Video viral: ಆಫ್‌ ಮಾಡೋ..ವಿಡಿಯೋ ಆಫ್‌ ಮಾಡು..! ಬೈಕ್ ಸವಾರ vs ಕಾರು ಚಾಲಕ, ಆಗಿದ್ದೇನು?

ಬೆಂಗಳೂರು, ಮೇ 02: ಬೆಂಗಳೂರು ಇಲ್ಲಿನ ಸಂಚಾರ ದಟ್ಟಣೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಅತ್ಯಧಿಕ ಸಂಚಾರ ದಟ್ಟಣೆಯ ಕೆಲವು ನಗರಗಳ ಪೈಕಿ ಬೆಂಗಳೂರು ಸಹ ಅಗ್ರ ಸ್ಥಾನದಲ್ಲಿದೆ. ಹೀಗಿರುವಾಗ ನಿತ್ಯವು ಒಂದಲ್ಲ ಒಂದು ಕಡೆ ಸಂಚಾರ ನಿಯಮ ಉಲ್ಲಂಘನೆ, ಇತರ ಸಮಸ್ಯೆಗಳು ಕಂಡು ಬರುವುದು ಸಾಮಾನ್ಯ ಎಂಬಂತಾಗಿದೆ. ಇಲ್ಲೊಬ್ಬ ಇನ್ನೋವಾ ಕಾರು ಚಾಲಕ ತಪ್ಪು ದಾರಿಯಲ್ಲಿ ಬಂದಿದ್ದಲ್ಲದೇ ವಿಡಿಯೋ ಮಾಡಿದವನ ಮೇಲೆ ಆವಾಜ್ ಹಾಕಿದ ಘಟನೆ ನಡೆದಿದೆ. ಪೊಲೀಸರು ಸೂಕ್ತ ಕ್ರಮ ಜರಗಿಸಿದ್ದಾರೆ.

ಬೆಂಗಳೂರಿನ ಮೇಲ್ಸೇತುವೆ ಇರುವ ಪ್ರಮುಖ ರಸ್ತೆಯೊಂದರಲ್ಲಿ ಘಟನೆ ನಡೆದಿದ್ದು, ಎಲ್ಲಿ ಎಂಬ ನಿಖರತೆ ಇಲ್ಲ. ಬೈಕ್ ಸವಾರು ಸಾಗುತ್ತಿದ್ದ ಈ ಪ್ರಮುಖ ರಸ್ತೆಯಲ್ಲಿ ಸವಾರನಿಗೆ ಎದುರಾಗಿ ತಪ್ಪು ದಾರಿಯಲ್ಲಿ (ರಾಂಗ್ ಸೈಡ್) ಇನ್ನೊವಾ ಕಾರು ಬಂದಿದೆ. ಇದನ್ನು ಬೈಕ್ ಸವಾರ ವಿಡಿಯೋ ಮಾಡುವುದು ನೋಡಿ ಆ ಕಾರಿನ ಚಾಲಕ ಕಿಡಿ ಕಾರಿದ್ದಾನೆ. ನೀನು ಯಾವತ್ತು ತಪ್ಪೇ ಮಾಡಲ್ವಾ. ರೀತಿಯ ರೂಲ್ಸ್ ಬಿಟ್ಟು ಬೇರೆ ದಾರಿಲಿ ಹೋಗೆ ಇಲ್ಲವಾ? ಎಂದೆಲ್ಲ ಮಾತನಾಡಿದ್ದಾನೆ.

Innova Driver Caught on Video for Wrong-Side Driving in Bengaluru Shouts at Biker Video Viral

'ಆಫ್ ಮಾಡು ವಿಡಿಯೋನಾ...ವಿಡಿಯೋ ಆಫ್ ಮಾಡೋ...' ಎಂದು ಬಲವಂತವಾಗಿ ಪೀಡಿಸಿದ್ದಾನೆ. ಇದರೊಂದಿಗೆ ತಪ್ಪು ದಾರಿಯಲ್ಲಿ ವಾಹನ ಸವಾರನಿಗೆ ಎದುರಾಗಿ ಕಾರಿನ ನಂತರ ಮತ್ತೊಂದು ಬೈಕ್, ಆಟೋ ರಿಕ್ಷಾ ಸಹ ಎದುರಾಗಿದೆ. ಆದರೆ ಅದರ ನಂಬರ್‌ಗಳ ಸರಿಯಾಗಿ ಕಂಡಿಲ್ಲ. ಅವುಗಳ ವಿಡಿಯೋ ಸಹ ಮಾಡಿದ್ದೇನೆ ಎಂದರೂ ಬಿಡದ ಕಾರಿನ ಚಾಲಕ, 'ಇಂತಹ ಟೈಮ್‌ನಲ್ಲಿ ಮೊಬೈಲ್ ಹಿಡಿದುಕೊಂಡು ಬರ್ತಿರಾ. ಬೇರೆ ಆಟೋ ಬೈಕ್ ಸಹ ಇದೇ ದಾರಿಯಲ್ಲೇ ಹೊಯ್ತು ಅವರದ್ದು ಯಾಕೆ ವಿಡಿಯೋ ಮಾಡಿಲ್ಲ' ಎಂದು ಚಾಲಕ ಆವಾಜ್ ಹಾಕಿದ್ದಾನೆ.

