡಾನ್ ದಾವೂದ್ ಇಬ್ರಾಹಿಂ" ಸ್ಟಿಕ್ಕರ್ ಹಾಕಿಸಿದ್ದ ಬಸ್ ಚಿಕ್ಕಮಗಳೂರಿನಲ್ಲಿ ಪೊಲೀಸ್ ವಶಕ್ಕೆ -
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್












Click it and Unblock the Notifications