ಭಕ್ತರ ಅನುಕೂಲಕ್ಕಾಗಿ ನಾಳೆ ತುಮಕೂರಿಗೆ ವಿಶೇಷ ರೈಲು
ಬೆಂಗಳೂರು, ಜನವರಿ 21: ಸೋಮವಾರ ಲಿಂಗೈಕ್ಯರಾದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ದರ್ಶಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.
ಬೆಂಗಳೂರಿನ ಯಶವಂತಪುರದಿಂದ ನಾಲ್ಕು ರೈಲುಗಳು ತುಮಕೂರಿಗೆ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಸಾರ್ವಜನಿಕರು ಸ್ವಾಮೀಜಿಗಳ ಅಂತಿಮ ದರ್ಶನ ಪಡೆಯಲು ಮಧ್ಯಾಹ್ನ 3 ಗಂಟೆಯವರೆಗೂ ಅವಕಾಶ ಕಲ್ಪಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಹೀಗಾಗಿ ಮಠಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಯಶವಂತಪುರದಿಂದ ತುಮಕೂರಿಗೆ ಬೆಳಿಗ್ಗೆ 7.30, 9, ಮಧ್ಯಾಹ್ನ 12 ಮತ್ತು 1.30ಕ್ಕೆ ವಿಶೇಷ ರೈಲುಗಳು ಸಂಚರಿಸಲಿವೆ.
ಹಾಗೆಯೇ ತುಮಕೂರಿನಿಂದ ಈ ರೈಲುಗಳು ಮರಳಿ ಯಶವಂತಪುರಕ್ಕೆ ಬೆಳಿಗ್ಗೆ 9.40, 11.10, ಮಧ್ಯಾಹ್ನ 2.45 ಸಂಜೆ 4.15 ಗಂಟೆಗೆ ಸಂಚರಿಸಲಿವೆ.
ವಿಶೇಷ ರೈಲುಗಳ ಮೂಲಕ ತುಮಕೂರು ರೈಲು ನಿಲ್ದಾಣಕ್ಕೆ ತಲುಪುವ ಸಾರ್ವಜನಿಕರು ಅಲ್ಲಿಂದ ಮಠಕ್ಕೆ ತೆರಳಲು ಕೆಎಸ್‌ಆರ್‌ಟಿಸಿ ವತಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ತುಮಕೂರಿನ ರೈಲು ನಿಲ್ದಾಣದಿಂದ ರಿಂಗ್ ರಸ್ತೆಯ ಮೂಲಕ ಬಸ್‌ಗಳು ಮಠಕ್ಕೆ ತೆರಳಲಿವೆ.
ತುಮಕೂರಿನಿಂದ ಎಪಿಎಂಸಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಜೂನಿಯರ್ ಕಾಲೇಜಿನಿಂದ ಸಿದ್ದಗಂಗಾ ಮಠಕ್ಕೆ ನೂರಕ್ಕೂ ಹೆಚ್ಚು ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications