ಖೋಡೆಸ್ ಕಂಪನಿಗಳ ಮೇಲೆ ಐಟಿ ದಾಳಿ
ಬೆಂಗಳೂರು: ಖೋಡೇಸ್ ಗ್ರೂಪ್ ಮಾಲೀಕರ ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ನಡೆಸಿ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬೆಂಗಳೂರಿನಲ್ಲಿರುವ ಖೋಡೇಸ್ ಲಿಕ್ಕರ್ ಮಾಲೀಕರ ಮನೆ, ಫ್ಯಾಕ್ಟರಿ , ಕಚೇರಿಗಳ ಮೇಲೆ ಇಂದು ಬೆಳಗ್ಗೆ ಐಟಿ ಅಧಿಕಾರಿಗಳ ತಂಡಗಳು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಖೋಡೇಸ್ ಗ್ರೂಪ್ ಮಾಲೀಕ ರಾಮಚಂದ್ರ ಖೋಡೆ ಅವರ ಮೆಜೆಸ್ಟಿಕ್ ಬಳಿಯ ಮನೆ, ಕಚೇರಿ ಹಾಗೂ ಫ್ಯಾಕ್ಟರಿ ಸೇರಿದಂತೆ 15 ಕ್ಕೂ ಹೆಚ್ಚು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಕೆಲವು ಮಹತ್ವದ ದಾಖಲೆ ಸಿಕ್ಕಿದ್ದು, ಶೋಧ ಕಾರ್ಯ ಮುಂದುವರೆದಿದೆ.
ಕೆಂಪುಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ್ದ ದೀಪ್ ಸಿಧು ಬಂಧನ | Oneindia Kannada
ಖೋಡೇಸ್ ಬ್ರಿವರೇಜಸ್ , ಖೋಡೆ ಆರ್.ಸಿ.ಎ , ಖೋಡೆ ಇಂಡಿಯಾ ಫ್ಯಾಕ್ಟರಿಗಳ ಜತೆಗೆ ಖೋಡೇಸ್ ಗ್ರೂಪ್ ಮಾಲೀಕರಾದ ರಾಮಚಂದ್ರ ಖೋಡೆ , ಹರಿ ಖೋಡೆ ಮನೆ ಕೂಡ ದಾಳಿಗೆ ಒಳಗಾಗಿದೆ.