ಇಂದಿರಾ ಕ್ಯಾಂಟೀನ್ ನಲ್ಲಿ ಏನೆಲ್ಲ ತಿನ್ಬೋದು ಪಟ್ಟಿ ನೋಡಿ

ಬೆಂಗಳೂರು. ಆಗಸ್ಟ್ 16 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್‌ ಅನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಜಯನಗರದ ಕನಕನಪಾಳ್ಯದಲ್ಲಿ ಬುಧವಾರ ಉದ್ಘಾಟಿಸಿ ತಮ್ಮ ಅಜ್ಜಿ ಕ್ಯಾಂಟೀನ್ ನ ಊಟದ ರುಚಿ ಸವಿದರು.

Recommended Video

      Indira Canteen starts from August 15th | Menu details in the video | Oneindia Kannada

      198 ಇಂದಿರಾ ಕ್ಯಾಂಟೀನ್ ಗಳ ಪೈಕಿ ಇಂದು 101 ಕ್ಯಾಂಟೀನ್ ಗಳು ತೆರೆದಿದ್ದು, ಇನ್ನುಳಿದಂತೆ 97 ಕ್ಯಾಂಟೀನ್ ಗಳಿಗೆ ಜಾಗದ ಕೊರೆತಯಿಂದ ನಿರ್ಮಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಅಕ್ಟೋರ್ 02 ಗಾಂಧಿ ಜಯಂತಿಯಂದು ಉಳಿದ ಕ್ಯಾಂಟೀನ್ ಗಳು ಉದ್ಘಾಟನೆಯಾಗಲಿವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

      ಇನ್ನು ಈ ಇಂದಿರಾ ಕ್ಯಾಂಟೀನ್ ನಲ್ಲಿ ದಿನಕ್ಕೆ ಒಂದೊಂದು ತರಹದ ಉಪಹಾರ ಮತ್ತು ಊಟ ಲಭ್ಯವಿರಲಿದೆ. ಊಟದ ಮೆನ್ಯೂ ಈ ಕೆಳಗಿನಂತಿದೆ.

      indira canteen inaugurated in bengaluru, here is the food menu

      * ಸೋಮವಾರ: ಬೆಳಗ್ಗೆ ತಿಂಡಿ-ಇಡ್ಲಿ ಮತ್ತು ಪುಳಿಯೊಗರೆ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ-ತರಕಾರಿ ಸಾಂಬಾರ್ ಹಾಗೂ ಮೊಸರನ್ನ ಅಥವಾ ಟೊಮೆಟೊ ಬಾತ್ ಮತ್ತು ಮೊಸರನ್ನ.

      * ಮಂಗಳವಾರ: ಬೆಳಗಿನ ಉಪಹಾರ-ಇಡ್ಲಿ ಮತ್ತು ಖಾರಾಬಾತ್, ಮಧ್ಯಾಹ್ನ, ರಾತ್ರಿ ಊಟಕ್ಕೆ- ತರಕಾರಿ ಸಾಂಬಾರ್ ಹಾಗೂ ಮೊಸರನ್ನ ಅಥವಾ ಚಿತ್ರನ್ನ ಮೊಸರನ್ನ.

      * ಬುಧವಾರ: ಬೆಳಗಿನ ಉಪಹಾರ-ಇಡ್ಲಿ ಮತ್ತು ಪೊಂಗಲ್, ಮಧ್ಯಾಹ್ನ, ರಾತ್ರಿ ಊಟಕ್ಕೆ-ತರಕಾರಿ ಸಾಂಬಾರ್ ಮತ್ತು ಮೊಸರನ್ನ ಅಥವಾ ವಾಂಗೀಬಾತ್ ಮತ್ತು ಮೊಸರನ್ನ.

      *ಗುರುವಾರ: ಬೆಳಗ್ಗೆ ತಿಂಡಿ-ಇಡ್ಲಿ ಮತ್ತು ರವಾ ಕಿಚಡಿ, ಮಧ್ಯಾಹ್ನ, ರಾತ್ರಿ ಊಟಕ್ಕೆ-ತರಕಾರಿ ಸಾಂಬಾರ್ ಮತ್ತು ಮೊಸರನ್ನ ಅಥವಾ ಬಿಸಿಬೇಳೆಬಾತ್ ಮತ್ತು ಮೊಸರನ್ನ.

      *ಶುಕ್ರವಾರ: ಬೆಳಗ್ಗೆ ತಿಂಡಿ-ಇಡ್ಲಿ ಮತ್ತು ಚಿತ್ರನ್ನ ಮಧ್ಯಾಹ್ನ, ರಾತ್ರಿ ಊಟಕ್ಕೆ-ತರಕಾರಿ ಸಾಂಬಾರ್ ಮತ್ತು ಮೊಸರನ್ನ ಅಥವಾ ಮೆಂತ್ಯೆ ಪಲಾವ್ ಮತ್ತು ಮೊಸರನ್ನ.

      * ಶನಿವಾರ: ಬೆಳಗಿನ ಉಪಹಾರ-ಇಡ್ಲಿ, ವಾಂಗೀಬಾತ್. ಮಧ್ಯಾಹ್ನ, ರಾತ್ರಿ ಊಟಕ್ಕೆ-ತರಕಾರಿ ಸಾಂಬಾರ್ ಮತ್ತು ಮೊಸರನ್ನ ಅಥವಾ ಪುಳಿಯೊಗರೆ ಮತ್ತು ಮೊಸರನ್ನ.

      * ಭಾನುವಾರ: ಬೆಳಗಿನ ಉಪಹಾರ-ಇಡ್ಲಿ ಮತ್ತು ಖಾರಬಾತ್, ಕೇಸರಿಬಾತ್, ಮಧ್ಯಾಹ್ನ, ರಾತ್ರಿ ಊಟಕ್ಕೆ-ತರಕಾರಿ ಸಾಂಬಾರ್ ಮತ್ತು ಮೊಸರನ್ನ ಅಥವಾ ಪಲಾವ್ ಮತ್ತು ಮೊಸರನ್ನ.

      ಕ್ಯಾಂಟೀನ್ ಸಮಯ: ಬೆಳಗ್ಗೆ 7.30 ರಿಂದ 9.30ರ ವರೆಗೆ ಉಪಹಾರ, 12.30ರಿಂದ 3 ಗಂಟೆ ವರೆಗೆ ಮದ್ಯಾಹ್ನ ಊಟ, ಸಂಜೆ 7.30ರಿಂದ ರಾತ್ರಿ 10ರ ವರೆಗೆ ರಾತ್ರಿ ಊಟ ಲಭ್ಯವಿರಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+