ನಂತರ ಬೈಕ್ ಸವಾರನ ಫೋಟೋ, ಆತನ ದ್ವಿಚಕ್ರ ವಾಹನದ ಫೋಟೋ ಸೆರೆ ಹಿಡಿದ ಕಾರಿನ ಚಾಲಕ ಬಲವಂತವಾಗಿ ವಿಡಿಯೋ ಆಫ್ ಮಾಡಿಸಲು ಮುಂದಾಗಿದ್ದಾರೆ. ಮೊದಲು ವಿಡಿಯೋ ಸೆರೆ ಹಿಡಿಯುವುದು ನಿಲ್ಲಿಸುಂತೆ ಆಗ್ರಹಿಸಿದ್ದನ್ನು ನೀವು ವಿಡಿಯೋದಲ್ಲಿ ನೋಡಬಹುದಾಗಿದೆ.

ಈ ವಿಡಿಯೋ @motordave2 ಎಕ್ಸ್‌ ಖಾತೆಯಿಂದ ಹಂಚಿಕೊಳ್ಳಲಾಗಿದೆ. ತಪ್ಪು ದಾರಿಯಲ್ಲಿ ಕಾರು, ಆಟೋ, ಬೈಕ್ ಬರುವುದು ಏಕೆ? ಬೆಂಗಳೂರು ಸಂಚಾರಿ ಪೊಲೀಸರನ್ನು ಟ್ಯಾಗ್ ಮಾಡಿ ಪ್ರಶ್ನೆ ಮಾಡಲಾಗಿದೆ. ನೀವು ಬಂದಿದ್ದು ತಪ್ಪು ದಾರಿ. ಬೇರೆಯವರಿಗೆ ಸಮಸ್ಯೆ ಆಗುತ್ತದೆ ಎಂದು ವಾಹನ ಸವಾರರ ಆಗ್ರಹಿಸಿದ್ದಾನೆ. ಇವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ದಂಡ ಕ್ರಮ ಜರುಗಿಸಿದ ಪೊಲೀಸ್

ಈ ವಿಡಿಯೋ ಟ್ಯಾಗ್ ಮಾಡಿದ ಬೆನ್ನಲ್ಲೆ ಬೆಂಗಳೂರು ಸಂಚಾರಿ ಪೊಲೀಸರು ಇನ್ನೋವಾ ಕಾರಿನ ನೋಂದಣಿ ಆಧರಿಸಿ ಚಾಲಕನನ್ನು ಪತ್ತೆ ಮಾಡಿದ್ದಾರೆ. ಆತನಿಂದ ರಾಂಗ್ ಸೈಡ್ ಚಾಲನೆಗಾಗಿ ದಂಡ ಕಟ್ಟಿಸಿಕೊಂಡಿದ್ದಾರೆ. ಈ ಸಂಬಂಧ ಫೋಟೋ ಸಮೇತ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.

Innova Driver Caught on Video for Wrong-Side Driving in Bengaluru Shouts at Biker Video Viral

ಪೊಲೀಸಪ್ಪನ ಬೈಕ್‌ನಲ್ಲಿ ಮದ್ಯ, ಆಕ್ರೋಶ

ಮತ್ತೊಂದು ಪ್ರತ್ಯೇಕ ಪ್ರಕರಣಗಳಲ್ಲಿ ನಡು ರಸ್ತೆಯಲ್ಲಿ ರಾತ್ರಿ ಪೊಲೀಸರ ಚಿತಾ ಬೈಕ್‌ನಲ್ಲಿ ಎಣ್ಣೆ ಇಟ್ಟುಕೊಂಡು ಬರುತ್ತಿದ್ದ ಘಟನೆ ನಡೆದಿದೆ. ಇದರ ವಿಡಿಯೋ ವನ್ನು @nuthannnnnn ಎಕ್ಸ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. 'ಕನ್ನಡಿಗರ ಮೇಲೆ ದೌರ್ಜನ್ಯಗಳು ನಡೀತಾ ಇದ್ದರೂ ಕಣ್ಣಿಗೆ ಸುಣ್ಣ ಮೆತ್ಕೊಂಡ್ ಇರೋ ಮಹಾ ಪೊಲೀಸ್ ಸಂಸ್ಥೆಯ ಅಸಲಿ ಬಣ್ಣ ನೋಡಿ. ಇಂಥ ಸಂಸ್ಥೆ ಇಂದ ಏನ್ ತಾನೇ ಅಪೇಕ್ಷೆ ಮಾಡಕ್ ಸಾಧ್ಯ? ಅನ್ಯಾಯಗಳಿಗೆ ಇವರಿಂದ ನಮಗೆಲ್ಲ ನ್ಯಾಯ ಸಿಗುತ್ತಾ?
ಏನ್ರೀ''? ಎಂದು ಬರೆಯಲಾಗಿದೆ. ಬೆಂಗಳೂರು ಸಂಚಾರಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ.

ವಿಡಿಯೋದಲ್ಲಿರುವ ವ್ಯಕ್ತಿ ಪೊಲೀಸರಿಗೆ ಬೈದಿರುವುದು ಸರಿಯಾಗಿದೆ ಎಂದು ಬರೆಯಲಾಗಿದೆ. ಬೈಯುತ್ತಿದ್ದಂತೆ ಬೈಕ್ ಬಿಟ್ಟು ಪೊಲೀಸಪ್ಪ ಅಲ್ಲಿಂದ ನಡೆದುಕೊಂಡು ಹೋಗಿದ್ದಾನೆ. ಬೈಕ್ ಸೈಡ್ ಬ್ಯಾಗ್ ತುಂಬ ನೀಲಿ ಕವರ್‌ನಲ್ಲಿ ಬಿಯರ್, ಮದ್ಯದ ಬಾಟಲಿಗಳು ಕಂಡು ಬಂದಿವೆ. ಪೊಲೀಸರ ಇಂತಹ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+