ಸಾಹಿತಿ ಕೆ. ಎಸ್. ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ
ಬೆಂಗಳೂರು, ಫೆಬ್ರವರಿ 4; ಹಿರಿಯ ಸಾಹಿತಿ, ಚಿಂತಕ ಕೆ. ಎಸ್. ಭಗವಾನ್ ಮುಖಕ್ಕೆ ನ್ಯಾಯಾಲಯದ ಆವರಣದಲ್ಲಿ ಮಸಿ ಬಳಿಯಲಾಗಿದೆ. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಕಾರಣಕ್ಕೆ ವಕೀಲೆಯೊಬ್ಬರು ಮಸಿ ಬಳಿದಿದ್ದಾರೆ.
ಗುರುವಾರ ಬೆಂಗಳೂರಿನ 2ನೇ ಎಸಿಎಂಎಂ ನ್ಯಾಯಾಲಯದ ಆವರಣದಲ್ಲಿ ಈ ಘಟನೆ ನಡೆದಿದೆ. ವಕೀಲೆ ಮೀರಾ ರಾಘವೇಂದ್ರ ಅವರು ಭಗವಾನ್ ಅವರ ಮುಖಕ್ಕೆ ಕೋರ್ಟ್ ಆವರಣದಲ್ಲಿಯೇ ಮಸಿ ಬಳಿದಿದ್ದಾರೆ.

ಭಗವಾನ್ ವಿರುದ್ಧ ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡಿದ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆಗಾಗಿ ಅವರು ನ್ಯಾಯಾಲಯಕ್ಕೆ ಗುರುವಾರ ಆಗಮಿಸಿದ್ದರು. ಆಗ ಮಸಿ ಬಳಿಯಲಾಗಿದೆ.
ಈ ಬಗ್ಗೆ ಸ್ವತಃ ವಕೀಲೆ ಮೀರಾ ರಾಘವೇಂದ್ರ ಅವರು ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
"ಬುದ್ಧಿಜೀವಿ, ಧರ್ಮ ವಿರೋಧಿ ಫ್ರೊಭಗವಾನ್ ಇಂದು ಕೋರ್ಟ್ ಕಟಕಟೆಗೆ ಹಾಜರಾಗಿ ಜಾಮೀನು ಪಡೆದುಕೊಂಡರು. ಅವರಿಗೆ ಮಸಿ ಬಳಿದು ತಕ್ಕ ಶಾಸ್ತಿ ಮಾಡಿದ್ದೇನೆ. ಜೈಶ್ರೀರಾಮ್" ಎಂದು ಪೋಸ್ಟ್ ಹಾಕಿದ್ದಾರೆ.
ವಕೀಲೆ ಮಸಿ ಬಳಿಯುತ್ತಿದ್ದಂತೆ ಭಗವಾನ್ ಅವರನ್ನು ಗನ್ ಮ್ಯಾನ್ ಹಾಗೂ ಪೊಲೀಸರು ಕೋರ್ಟ್ ಆವರಣದಿಂದ ಕರೆದುಕೊಂಡು ಹೋದರು. ಭಗವಾನ್ ಮೀರಾ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಸಿ ಬಳಿದ ವಿಡಿಯೋ
ಮೈಸೂರಿನಲ್ಲಿ ಭಗವಾನ್ ಮುಖಕ್ಕೆ ಮಸಿ ಎರಚಿದ ವಕೀಲೆ#Mysuru #Bhagwan pic.twitter.com/aaz0mfcu4E
— oneindiakannada (@OneindiaKannada) February 4, 2021












Click it and Unblock the Notifications