Get Updates
Get notified of breaking news, exclusive insights, and must-see stories!

ಬೆಂಗಳೂರು HAL ಸಿಬ್ಬಂದಿಗೆ ರಜೆ ಕ್ಯಾನ್ಸಲ್‌: ಓವರ್ ಟೈಂ ಕೆಲಸಕ್ಕೆ ರೆಡಿಯಾಗಲು ಸೂಚನೆ

ಭಾರತ ಹಾಗೂ ಪಾಕ್‌ ನಡುವೆ ಯುದ್ಧದ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ ದೇಶದಾಧ್ಯಂತ ಹೈಅಲರ್ಟ್‌ ಘೋಷಣೆ ಮಾಡಲಾಗಿದೆ. ಇನ್ನು ರಕ್ಷಣಾ ವಲಯದ ಎಲ್ಲ ಸಿಬ್ಬಂದಿಗೂ ರಜೆ ರದ್ದು ಮಾಡಲಾಗಿದ್ದು, ಹಗಲಿರುಳು ದೇಶಕ್ಕಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿರುವ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಹೆಚ್‌ಎಎಲ್‌) ಕೂಡ ಭಾರತೀಯ ಸೇನೆಯ ಬೆನ್ನೆಲುಬಾಗಿರುವುದರಿಂದ ಎಲ್ಲ ಸಿಬ್ಬಂದಿಗೆ ರಜೆ ರದ್ದು ಮಾಡಲಾಗಿದೆ. ಹೆಚ್ಚುವರಿಗೆ ಸಮಯ ಕೆಲಸ ಮಾಡಲು ಎಲ್ಲರೂ ಸಜ್ಜಾಗಿ ಎಂದು ಕರೆ ನೀಡಲಾಗಿದೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ಸೇನೆ ಹಾಗೂ ರಕ್ಷಣಾ ವಲಯಕ್ಕೆ ತನ್ನದೇ ಸಹಕಾರ ನೀಡುತ್ತಿದೆ. ಇದು ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಹಾಗೂ ರಕ್ಷಣಾ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾಗಿರುವ ಹಿನ್ನೆಲೆ ಈ ಸನ್ನಿವೇಶದಲ್ಲಿ ಸಿಬ್ಬಂದಿ ಸಹಕಾರ ಕೂಡ ಅತಿ ಮುಖ್ಯ ಎನ್ನಲಾಗಿದೆ. ಈ ಹಿನ್ನೆಲೆ ಎಲ್ಲ ಸಿಬ್ಬಂದಿಗೂ ರಜೆ ರದ್ದು ಮಾಡಿ, ಹೆಚ್ಚುವರಿ ಸಮಯ ಕೆಲಸ ಮಾಡಲು ಸಿದ್ಧರಾಗುವಂತೆ ಸೂಚನೆ ನೀಡಲಾಗಿದೆ.

Indo-Pak Tension HAL Staff In Bengaluru Asked To Cancel Leave Report For Overtime Duty

ಆಪರೇಷನ್‌ ಸಿಂಧೂರ್‌ ಬಳಿಕ ಪಾಕಿಸ್ತಾನವು ಭಾರತದ ಮೇಲೆ ಪ್ರತಿದಾಳಿ ಯತ್ನಗಳನ್ನು ನಡೆಸುತ್ತಲೇ ಇದೆ. ನಿನ್ನೆ ರಾತ್ರಿಯೂ ಡ್ರೋನ್‌, ಜೆಟ್‌ಗಳ ಮೂಲಕ ಭಾರತದತ್ತ ನುಗ್ಗಿ ಬರುವ ಪ್ರಯತ್ನವನ್ನು ನಮ್ಮ ಸೇನೆ ತಡೆದಿದೆ. ಪಾಕ್‌ನ ಎಲ್ಲ ದಾಳಿ ಯತ್ನಕ್ಕೂ ಅಲ್ಲೇ ಪ್ರತಿದಾಳಿ ನಡೆಸಿ ತಡೆದಿದೆ. ಇತ್ತ ಗಡಿಭಾಗ ಜಮ್ಮು ಕಾಶ್ಮೀರದಲ್ಲೂ ಪಾಕ್‌ ಉಗ್ರರ ಅಟ್ಟಹಾಸ ಶುರುವಾಗಿದೆ. ಈ ಹಿನ್ನೆಲೆ ಯುದ್ಧದ ಸನ್ನಿವೇಶಕ್ಕೆ ಎಲ್ಲರನ್ನೂ ಸಜ್ಜುಗೊಳಿಸಲಾಗುತ್ತಿದೆ.

