ಕನ್ನಡ ಟೀ ಶರ್ಟ್ ಧರಿಸಿ, ಹೆಮ್ಮೆಯಿಂದ ಯೋಗ ದಿನ ಆಚರಿಸಿ!
ಬೆಂಗಳೂರು, ಜೂನ್ 20: ಪವನ್ ಕುಮಾರ್ ಅವರ 'ಲೂಸಿಯಾ' ಚಿತ್ರದ ನಂತರ ರಕ್ಷಿತ್ ಶೆಟ್ಟಿ ಅವರ' ಉಳಿದವರು ಕಂಡಂತೆ ಚಿತ್ರದ ಆರ್ಡರ್ ಪಡೆದ AziTeez -Your Alter Ego ಸಂಸ್ಥೆ ವಿಶೇಷ ರೀತಿಯಲ್ಲಿ ಟೀ ಶರ್ಟ್ ಗಳನ್ನು ವಿನ್ಯಾಸಗೊಳಿಸಿ ಮಾರಾಟ ಮಾಡಿ ಯಶಸ್ವಿಯಾಗಿದ್ದು ಹಳೆ ಕಥೆ. ಕನ್ನಡ ಪ್ರೇಮ ಮೆರೆಯುವ ಈ ಸಂಸ್ಥೆ ಈಗ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಜ್ಜಾಗಿದೆ.
3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯೋಗದ ಜತೆ ಕನ್ನಡ ಪ್ರೇಮವನ್ನು ಬೆಳೆಸಲು ಸಂಸ್ಥೆ ಮುಂದಾಗಿದೆ.
ಹೊಸ ವಿನ್ಯಾಸದ ಯೋಗ ಟೀ ಶರ್ಟ್ ಗಳು ಆನ್ ಲೈನ್ ಹಾಗೂ ಮಳಿಗೆಗಳಲ್ಲಿ ಈಗ ಲಭ್ಯವಿದೆ ಎಂದು ಸಂಸ್ಥೆಯ ಸ್ಥಾಪಕರಾದ ಸುಧೀಂದ್ರ ಅವರು ಹೇಳಿದರು.
ನೈಸರ್ಗಿಕ ವರ್ಣದ ವಸ್ತ್ರಗಳು ಕನ್ನಡದ ಮನೆಗಳ ಕೈಮಗ್ಗಗಳಲ್ಲಿ ತಯಾರಾದ ಬಟ್ಟೆಗಳನ್ನು ಮಾರಾಟ ಮಾಡುವ ಅಜೀಟೀಜ್ ಸಂಸ್ಥೆ ಯೋಗ ದಿನಾಚರಣೆಗೆ ಈ ಮೂಲಕ ಬೆಂಬಲ ವ್ಯಕ್ತಪಡಿಸಿದೆ. ಚಿತ್ರನಟಿ, ವೀಮೂವ್ ರಂಗ ತಂಡದ ಕಲಾವಿದೆ ಸೋನು ಗೌಡ ಅವರು ಯೋಗ ಟೀಶರ್ಟ್ ಧರಿಸಿ, ಪ್ರಚಾರ ನೀಡುತ್ತಿದ್ದಾರೆ.

Aziteezನ ಆಶಯ
Aziteezನ ಆಶಯ ಕನ್ನಡದ ಜೊತೆ ನಾವು ಬೆಳೆಯುತ್ತೆವೆಯೋ ಅಥವಾ ನಮ್ಮ ಜೊತೆ ಕನ್ನಡ ಬೆಳೆಯುತ್ತದೆಯೋ ಎಂಬ ಎರಡು ವರುಷದ ಹಿಂದಿನ ಪ್ರಶ್ನೆಗೆ ಉತ್ತರವಾಗಿ ಈಗ Aziteez ಬೆಳೆಯುತ್ತಿದೆ. ತಮ್ಮ ಆಯ್ಕೆಯ ಅಂಗಿಗಳನ್ನು, ಕುರ್ತಾಗಳನ್ನು ಮನಬಂದಂತೆ ಖರೀದಿಸಬಹುದು. ಕನ್ನಡದ ಕಂಪನ್ನು ಪಸರಿಸಬಹುದು. ನಮ್ಮ ನಿತ್ಯ ವ್ಯವಹಾರದಲ್ಲಿ ಕನ್ನಡ ಪಾಲ್ಗೊಳ್ಳಲಿ ಎಂಬುದು Aziteezನ ಆಶಯ.ಹಾಲ್ಗಡಲ ಒಡಲ ಒಳಗಿಂದ ಬಂದ ಸುಧೆಯಂತೆ ಈ ಭಾಷೆ .. ಅದಕ್ಕೆ ಈ ಕನ್ನಡದೊಳ್ ಸುಧೆಯುಂಟು. ಚಿತ್ರದಲ್ಲಿ ನಟಿ ಸೋನು ಗೌಡ

