• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂದಿರಾ ಕ್ಯಾಂಟೀನ್ ಭವಿಷ್ಯ ಇಂದು ನಿರ್ಧಾರ: ಇರುತ್ತಾ? ಇರಲ್ವಾ?

|
   ಸಿದ್ದರಾಮಯ್ಯನವರ ಇಂದಿರಾ ಕ್ಯಾಂಟೀನ್ ಭವಿಷ್ಯ ಇಂದು ನಿರ್ಧಾರವಾಗಲಿದೆ

   ಬೆಂಗಳೂರು, ಆಗಸ್ಟ್ 17: ಬಡವರ ಹಸಿವು ನೀಗಿಸುವುದಕ್ಕಾಗಿಯೇ ಆರಂಭವಾದ ಇಂದಿರಾ ಕ್ಯಾಂಟೀನ್‌ಗೆ ಈ ಸಂಕಷ್ಟ ಎದುರಾಗಿದೆ.

   ಸಿದ್ದರಾಮಯ್ಯ ಸರ್ಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್‌ಗೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಕೂಡ ಮುನ್ನಡೆಸಲು ಅನುಮತಿ ದೊರೆತಿತ್ತು. ಈಗ ಯಡಿಯೂರಪ್ಪ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದರ ಕಡೆಗೆ ಎಲ್ಲರ ಚಿತ್ತವಿದೆ.

   ಬಿಬಿಎಂಪಿಗೆ ಹೊರೆಯಾದ ಇಂದಿರಾ ಕ್ಯಾಂಟೀನ್‌ ನಿರ್ವಹಣೆ

   ಪ್ರತಿ ದಿನ ಸುಮಾರು 12 ಸಾವಿರ ಜನರು ಕಡಿಮೆ ದರದಲ್ಲಿ ತಿಂಡಿ, ಊಟ ಮಾಡುತ್ತಿರುವ ಬಿಬಿಎಂಪಿ ವ್ಯಾಪ್ತಿಯ 198 ಇಂದಿರಾ ಕ್ಯಾಂಟೀನ್‌ಗಳಿಗೆ ಇನ್ನುಮುಂದೆ ಅನುದಾನ ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

   ಇಂದಿರಾ ಕ್ಯಾಂಟೀನ್ ಗಳನ್ನು ಸ್ವಂತ ಖರ್ಚಿನಲ್ಲಿ ನಡೆಸುವುದಾ, ಬಿಡುವುದಾ ಎನ್ನುವ ಪ್ರಶ್ನೆ ಬಿಬಿಎಂಪಿಗೆ ಉದ್ಭವಿಸಿದೆ.

   ಮೇಯರ್ ಗಂಗಾಂಬಿಕೆ ಶನಿವಾರ ವಿಶೇಷ ಕೌನ್ಸಿಲ್ ಸಭೆ ಕರೆದಿದ್ದು, ಈ ವಿಚಾರ ಕುರಿತು ಸ್ಪಷ್ಟ ನಿಲುವು ಸಿಗಲಿದೆ. ಬಿಬಿಎಂಪಿ ಅನುದಾನದಲ್ಲಿ ಇಂದಿರಾ ಕ್ಯಾಂಟೀನ್ ನಡೆಸುವುದಾ ಬಿಡುವುದಾ, ನಡೆಸುವುದಾದರೆ ಪ್ರತಿ ವರ್ಷ ಇದಕ್ಕಾಗಿ ಸುಮಾರು 150 ಕೋಟಿಯಷ್ಟು ಅನುದಾನವನ್ನು ಮೀಸಲಿಡಬೇಕು. ಯಾವ ಮೂಲದಿಂದ ಹೊಂದಿಸಬೇಕು ಎಲ್ಲಾ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.

   ಈ ಬಾರಿ ಬಜೆಟ್‌ನಲ್ಲಿ ಕೂಡ ಯೋಜನೆಗೆ ಅನುದಾನ ಮೀಸಲಿಟ್ಟಿಲ್ಲ, ಹಾಗಾಗಿ ಸರ್ಕಾರದಿಂದ ಅನುದಾನ ನೀಡಲಾಗುವುದಿಲ್ಲ ಎರಡು ವರ್ಷ ಮುಗಿಯುವುದರಿಂದ ಇನ್ನುಮುಂದೆ ಬಿಬಿಎಂಪಿಯಿಂದಲೇ ಯೋಜನೆ ನಡೆಸಿಕೊಂಡು ಹೋಗುವಂತೆ ಹೇಳಿದೆ.

   ಬಿಬಿಎಂಪಿಯು 2019-20ನೇ ಸಾಲಿನಲ್ಲಿ 152 ಕೋಟಿ ಅಂದಾಜು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿದೆ.

   English summary
   Indira Canteen Future Will Decide Today, BBMP Mayor Gangambike Mallikarjun Hold Council Meeting Today.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X