ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಈ ಸ್ಟಾರ್ಟಪ್ ನಲ್ಲಿ ನಿದ್ದೆ ಮಾಡುವವರಿಗಷ್ಟೇ ಕೆಲಸ, 1 ಲಕ್ಷ ರೂ. ಸಂಬಳ!

|
Google Oneindia Kannada News

ಬೆಂಗಳೂರು, ನವೆಂಬರ್ 29: ದಿನವೂ ಮಧ್ಯಾಹ್ನ ಊಟ ಮಾಡಿಬಂದು ಲ್ಯಾಪ್ ಟಾಪ್ ಮುಂದೆ ಕುಳಿತರೆ ಸಾಕು, ಕೀಬೋರ್ಡ್ ಸದ್ದು ಜೋ ಜೋ ಲಾಲಿಯಂತೆ ಕೇಳಿ, ಕಣ್ಣು ರೆಪ್ಪೆಗಳು ನಮ್ಮ ಮಾತನ್ನೇ ಕೇಳದಂತೆ ಮುಚ್ಚುತ್ತಿರುವಾಗ... ಅಯ್ಯೋ ಯಾಕಪ್ಪ ಬೇಕು ಈ ಕೆಲಸ ಅನ್ನಿಸದೆ ಇರುವುದು ಯಾರಿಗೆ? ಒಂದೇ ಒಂದು ಸಣ್ಣ ಜೋಂಪು ನಿದ್ದೆಗಾದರೂ ಅವಕಾಶ ನೀಡಿದ್ದರೆ ಎಷ್ಟು ಚೆನ್ನಾಗಿತ್ತು ಎಂದುಕೊಳ್ಳುವವರಿಗೆ ಬೆಂಗಳೂರಿನ ಸ್ಟಾರ್ಟಪ್ ವೊಂದು ಅಚ್ಚರಿಯ ಸುದ್ದಿ ನೀಡಿದೆ.

ಬೆಂಗಳೂರು ಮೂಲದ ವೇಕ್ ಫಿಟ್ ಎಂಬ ಸ್ಟಾರ್ಟಪ್ ನಲ್ಲಿ ಕೆಲಸ ಮಾಡುವವರಿಗೆ ಇರಬೇಕಾದ ಅರ್ಹತೆ ಎಂದರೆ, ದಿನಕ್ಕೆ 9 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡಲು ಬರಬೇಕು!

ಬೆಳಗಿನ ಚುಟುಕು ನಿದ್ದೆ ಹೃದಯ ಕಾಯಿಲೆ ದೂರ ಮಾಡುತ್ತದೆ ಬೆಳಗಿನ ಚುಟುಕು ನಿದ್ದೆ ಹೃದಯ ಕಾಯಿಲೆ ದೂರ ಮಾಡುತ್ತದೆ

ಹೌದು, ಅಚ್ಚರಿಯಾದರೂ ಇದು ಸತ್ಯ. ನಿದ್ರಾಹೀನತೆಗೆ ಪರಿಹಾರ ನೀಡುವುದಕ್ಕೆಂದೇ ಆರಂಭವಾಗಿರುವ ವೇಕ್ ಫಿಟ್, ತನ್ನಲ್ಲಿ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲು ಮೊದಲಿಗೆ 100 ದಿಗಳ ಕಾಲ ತರಬೇತಿ ನೀಡಲಿದೆ. ಆಯ್ಕೆಯಾದ ಅಭ್ಯರ್ಥಿಗಳು ಈ ತರಬೇತಿ ಸಮಯದಲ್ಲಿ ಕನಿಷ್ಠ 9 ಗಂಟೆಗಳ ಕಾಲ ಗಾಢವಾಗಿ ನಿದ್ದೆ ಮಾಡಬೇಕು. 100 ದಿನದ ತರಬೇತಿಗೆ 1 ಲಕ್ಷ ರೂ. ಸಂಬಳ ನೀಡಲಿದೆ!

Indian Copmany Offers Sleep Internship And Will Pay Rs.1 Lakh!

"ನಿದ್ರಾಹೀನತೆಯಿಂದ ಬಳಲುತ್ತಿರುವವರನ್ನು ಆ ಸಮಸ್ಯೆಯಿಂದ ಪಾರು ಮಾಡುವ ಸಲುವಾಗಿ ಈ ಸ್ಟಾರ್ಟ್ ಅಪ್ ಅನ್ನು ಆರಂಭಿಸಿದ್ದು, ಇಲ್ಲಿ ಕೆಲಸ ಮಾಡುವವರು ಉತ್ತಮವಾಗಿ ನಿದ್ದೆ ಮಾಡುವವರಾಗಬೇಕು. ನಿದ್ದೆ ಆರೋಗ್ಯಕ್ಕೆ ಎಷ್ಟು ಮುಖ್ಯ ಎಂಬುದನ್ನು ತಿಳಿಸುವುದೇ ನಮ್ಮ ಉದ್ದೇಶ. ನಿದ್ರಾಹೀನತೆಯಿಂದ ಬಳಲುತ್ತಿರುವವರ ಮನಸ್ಸಿಗೆ ನೆಮ್ಮದಿ ನೀಡಿ, ಅವರು ಆ ಸಮಸ್ಯೆಯಿಂದ ಪಾರಾಗುವಂತೆ ಮಾಡಲು ನಾವು ಉತ್ಸುಕರಾಗಿದ್ದೇವೆ" ಎನ್ನುತ್ತಾರೆ ವೇಕ್ ಫಿಟ್ ನ ಸಹ ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ.

ವೈರಲ್ ವಿಡಿಯೋ: ಏನಾಶ್ಚರ್ಯ, ಡ್ರೈವರ್ ನಿದ್ದೆಹೋದರೂ ಓಡುತ್ತಿತ್ತು ಕಾರು!ವೈರಲ್ ವಿಡಿಯೋ: ಏನಾಶ್ಚರ್ಯ, ಡ್ರೈವರ್ ನಿದ್ದೆಹೋದರೂ ಓಡುತ್ತಿತ್ತು ಕಾರು!

ವೈಯಕ್ತಿಕ ಬದುಕು ಮಮತ್ತು ವೃತ್ತಿ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ವೇಕ್ ಫಿಟ್ ನೆರವಾಗಲಿ ಎನ್ನುತ್ತಾರೆ ರಾಮಲಿಂಗೇಗೌಡ

English summary
Indian Copmany offers sleep internship and will pay Rs. 1 lakh!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X