Get Updates
Get notified of breaking news, exclusive insights, and must-see stories!

ರೈತ ನಾಯಕ ರಾಕೇಶ್ ಟಿಕಾಯಿತ್‌ಗೆ ಮಸಿ - ಮೋದಿಗೆ ಜೈಕಾರ..!

ಬೆಂಗಳೂರು, ಮೇ30: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮೇಲೆ‌ ಕೆಲವು ದಿನಗಳಿಂದ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು‌. ಜೊತೆಗೆ ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಟಿಕಾಯಿತ್, ರೈತ ಮುಖಂಡ ಯದುವೀರ್ ಸಿಂಗ್ ಸೇರಿದಂತೆ ರಾಷ್ಟ್ರೀಯ ರೈತ ಮುಖಂಡರ ಮೇಲೆ ಆಪಾದನೆಗಳು ಕೇಳಿಬಂದಿತ್ತು. ಇದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಗಳೂರಿನ ಗಾಂಧಿಭವನದಲ್ಲಿ ರೈತ ಚಳವಳಿ- ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆ ಹಮ್ಮಿಕೊಂಡಿತ್ತು‌‌.

Recommended Video

      Rakesh Tikait ರೈತ ಮುಖಂಡರ ಮುಖಕ್ಕೆ ಮಸಿ!! | #karnataka | Oneindia Kannada

      ಸಭೆಯಲ್ಲಿ ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಟಿಕಾಯಿತ್ ಸೇರಿ ರಾಷ್ಟ್ರ ಮಟ್ಟದ ರೈತ ಮುಖಂಡರು ಭಾಗಿಯಾಗಿದ್ದರು. ಸಭೆ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಕೇಶ್ ಟಿಕಾಯಿತ್, "ನನ್ನ ಮೇಲೆ ಬಂದ ಆರೋಪಗಳೆಲ್ಲವೂ ಶುದ್ದ ಸುಳ್ಳಾಗಿದೆ. ದೆಹಲಿಯಲ್ಲಿ ನಡೆದ ಪ್ರತಿಭಟನೆಗೆ ರಾಜ್ಯದಿಂದ ಕೊಡಿಹಳ್ಳಿ ಚಂದ್ರಶೇಖರ್ ಅವರನ್ನು ಕರೆದಿರಲಿಲ್ಲ.‌ ಅಲ್ಲದೆ‌ ವೈರಲ್ ಆದ ಆಡಿಯೊ ಸಂಭಾಷಣೆಯಲ್ಲಿ ನನ್ನ ಹೆಸರು ತಳಕು ಹಾಕಿಕೊಂಡಿದೆ,' ಎಂದು ತಿಳಿಸಿದರು.

      ಹಣದ ವಿಚಾರವಾಗಿ ಯಾವೊಬ್ಬ ರೈತ ಮುಖಂಡನ ಜೊತೆಯಲ್ಲಿಯೂ ನಾನು ಮಾತನಾಡಿಲ್ಲ ಎಂದು ಹೇಳುತ್ತಿದ್ದಂತೆ ಪತ್ರಕರ್ತರ ಸೋಗಿನಲ್ಲಿದ್ದ ಮೂವರು‌ ಕಿಡಿಗೇಡಿಗಳು ಏಕಾಏಕಿ ವೇದಿಕೆ ಹತ್ತಿ ರಾಷ್ಟ್ರೀಯ ರೈತ ಮುಖಂಡರಾದ ರಾಕೇಶ್ ಟಿಕಾಯಿತ್, ಯದುವಿರ್ ಸಿಂಗ್ ಮೇಲೆ ಕಪ್ಪು‌ ಮಸಿ ಎರಚಿದ್ದಾರೆ. ಮಾಧ್ಯಮವೊಂದರ ಲೋಗೊ ಕೇಬಲ್ ನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಮೋದಿ-‌ಮೋದಿ ಎಂದು ಘೋಷಣೆ ಕೂಗಿದ್ದಾರೆ. ಸಭೆಯಲ್ಲಿದ್ದ ರೈತ ಮುಖಂಡರು ಕಿಡಿಗೇಡಿಗಳ ಹಿಡಿಯಲು ಹೋದಾಗ ತಪ್ಪಿಸಿಕೊಳ್ಳಲು‌ ಪ್ರಯತ್ನಸಿದ್ದಾರೆ. ಈ ವೇಳೆ ಸಭಾಂಗಣದಲ್ಲಿದ್ದ ಕುರ್ಚಿಗಳಿಂದ ರೈತ ಮುಖಂಡರು ಹಲ್ಲೆ ನಡೆಸಿದ್ದಾರೆ.

      ಹೈಗ್ರೌಂಡ್ಸ್ ಪೊಲೀಸರಿಂದ ಮೂವರ ಬಂಧನ

      ಹೈಗ್ರೌಂಡ್ಸ್ ಪೊಲೀಸರಿಂದ ಮೂವರ ಬಂಧನ

      ರಾಕೇಶ್ ಟಿಕಾಯಿತ್ ಮೇಲೆ ಕಪ್ಪು ಮಸಿ ಬಳಿದ ನಂತರ ಗಾಂಧಿಭವನ ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿತ್ತು. ಇದರ ಪರಿಣಾಮ ಐದು ಕುರ್ಚಿಗಳು ಪುಡಿಪುಡಿಯಾಗಿವೆ. ಕೊನೆಗೆ ಮೂವರು‌ ಕಿಡಿಗೇಡಿಗಳನ್ನು ಹಿಡಿದು ಹೈಗ್ರೌಂಡ್ಸ್ ಪೊಲೀಸರಿಗೆ ವಶಕ್ಕೆ ನೀಡಿದ್ದಾರೆ‌. ವಿಚಾರಣೆ ವೇಳೆ ಭರತ್ ಶೆಟ್ಟಿ, ಪ್ರತಾಪ್, ಶಿವಕುಮಾರ್ ಎಂದು ಗೊತ್ತಾಗಿದ್ದು ಕರವೇ ಕಾರ್ಯಕರ್ತರು ಎಂದು ಹೇಳಲಾಗುತ್ತಿದೆ‌‌. ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಭರತ್ ಶೆಟ್ಟಿ ಹಿಂದೂ ಪರ ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದಾನೆ.