ಸೆಲೆಬ್ರಿಟಿಗಳಿಂದ ಪ್ರಚಾರ
ಪ್ರದೇಶವಾರು ಸಂಸ್ಕೃತಿಗೆ ಅನುಗುಣವಾಗಿ ಅಲ್ಲಿನ ಭಾಷೆ, ನುಡಿಗಟ್ಟುಗಳನ್ನು ಬಳಸಿ ಟೀ ಶರ್ಟ್ ವಿನ್ಯಾಸಗೊಳಿಸುತ್ತೇವೆ. ಐಟಿ ಕಂಪನಿಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಈಗಾಗಲೇ 25 ಕ್ಕೂ ಅಧಿಕ ಐಟಿ ಸಂಸ್ಥೆಗಳಿಗೆ ಟೀ ಶರ್ಟ್ ಮಾರಾಟ ಮಾಡಿದ್ದೇವೆ ನಮ್ಮ ಕಚೇರಿ ಪುಟ್ಟೇನಹಳ್ಳಿ ಬಳಿ ಇದೆ. ಆನ್ ಲೈನ್ ಪ್ರಚಾರ ಬಿಟ್ಟರೆ ಬೇರೆ ಯಾವ ರೀತಿ ಪ್ರಚಾರ ಕೈಗೊಂಡಿಲ್ಲ ಎಂದು ಸುಧೀಂದ್ರ ತಿಳಿಸಿದರು.

ಟೀ ಶರ್ಟ್ ಮೂಲಕ
ವಿಧಾನ ಸೌಧದ ಮುಂದೆ ಇತ್ತೀಚೆಗೆ ಗಿನ್ನೆಸ್ ದಾಖಲೆ ನಿರ್ಮಿಸಿದ ಯೋಗ ತಂಡದವರು ಈ ಯೋಗ ಟೀ ಶರ್ಟ್ ಗಳನ್ನು ಧರಿಸಿದ್ದರು. ಕನ್ನಡ ಸೆಲೆಬ್ರಿಟಿಗಳಾದ ಡಾ. ರಾಜ್ ಕುಮಾರ್, ಶಂಕರ್ ನಾಗ್, ಕಲೆ, ಕಲಾವಿದ, ಊರು ಕೇರಿ, ದಿನಾಚರಣೆಗೆ ಅಂಗವಾಗಿ ವಿಶೇಷ ಟೀ ಶರ್ಟ್ ಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ.

ಕಚೇರಿ ವಿಳಾಸ
ಖರೀದಿ ಹೇಗೆ? ವಿವಿಧ ವಿನ್ಯಾಸದ ಅಂಗಿಗಳನ್ನು ಆನ್ ಲೈನ್ ನಲ್ಲಿ www.aziteez.com ಗೆ ಭೇಟಿ ನೀಡಿ ಖರೀದಿಸಬಹುದು.
ಫೇಸ್ ಬುಕ್ ನಲ್ಲಿ : https://www.facebook.com/AziTeez?fref=ts ಕ್ಯಾಶ್ ಅಂಡ್ ಡೆಲಿವರಿ ಸೌಲಭ್ಯ ಕೂಡಾ ಇದೆ
Customer Care : 7259144494, 8970875517
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications