ಪ್ರಯಾಣಿಕರಿಗೆ ಓಲಾ ನೀಡಲಿದೆ ವಿಮೆ: ನಿಶ್ಚಿಂತೆಯಿಂದ ಪ್ರಯಾಣಿಸಿ
ಬೆಂಗಳೂರು, ಏಪ್ರಿಲ್ 06: ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಓಲಾ ಕ್ಯಾಬ್ ಕಂಪನಿಯು ವಿಮಜೆ ಸೌಲಭ್ಯ ನೀಡಲು ಮುಂದಾಗಿದೆ.
ಪ್ರಯಾಣಿಕರು ಕ್ಯಾಬ್ ನಲ್ಲಿ ಚಲಿಸುವಾಗ ಸಾವಿಗೀಡಾದರೆ, ವಿಮಾನ ತಪ್ಪಿ ಹೋದರೆ, ಅಪಘಾತಕ್ಕೀಡಾದರೆ, ವಸ್ತುಗಳು ಕಳೆದು ಹೋದರೆ ವಿಮೆಯ ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ. ಕ್ಯಾಬ್ ಆಟೋ ರಿಕ್ಷಾ ಸೇವೆಯಲ್ಲಿ ಈ ಸೌಲಭ್ಯವಿದ್ದು, ಪ್ರತಿ ಬಾರಿ ಪ್ರಯಾಣವನ್ನು ಬುಕಿಂಗ್ ಮಾಡುವಾಗ ಸೌಲಭ್ಯವನ್ನ ಆರಿಸಿಕೊಳ್ಳಬಹುದು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಚಲೋ ಬೇಫಿಕರ್ ಯೋಜನೆಯಡಿ ಈ ಸೌಲಭ್ಯವನ್ನು ಪಡಿಚರಿಯಿಸಿದ್ದು, ಅಕೊ ಜನರಲ್ ಇನ್ಶೂರೆನ್ಸ್ ಕಂಪನಿ ಜತೆಗೆ ಒಪ್ಪಂದು ಮಾಡಿಕೊಂಡಿದ್ದು 5 ಲಕ್ಷದವರೆಗೆ ವಿಮೆ ಸೌಲಭ್ಯ ನೀಡಲಾಗುತ್ತದೆ. ಒಪ್ಪಣದದಲ್ಲಿ ಒಟ್ಟು 110 ನಗರಗಳಲ್ಲಿ ಸೌಲಭ್ಯ ನೀಡಲಾಗುತ್ತದೆ.

ಪ್ರಯಾಣ ಮಾಡುವ ಮುನ್ನ ಪ್ರಯಾಣಿಕರು ವಿವಿಧ ವಿಮೆಗಳನ್ನು ಪಡೆಯಬಹುದು. ಅಂತರ್ ನಗರ ಪ್ರಯಾಣಕ್ಕೆ 1 ರೂ, ಓಲಾ ಬಾಡಿಗೆಗೆ 10 ರೂ. ಹಾಗೂ ಓಲಾ ಔಟ್ ಸ್ಟೇಷನ್ ಗೆ 15 ರೂ. ಪಾವತಿಸಿ ವಿಮೆ ಆಯ್ಕೆ ಮಾಡಿಕೊಳ್ಳಬಹುದು.
ಮೊದಲ ಹಂತದಲ್ಲಿ ದೇಶದ ಮೆಟ್ರೋ ನಗರಗಳಲ್ಲಿ ಮಾತ್ರ ಈ ಸೌಲಭ್ಯವನ್ನು ನೀಡಲಾಗುತ್ತದೆ. ಉಳಿದ ನಗರಗಳಲ್ಲಿ ಹಂತ-ಹಂತವಾಗಿ ಜಾರಿ ಮಾಡಲಾಗುತ್ತದೆ. ಓಲಾ ಅಪ್ಲಿಕೇಷನ್, ಅಕೊ ಕಂಪನಿಯ ವೆಬ್‌ಸೈಟ್ ಮೂಲಕ ವಿಮೆ ಖರೀದಿಸಬಹುದು. ಅದೇ ಅಪ್ಲಿಕೇಷನ್ ಅಥವಾ ಓಲಾ ಸಹಾಯವಾಣಿ ಮೂಲಕವೂ ವಿಮೆ ಪಡೆಯಬಹುದು.












Click it and Unblock the Notifications