Bengaluru Train: ಬೆಂಗಳೂರು-ಸಿಕಂದ್ರಾಬಾದ್ ರೈಲು ಪ್ರಯಾಣಿಕರಿಗೆ ವಿಶೇಷ ಸೇವೆ, ವೇಳಾಪಟ್ಟಿ
ಬೆಂಗಳೂರು, ನವೆಂಬರ್ 20: ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಶತಮಾನೋತ್ಸವ ಅಂಗವಾಗಿ ಬೆಂಗಳೂರು ನೈಋತ್ಯ ರೈಲ್ವೆಯು ಬೆಂಗಳೂರಿನಿಂದ ಉತ್ತರ ಪ್ರದೇಶ ರಾಜ್ಯದ ಮಹಾನಗರಕ್ಕೆ ವಿಶೇಷ ರೈಲು ಸೇವೆ ಒದಗಿಸಿದೆ. ಹಬ್ಬದ ವೇಳೆ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿದೆ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ನೈಋತ್ವ ರೈಲ್ವೆಯು ಸಿಕಂದ್ರಾಬಾದ್-ಬೆಂಗಳೂರು ಕಂಟೋನ್ಮೆಂಟ್-ಸಿಕಂದ್ರಾಬಾದ್ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಬಿಡುಗಡೆ ಮಾಡಿದೆ. ಈ ವಿಶೇಷ ಸೇವೆ ಭಕ್ತರ ಸುಲಭ ಸಂಚಾರಕ್ಕಾಗಿ ತಾತ್ಕಾಲಿಕವಾಗಿ ಸಾರಿಗೆ ಪರಿಹಾರವಾಗಿದೆ. ರೈಲು ಯಾವ ದಿನ ಹೊರಡಲಿದೆ. ಸಮಯ, ಇತರ ಪೂರ್ಣ ಮಾಹಿತಿ ಇಲ್ಲಿದೆ.

ಸಿಕಂದ್ರಾಬಾದ್-ಬೆಂಗಳೂರು ಕಂ. ರೈಲು ವೇಳಾಪಟ್ಟಿ
ಸಿಕಂದ್ರಾಬಾದ್-ಬೆಂಗಳೂರು ಕಂಟೋನ್ಮೆಂಟ್ -ಸಿಕಂದ್ರಾಬಾದ್ ವಿಶೇಷ ರೈಲು (07413) ಇದೇ ನವೆಂಬರ್ 22 ನವೆಂಬರ್ (ಶನಿವಾರ) ರಂದು ಕಾರ್ಯಾಚರಣೆ ಆರಂಭಿಸಲಿದೆ. ಸೆಕಂದ್ರಾಬಾದ್ ನಿಂದ ಸಂಜೆ 6:05ಕ್ಕೆ ಹೊರಡುತ್ತದೆ. ಮರು ದಿನ ನವೆಂಬರ್ 23 (ಭಾನುವಾರ) ಬೆಳಗ್ಗೆ 10:45ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಮರಳಿ ಇದೇ ರೈಲು ಬೆಂಗಳೂರು ಕ್ಯಾಂಟ್-ಸೆಕೆಂದ್ರಾಬಾದ್ ವಿಶೇಷ ರೈಲು (07414) ನವೆಂಬರ್ 24 ನವೆಂಬರ್ ಸೋಮವಾರ ಸಂಜೆ 5 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ನಿಂದ ಹೊರಡುತ್ತದೆ. ಮರುದಿನ ನವೆಂಬರ್ 25ರಂದು ಮಂಗಳವಾರ ಬೆಳಗ್ಗೆ 7:45ಕ್ಕೆ ಸಿಕಂದ್ರಾಬಾದ್ ನಿಲ್ದಾಣ ತಲುಪುತ್ತದೆ.
ಸಂಚಾರ ಮಾರ್ಗ ಮತ್ತು ನಿಲುಗಡೆ ನಿಲ್ದಾಣಗಳು
ಈ ವಿಶೇಷ ರೈಲುಗಳು ಕ್ರಮವಾಗಿ ಲಿಂಗಂಪಳ್ಳಿ, ವಿಕಾರಾಬಾದ್ ಜಂಕ್ಷನ್, ಟಾಂಡೂರ್, ನವನ್‌ಗಡಿ, ಸೆರಂ, ಯಾದಗಿರಿ, ಕೃಷ್ಣ, ರಾಯಚೂರು, ಮಂತ್ರಾಲಯಂ ರಸ್ತೆ ನಿಲ್ದಾಣ, ಆದೋಣಿ, ಗುಂತಕಲ್ ಜಂಕ್ಷನ್, ಅನಂತಪುರ, ಧರ್ಮಾವರಂ ಜಂಕ್ಷನ್ ಮತ್ತು ಶ್ರೀ ಸತ್ಯ ಸಾಯಿ ಪ್ರಸಾಂತಿ ನಿಲಯಂ ನಲ್ಲಿ ನಿಲುಗಡೆ ನೀಡಲಿದೆ.
ಜನರಲ್, ನಾನ್ ಎಸಿ ಸ್ಲೀಪರ್, ಎಸಿ ಸ್ಲೀಪರ್ ಸೇರಿದಂತೆ ಒಟ್ಟು 24 ಬೋಗಿಗಳನ್ನು ಒಳಗೊಂಡಿರಲಿದೆ, ಶ್ರೀ ಸತ್ಯ ಸಾಯಿ ಬಾಬಾ ಶತಮಾನೋತ್ಸವ ಕಾರ್ಯಕ್ರಮಗಳಿಗೆ ಆಗಮಿಸುವ ಭಕ್ತರಿಗೆ ಈ ರೈಲು ಸೇವೆ ದೊಡ್ಡ ಅನುಕೂಲವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರು ಈ ರೈಲು ಸೇರಿದಂತೆ ವಿಶೇಷ ರೈಲುಗಳ ಸಂಚಾರ ಸಮಯ, ಟಿಕೆಟ್ ಲಭ್ಯತೆ ಹಾಗೂ ಇತರ ವಿವರಗಳನ್ನು ನೀವು ಅಧಿಕೃತ ವೆಬ್‌ಸೈಟ್ enquiry.indianrail.gov.in ಗೆ ಭೇಟಿ ನೀಡಿ ಪಡೆಯಬೇಕು. NTES ಆಪ್ ಅಥವಾ ಸಹಾಯವಾಣಿ 139 ಕರೆ ಮಾಡಿ ಪರಿಶೀಲಿಸಬಹುದೆಂದು ರೈಲ್ವೆ ಗೆ ಸಂಪರ್ಕಿಸಿ ಪರಿಶೀಲಿಸಬಹುದು ಎಂದು ಪ್ರಕಟಣೆಯಲ್ಲಿ ನೃಋತ್ಯ ರೈಲ್ವೆ ವಲಯ ತಿಳಿಸಿದೆ.












Click it and Unblock the Notifications