TPG Nambiar: ಬಿಪಿಎಲ್ ಉದ್ಯಮ ಸಂಸ್ಥೆ ಸಂಸ್ಥಾಪಕ ಟಿಪಿಜಿ ನಂಬಿಯಾರ್ ನಿಧನ: ಪ್ರಧಾನಿ ಸೇರಿ ಗಣ್ಯರ ಸಂತಾಪ

ಬೆಂಗಳೂರು, ಅಕ್ಟೋಬರ್ 31: ಕೈಗಾರಿಕೋದ್ಯಮಿ ಬಿಪಿಎಲ್ ಉದ್ಯಮ ಸಂಸ್ಥೆ ಸಂಸ್ಥಾಪಕ ಹಾಗೂ ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಮಾವ ಟಿಪಿಜಿ ನಂಬಿಯಾರ್ (TPG Nambiar) ಅವರು ನಿಧನರಾದರು. ಬೆಂಗಳೂರಿನ ತಮ್ಮ ಸ್ವನಿವಾಸದಲ್ಲಿ ಇಂದು ಗುರುವಾರ ಅಕ್ಟೊಬರ್ 31ರಂದು ಬೆಳಗ್ಗೆ ನಿಧನರಾದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ರಾಜ್ಯ ಸಚಿವರು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

94 ವರ್ಷದ ಟಿಪಿಜಿ ನಂಬಿಯಾರ್ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇವರ ಪೂರ್ಣ ಹೆಸರು ಟಿ.ಪಿ.ಗೋಪಾಲನ್ ನಂಬಿಯಾರ್. ಟಪಿಜಿ ಅಂತಲೇ ಖ್ಯಾತನಾಮರಾಗಿರುವ ಇವರು, ಬಿಪಿಎಲ್ ಉದ್ಯಮ ಸಂಸ್ಥೆಯನ್ನು ಸ್ಥಾಪಿಸಿದ್ದರು. ಒಂದು ಕಾಲದಲ್ಲಿ ಈ ಕಂಪನಿಯು ದೇಶದ ಪ್ರಮುಖ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿತ್ತು.

Industrialist BPL TPG Nambiar Passed Away PM Modi and Politicians Condolence

ಪ್ರಧಾನಿ ನರೇಂದ್ರ ಮೋದಿಯವರು ಟಪಿಜಿ ನಂಬಿಯಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ''ಭಾರತವನ್ನು ಆರ್ಥಿಕವಾಗಿ ಪ್ರಬಲ ದೇಶವನ್ನಾಗಿ ಮಾಡುವ ಗುರಿ ಹೊಂದಿದ್ದ ನಂಬಿಯಾರ್ ಅವರು ನಿಧನ ಸುದ್ದಿ ಅತೀವ ನೋವು ತಂದಿದೆ. ಅವರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ದೇವರು ಕರುಣಿಸಲಿ'' ಎಂದು ಪ್ರಧಾನಿ ಸಾಮಾಜಿಕ ಜಾತಲಾಣ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.

ಸಚಿವ ಎಂಬಿ ಪಾಟೀಲ್ ಸಂತಾಪ

ಬಿಪಿಎಲ್ ಉದ್ಯಮ ಸಂಸ್ಥೆಯ ಸಂಸ್ಥಾಪಕ ಮತ್ತು ಖ್ಯಾತ ಕೈಗಾರಿಕೋದ್ಯಮಿ ಟಿ ಪಿ ಗೋಪಾಲನ್ ನಂಬಿಯಾರ್ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಶೋಕ ವ್ಯಕ್ತಪಡಿಸಿದ್ದಾರೆ.

"ನಂಬಿಯಾರ್ ಅವರು ಭಾರತ ಮಾತ್ರವಲ್ಲ ಕರ್ನಾಟಕದ ಎಲೆಕ್ಟ್ರಾನಿಕ್ ಉದ್ಯಮದಲ್ಲಿ ಹೊಸತನವನ್ನು ಪ್ರಾರಂಭಿಸಿದ ಶಕಪುರುಷರಾಗಿದ್ದರು. ಅವರಿಂದಾಗಿ ನಮ್ಮ ಉದ್ಯಮ‌ಪ್ರಪಂಚದಲ್ಲಿ ಪರಂಪರೆಯೇ ಸೃಷ್ಟಿಯಾಯಿತು. ಅವರ ನಿಧನದಿಂದ ನಾವು ದೂರದೃಷ್ಟಿಯುಳ್ಳ ಓರ್ವ ಧೀಮಂತ ಉದ್ಯಮಿಯನ್ನು ಕಳೆದುಕೊಂಡಿದ್ದೇವೆ" ಎಂದು ಅವರು ಸ್ಮರಿಸಿದರು.

ನಂಬಿಯಾರ್ ಅವರು ಇಟ್ಟ ದಿಟ್ಟ ಹೆಜ್ಜೆಗಳಿಂದಾಗಿ ಬಿಪಿಎಲ್, ದೇಶದಲ್ಲಿ ಮನೆಮಾತಾಯಿತು. ಇದು ಒಂದು ತಲೆಮಾರಿನ ಉದ್ಯಮಿಗಳಿಗೆ ಸ್ಫೂರ್ತಿಯಾಗಿತ್ತು. ನಂಬಿಯಾರ್ ಅವರು ತಮ್ಮ ಸಾಧನೆಗಳ ಮೂಲಕ ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ ಎಂದು ಅವರು ಹೇಳಿದರು.

ತಂತ್ರಜ್ಞಾನವನ್ನು ಆಧರಿಸಿದ ಉದ್ದಿಮೆಯಲ್ಲಿ ಛಾಪು ಮೂಡಿಸಿದ್ದ ನಂಬಿಯಾರ್ ಅವರು ದೇಶ ಮತ್ತು ಕರ್ನಾಟಕದ ಬೆಳವಣಿಗೆಗೆ ಮೌಲಿಕ ಕೊಡುಗೆ ನೀಡಿದವರಾಗಿದ್ದಾರೆ ಎಂದು ಬಣ್ಣಿಸಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಸಂತಾಪ

ಐಕಾನಿಕ್ ಬಿಪಿಎಲ್ ಬ್ರಾಂಡ್‌ನ ಸಂಸ್ಥಾಪಕ ಉದ್ಯಮಿ ಟಿಪಿಜಿ ನಂಬಿಯಾರ್ ಅವರ ನಿಧನದಿಂದ ದುಃಖಿತರಾಗಿದ್ದೇವೆ. ಅವರು ದೀರ್ಘಕಾಲದಿಂದ ಪರಿಚಯವಿದ್ದವರು. ನಂಬಿಯಾರ್ ಅವರ ಅಗಾಧ ಕೊಡುಗೆ ಮತ್ತು ಪರಂಪರೆ ಸದಾ ಸ್ಮರಣೀಯ. ಅವರ ಪ್ರೀತಿಪಾತ್ರರಿಗೆ ನೋವು ತಡೆದುಕೊಳ್ಳುವ ಶಕ್ತಿ ಕೊಡಲಿ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+