      ಗಾಂಧಿ ಪ್ರತಿಮೆ‌ ಮುಂದೆ ಪ್ರತಿಭಟನೆ

      ರಾಷ್ಟ್ರೀಯ ರೈತ ಮುಖಂಡರ ಮೇಲೆ‌ ಹಲ್ಲೆಯಾಗುತ್ತಿದ್ದಂತೆ ಸಭೆಯಲ್ಲಿ ಭಾಗಿಯಾಗಿದ್ದ ವಿವಿಧ ಜಿಲ್ಲೆಗಳ ರೈತ ಮುಖಂಡರೆಲ್ಲರೂ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. ನ್ಯಾಯಕ್ಕಾಗಿ ಘೋಷಣೆ ಕೂಗಿದರು. ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದೇ ವೇಳೆ ಡಿಸಿಪಿ‌ ಶರಣಪ್ಪ ಸ್ಥಳಕ್ಕೆ ದೌಡಾಯಿಸಿ ನಡೆದ ಘಟನೆ ಬಗ್ಗೆ ರೈತ ಮುಖಂಡರಿಂದ ಮಾಹಿತಿ ಪಡೆದುಕೊಂಡರು. ದೂರ ನೀಡಿದರೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

      ಮೋದಿ ಜೈಕಾರ ಕೂಗಿ ರಾಜಕೀಯ ಎಳೆದೆ ದುಷ್ಕರ್ಮಿಗಳು

      ಮೋದಿ ಜೈಕಾರ ಕೂಗಿ ರಾಜಕೀಯ ಎಳೆದೆ ದುಷ್ಕರ್ಮಿಗಳು

      ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಟಿಕಾಯಿತ್ ಮೇಲೆ ಕಪ್ಪು ಮಸಿಯನ್ನು ಬಳಿದ ದುಷ್ಕರ್ಮಿಗಳು ಮೋದಿ ಜೈಕಾರವನ್ನು ಹಾಕಿದ್ದಾರೆ. ರೈತ ನಾಯಕನಿಗೆ ಮಸಿ ಬಳಿದಿರೋ ವಿಚಾರವಿನ್ನು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಆರೋಪ ಪ್ರತ್ಯಾರೋಪಕ್ಕೆ ವೇದಿಕೆಯಾಗಲಿದೆ.

      ಪ್ರಭಾರ ಡಿಸಿಪಿ ಶರಣಪ್ಪ ಹೇಳಿದ್ದೇನು..?

      ಪ್ರಭಾರ ಡಿಸಿಪಿ ಶರಣಪ್ಪ ಹೇಳಿದ್ದೇನು..?

      ರಾಕೇಶ್ ಟಿಕಾಯತ್ ಮೇಲೆ ಮಸಿ ಬಳಿದ ಪ್ರಕರಣದಲ್ಲಿ ಕೇಂದ್ರ ವಿಭಾಗ ಪ್ರಭಾರ ಡಿಸಿಪಿ ಶರಣಪ್ಪ ಹೇಳಿಕೆ ನೀಡಿದ್ದಾರೆ. ರೈತರ ಆತ್ಮಾವಲೋಕನ ಹಾಗೂ ಸ್ಪಷ್ಟಿಕರಣ‌ ಸಭೆ ಗಾಂಧಿಭವನದಲ್ಲಿ ಇತ್ತು. ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡುತ್ತಿದ್ದಾಗ, ಹಲ್ಲೆ ಮಾಡಿ ಮಸಿ ಬಳಿಯಲಾಗಿದೆ ಎಂದು ದೂರು ನೀಡಿದ್ದಾರೆ. ಈಗಾಗ್ಲೇ ಮೂವರನ್ನ ವಶಕ್ಕೆ ಪಡೆದು,ವಿಚಾರಣೆ ಮಾಡಲಾಗ್ತಿದೆ. ಪ್ರಾಥಮಿಕವಾಗಿ ಪತ್ರಿಕಾಗೋಷ್ಠಿ ಅಡ್ಡಪಡಿಸಲು ಮುಂದಾಗಿದ್ದಾರೆ. ಆದರೆ ಕಾರಣವೇನೆಂದು ವಿಚಾರಣೆ ಬಳಿಕ ತಿಳಿಯಲಿದೆ. ಅಲ್ಲಿ ಸೇರಿದ್ದವರು ಮತ್ತು ಮಸಿ ಬಳಿದವರ ಮಧ್ಯೆ ಗಲಾಟೆ ಆಗಿದೆ. Ipc 355, 354, 324 ,504 , 506,323,134 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸಿಸಿಟಿವಿ ಹಾಗೂ ಮೊಬೈಲ್ ವಿಶ್ಯೂವಲ್ಸ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+