ಸಂಪುಟ ವಿಸ್ತರಣೆಯಿಂದ ನಮ್ಮ ನಾಯಕರಿಗಾದ ಅನ್ಯಾಯ ಸರಿಪಡಿಸಲಿ: ಎಂಬಿ ಪಾಟೀಲ್

ಬೆಂಗಳೂರು, ಡಿಸೆಂಬರ್ 15: ಉತ್ತರ ಕರ್ನಾಟಕದ ನಾಯಕರಿಗೆ ಮಾಡಿರುವ ಅನ್ಯಾಯವನ್ನು ಸಚಿವ ಸಂಪುಟ ವಿಸ್ತರಣೆಯಲ್ಲಾದರೂ ಸರಿಪಡಿಸಿ ಎಂದು ಮಾಜಿ ಸಚಿವ ಎಂಬಿ ಪಾಟೀಲ್ ಒತ್ತಾಯಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 22ರಂದು ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಆದರೆ ಈ ಮೊದಲು ಉತ್ತರ ಕರ್ನಾಟಕದ ನಾಯಕರಿಗೆ ತೋರಿದ ತಾರತಮ್ಯವನ್ನು ಸಂಪುಟ ವಿಸ್ತರಣೆಯಿಂದಲಾದರೂ ಬಗೆಹರಿಸಿ ಎಂದ ಹೇಳಿದ್ದಾರೆ.

ಡಿಸೆಂಬರ್ 21ರಂದು ದೆಹಲಿಯಲ್ಲಿ ರಾಜ್ಯ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಭೆ ನಡೆಸಲಿದ್ದಾರೆ. ಈ ಕುರಿತು ಅಂದೇ ತೀರ್ಮಾನವಾಗಲಿದೆ. ಒಂದು ವೇಳೆ ಸಂಪುಟ ವಿಸ್ತರಣೆಗೆ ಅಂದೇ ಗ್ರೀನ್ ಸಿಗ್ನಲ್ ದೊರೆತರೆ ಡಿ.22ರಂದು ಅಂಪುಟ ವಿಸ್ತರಣೆಯಾಗಲಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಜಿ ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

Injustice meted out to north Karnataka leaders should be corrected during the cabinet expansion

ನಾಲ್ಕೈದು ತಿಂಗಳಿನಿಂದಲೂ ಸಂಪುಟ ವಿಸ್ತರಣೆ ಕಾರ್ಯ ಹಲವು ಕಾರಣಗಳಿಂದ ಮುಂದೂಡಿಕೊಂಡು ಬರಲಾಗುತ್ತಿದೆ. ಇದರಿಂದ ಬೇಸತ್ತು ಹೋಗಿದ್ದ ಕಾಂಗ್ರೆಸ್​ ಸಚಿವಾಕಾಂಕ್ಷಿ ಶಾಸಕರು ಬಂಡಾಯ ಏಳುವ ಸೂಚನೆಯನ್ನು ನೀಡಿದ್ದರು. ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಣೆ ಖಚಿತ ಎಂದು ಮೈತ್ರಿ ನಾಯಕರು ಅತೃಪ್ತರಿಗೆ ಭರವಸೆ ನೀಡಿದ್ದರು. ಆದರೆ, ಮೌನ್ನೆ ಪ್ರಕಟವಾದ ಐದು ರಾಜ್ಯಗಳ ಫಲಿತಾಂಶದಲ್ಲಿ ಕಾಂಗ್ರೆಸ್​ ಪ್ರಬಲ ಪಕ್ಷವಾಗಿ ಹೊರಹೊಮ್ಮಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+