Bengaluru Heat Wave: ಬೆಂಗಳೂರಲ್ಲಿ 34 ಡಿ.ಸೆ. ಉಷ್ಣಾಂಶ ದಾಖಲು, ಶಾಖದ ಅಲೆಯ ಎಚ್ಚರಿಕೆ

ಬೆಂಗಳೂರು, ಫೆಬ್ರವರಿ 16: ರಾಜಧಾನಿ ಬೆಂಗಳೂರು ಅಧಿಕ ಉಷ್ಣದ ದಿನಗಳನ್ನು ನೋಡುತ್ತಿದೆ. ದೆಹಲಿಗೆ ಸರಿಸಮಾನವಾಗಿ ಬೆಂಗಳೂರು ಬಿಸಿಲಿನ ಒಣ ಹವೆಗೆ ಸಾಕ್ಷಿಯಾಗುತ್ತಿದೆ. ಮುಂದಿನ ದಿನಗಳು ನಗರದಲ್ಲಿ ತಾಪಮಾನ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆ ಇದೆ. ಈಗಾಗಲೇ ನಗರದ ತಾಪಮಾನದಲ್ಲಿ 2 ಡಿಗ್ರಿ ಸೆಲ್ಸಿಯಸ್‌ ಏರಿಕೆ ಕಂಡು ಬಂದಿದೆ. ಸದ್ಯದ ಬಿಸಿಲಿಗೆ ಜನರು ಹೈರಾಣಾಗುತ್ತಿದ್ದಾರೆ. ದೆಹಲಿ ಜನರು ಇದೇ ರೀತಿಯ ಅನುಭವಕ್ಕೆ ಒಳಗಾಗುತ್ತಿದ್ದಾರೆ.

ಹವಾಮಾನ ಇಲಾಖೆ ಪ್ರಕಾರ ಹೇಳುವುದಾದರೆ, ಬೆಂಗಳೂರು ಸದ್ಯ ಬೇಸಿಗೆ ಆರಂಭದಲ್ಲಿದೆ. ಮುಂದಿನ ದಿನಗಳಲ್ಲಿ ಉಷ್ಣ ಅಲೆ ಪ್ರಮಾಣ ಇನ್ನಷ್ಟು ತೀವ್ರಗೊಳ್ಳಲಿದೆ. ಕಳೆದ ಕೆಲವು ದಿನಗಳಿಂದ ಬಿದ್ದ ಗರಿಷ್ಠ ತಾಪಮಾನದಲ್ಲಿ ಏರುಗತಿ ಕಂಡು ಬಂದಿದೆ. 32ರಿಂದ ಇದೀಗ 34 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುತ್ತಿದೆ. ಮುಂದಿನ 05 ದಿನಗಳಲ್ಲಿ ತಾಪಮಾನ ಇನ್ನಷ್ಟು ಹೆಚ್ಚಾಗಬಹುದು ಎಂದು ಐಎಂಡಿ ತಿಳಿಸಿದೆ.

India s IT Hub Bengaluru City Become A Hottest City Max Temperature 34 dc Daily 2 dc Raised

ಬೆಂಗಳೂರಿನ ಜನರು ದೆಹಲಿ ಜನರಿಗಿಂತ ಹೆಚ್ಚಿನ ಬಿಸಿಲಿನ ಅನುಭವ ಪಡೆಯುತ್ತಿದ್ದಾರೆ ಎಂದು ಹೇಳಳಾಗುತ್ತಿದೆ. ನಗರದ ಗರಿಷ್ಠ ತಾಪಮಾನವು ರಾಷ್ಟ್ರ ರಾಜಧಾನಿಗಿಂತ ಅಧಿಕವಾಗಿದೆ. ಬೆಂಗಳೂರಿನಲ್ಲಿ ತಾಪಮಾನ ಕ್ರಮೇಣ ಏರಿಕೆ ಆಗುತ್ತಿದೆ. ಶನಿವಾರ ನಗರದಲ್ಲಿ ಗರಿಷ್ಠ ತಾಪಮಾನ 33.3 - 34 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಇದು ಫೆಬ್ರವರಿ ಮೂರನೇ ವಾರದಲ್ಲಿನ ನಿರೀಕ್ಷಿತ ವಾಡಿಕೆಗಿಂತ 2.7 ಡಿಗ್ರಿ ಸೆಲ್ಸಿಯಸ್ ಹೆಚ್ಚು ಎನ್ನಲಾಗಿದೆ. ವ್ಯತಿರಿಕ್ತವಾಗಿ, ದೆಹಲಿಯ ಅದೇ ದಿನದ ಗರಿಷ್ಠ ತಾಪಮಾನವು 29 ಡಿಗ್ರಿ ಸೆಲ್ಸಿಯಸ್ ಆಗಿದೆ. ಬೆಂಗಳೂರು ವಾತಾವರಣ ಶುಷ್ಕಮಯವಾಗಿದೆ.

