ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಂದಾ ಕೇಳುವ ನೆಪದಲ್ಲಿ ಟೆಕ್ಕಿಯ ಚಿನ್ನ ಕದ್ದರು

|
Google Oneindia Kannada News

ಬೆಂಗಳೂರು, ಡಿಸೆಂಬರ್ 24: ಚಂದಾ ಕೇಳುವ ನೆಪದಲ್ಲಿ ಟೆಕ್ಕಿಯ ಚಿನ್ನ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಈ ಗ್ಯಾಂಗ್ ಒಂಟಿ ಮಹಿಳೆಯರಿರುವ ಮನೆಯ ಸುತ್ತಮುತ್ತ ತಿರುಗಾಡಿ ಅವರ ಹಿನ್ನೆಲೆ ಅರಿತ ಬಳಿಕ ಮನೆಗೆ ಹೋಗಿ ಅವರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ನಂಬಿಸಿ ಚಿನ್ನ, ಹಣ ಕಳವು ಮಾಡುತ್ತಿದ್ದಾರೆ.

ದರೋಡೆ ಮಾಡಲು ಆತ ಬೆಡ್‌ರೂಂನಲ್ಲೇ ಅಡಗಿ ಕುಳಿತಿದ್ದ ದರೋಡೆ ಮಾಡಲು ಆತ ಬೆಡ್‌ರೂಂನಲ್ಲೇ ಅಡಗಿ ಕುಳಿತಿದ್ದ

ನಗರದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಪಾಲಕರು ಕೆಲಸದ ನಿಮಿತ್ತ ಹೊರ ಹೋಗಿದ್ದಾಗ ದೀಕ್ಷಾ ಒಬ್ಬರೇ ಮನೆಯಲ್ಲಿದ್ದರು, ಅದನ್ನು ಗಮನಿಸಿ ಬೆಳಗ್ಗೆ 9.30ರ ಸಮಯದಲ್ಲಿ ಅವರ ಮನೆಗೆ ಬಂದ ಇಬ್ಬರು ಸಿಖ್ ವೇಷಧಾರಿಗಳು ಪಾಲಕರ ಹೆಸರನ್ನು ಹೇಳಿದ್ದರು. ಅಲ್ಲದೆ ಇತ್ತೀಚೆಗೆ ದೀಕ್ಷಾ ಸಣಬಂಧಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದನ್ನೂ ವಿವರಿಸಿದ್ದರು.

In the name of Donations robbers looted the techie house

ನಂತರ ಗುರುನಾನಕ್ ಜಯಂತಿಗೆ ಚಂದಾ ಸಂಗ್ರಹಿಸಲು ಬಂದಿದ್ದೇವೆ ಎಂದು ಪರಿಚಯಿಸಿಕೊಂಡಿದ್ದರು. ದೀಕ್ಷಾ ಅವರಿಗೆ 300 ರೂ ನೀಡಿದ್ದರು ಅದು ಸಾಧ್ಯವಾಗದೆ 5 ಸಾವಿರ ರೂ ನೀಡುವಂತೆ ಒತ್ತಾಯಿಸಿದ್ದರು.

ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ, ವಿಡಿಯೋ ವೈರಲ್ ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ, ವಿಡಿಯೋ ವೈರಲ್

ಬಳಿಕ ಮನೆಯೊಳಗಿಂದ ಒಂದಷ್ಟು ಅಕ್ಕಿ ತರುವಂತೆ ಸೂಚಿಸಿ ಆಕೆ ಅಕ್ಕಿ ತೆಗೆದುಕೊಂಡು ಬಂದಾಗ ಎರಡು ಉಂಗುರಗಳನ್ನು ಅದಕ್ಕೆ ಹಾಕುವಂತೆ ತಿಳಿಸಿದ್ದರು ಬಳಿಕ ಆ ಅಕ್ಕಿಯನ್ನು ಆಕೆಗೆ ಕೊಟ್ಟು ಸಂಜೆಯವರೆಗೆ ಇದನ್ನು ತೆಗೆಯಬೇಡಿ, ಈ ಅಕ್ಕಿಯಿಂದ ನಿಮಗೆ ಒಳ್ಳೆಯದಾಗುತ್ತದೆ ಎಂದು ತಿಳಿಸಿ ಹೊರಟರು ಸಂಜೆ ವೇಳೆಗೆ ಆ ಅಕ್ಕಿ ನೋಡಿದಾಗ ಆಕೆಯ ಉಂಗುರ ಅದರಲ್ಲಿರಲಿಲ್ಲ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

English summary
A techie House was robbed yesterday. Robbers entered her house for the sake of Donation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X