ಭಾರತ ಮತ್ತು ಪಾಕಿಸ್ತಾನ ಆಡಳಿತದಲ್ಲಿರುವ ಕಾಶ್ಮೀರವನ್ನು ಬೇರ್ಪಡಿಸುವ ನಿಯಂತ್ರಣ ರೇಖೆಯ ಪಾಕಿಸ್ತಾನದ ಉಲ್ಲಂಘನೆಗೆ ಸೂಕ್ತ ಪ್ರತ್ಯುತ್ತರ ನೀಡಿದ್ದೇವೆ ಎಂದು ಭಾರತೀಯ ಸೇನೆ ದಾಳಿ ನಡೆಸುವುದನ್ನು ತೋರಿಸುವ ಒಂದು ಸಣ್ಣ ವೀಡಿಯೊ ಕ್ಲಿಪ್ ಬಿಡುಗಡೆ ಮಾಡಿದೆ. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸೇನೆ ಪಾಕಿಸ್ತಾನವು ರಾತ್ರಿಯಿಡೀ ಸರಣಿ ದಾಳಿಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದೆ.

Indo-Pak Tension HAL Staff In Bengaluru Asked To Cancel Leave Report For Overtime Duty

ಪಾಕ್‌ ಹೇಳಿದ್ದೇನು?

ಗಡಿ ದಾಳಿಗಳ ಬಗ್ಗೆ ಪಾಕಿಸ್ತಾನ ರಕ್ಷಣಾ ಸಚಿವರು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಇಸ್ಲಾಮಾಬಾದ್ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದರೆ, ಡ್ರೋನ್ ದಾಳಿಗಳು ಮತ್ತು 78 ಯುದ್ಧ ವಿಮಾನಗಳ ಅತಿಕ್ರಮಣ ಸೇರಿದಂತೆ ಭಾರತದ ಆಕ್ರಮಣವು ಮುಖಾಮುಖಿಯನ್ನು ಸನ್ನಿಹಿತ ಮಾಡಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ.

ಪಾಕಿಸ್ತಾನದ ಪಡೆಗಳು ಐದು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿವೆ ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ ಕಾಶ್ಮೀರ ನಿಯಂತ್ರಣ ರೇಖೆಯ ಉದ್ದಕ್ಕೂ ನಡೆದ ಘರ್ಷಣೆಗಳನ್ನು ಗಮನಿಸುತ್ತಾ, ಭಾರತೀಯ ಸಾವುನೋವುಗಳ ನಿಖರವಾದ ಸಂಖ್ಯೆಯನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ. ಭಾರತವು ಅಶಾಂತಿಯಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಧಾನಿ ಮೋದಿ ಉದ್ವಿಗ್ನತೆಯನ್ನು ಉಂಟುಮಾಡುತ್ತಿದ್ದಾರೆ ಎಂದು ಆಸಿಫ್ ಆರೋಪಿಸಿದ್ದಾರೆ. ಮತ್ತು ಭಯೋತ್ಪಾದಕ ಶಿಬಿರಗಳ ಭಾರತದ ಹಕ್ಕುಗಳ ಬಗ್ಗೆ ಸ್ವತಂತ್ರ ತನಿಖೆಗೆ ಅವಕಾಶ ನೀಡುವ ಪಾಕಿಸ್ತಾನದ ಪ್ರಸ್ತಾಪವನ್ನು ಮತ್ತೆ ಪುನರುಚ್ಚರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+