India s IT Hub Bengaluru City Become A Hottest City Max Temperature 34 dc Daily 2 dc Raised

ರಾತ್ರಿ ಆಗಾಗ ತಂಪು ಗಾಳಿ ದಾಖಲು

ಬೆಂಗಳೂರು ಹಗಲಿನಲ್ಲಿ ಒಂದು ರೀತಿ ಇದ್ದರೆ, ರಾತ್ರಿ ಮಾತ್ರ ಇನ್ನು ಸೆಕೆಯ ಅನುಭವಕ್ಕಿಂತ, ಕೊಂಚ ಚಳಿ, ತಂಪು ಗಾಳಿಯ ಅನುಭವ ಆಗುತ್ತಿದೆ. ಅಂದರೆ ನಿರೀಕ್ಷಿತ ಮಟ್ಟದಲ್ಲಿ ಕನಿಷ್ಠ ತಾಪಮಾನ ದಾಖಲಾಗದೆ. ಕೊಂಚ ಕಡಿಮೆ ತಾಪಮಾನ ದಾಖಲಾಗುತ್ತಿದೆ. ನಗರದಲ್ಲಿ ಕನಿಷ್ಠ ತಾಪಮಾನವು 17.1 ಡಿಗ್ರಿ ಸೆಲ್ಸಿಯಸ್ ಇದೆ. ಇದು ವಾಡಿಕೆಯ ನಿರೀಕ್ಷೆ ಮಟ್ಟಕ್ಕಿಂತ 0.1 ಡಿಗ್ರಿ ಸೆಲ್ಸಿಯಸ್ ಕಡಿಮೆ ಎಂದು ಹೇಳಲಾಗುತ್ತಿದೆ. ದೆಹಲಿಯಲ್ಲಿ ತಂಪು ಹೆಚ್ಚಾಗಿದೆ. ಅಲ್ಲಿ ರಾತ್ರಿಗಳು ಬೆಂಗಳೂರಿಗಿಂತಲೂ ತಂಪಾಗಿವೆ ಎಂದು ವರದಿ ಆಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಗರಿಷ್ಠ ತಾಪಮಾನ

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬೆಂಗಳೂರಿನಲ್ಲಿ ಮಾತ್ರವಲ್ಲದೆ ಚಿತ್ರದುರ್ಗ, ಚಿಂತಾಮಣಿ ಮತ್ತು ಮೈಸೂರಿನಲ್ಲಿಯೂ ಗರಿಷ್ಠ ತಾಪಮಾನ ದಾಖಲಾಗಿದೆ. ಉತ್ತರ ಕರ್ನಾಟಕದ ಬಾಗಲಕೋಟೆ, ಬೀದರ್, ರಾಯಚೂರು, ಹಾವೇರಿ, ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಳೂ ವ್ಯಾಪಕ ಬಿಸಿಲು ದಾಖಲಾಗಿದೆ.

ಬೆಂಗಳೂರಿನಲ್ಲಿ ಮುಂದಿನ 5 ದಿನಗಳ ಕಾಲ ತಾಪಮಾನ ಮತ್ತಷ್ಟು ಹೆಚ್ಚಾಗಲಿದೆ. ಈ ಬಗ್ಗೆ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದು, ನಗರದಲ್ಲಿ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+