ಚಿತ್ರ: ಅಗ್ರಹಾರದಿಂದ ಹೊರ ಬಂದ ರೆಡ್ಡಿಗೆ ಬಹುಪರಾಕ್

ಬೆಂಗಳೂರು, ಜ.23: ಸುಮಾರು 1237 ದಿನ, 41 ವಾರ, ಮೂರುವರೆ ವರ್ಷಗಳ ನಂತರ ಗಾಲಿ ಜನಾರ್ದನ ರೆಡ್ಡಿ ಅವರು ಜೈಲಿನಿಂದ ಹೊರ ಪ್ರಪಂಚಕ್ಕೆ ಮರಳಿದ್ದಾರೆ. ಅಭಿಮಾನಿಗಳು, ಆಪ್ತರು, ಕುಟುಂಬ ವರ್ಗದ ಹರ್ಷ ಮುಗಿಲು ಮುಟ್ಟಿದೆ.

ಎರಡು ದಿನಗಳ ನಿಷೇಧಾಜ್ಞೆ ನಡುವೆ ಪರಪ್ಪನ ಅಗ್ರಹಾರ ಜೈಲಿನ ಸುತ್ತಾ ಮುತ್ತಾ ಜನರ ಓಡಾಟವೇ ವಿರಳವಾಗಿತ್ತು. ಎಸ್ ಪಿ ರೋಹಿಣಿ ಕೆ ಅವರ ನೇತೃತ್ವದ ಪೊಲೀಸ್ ಪಡೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು. [ಗಾಲಿ ಜನಾರ್ದನ ರೆಡ್ಡಿ ಟೈಮ್ ಲೈನ್]

ಯಮಗಂಡಕಾಲ ಕಳೆದುಕೊಂಡು ಪರಪ್ಪನ ಅಗ್ರಹಾರದ ಜೈಲಿನಿಂದ ಹೊರ ಬಂದ ಗಾಲಿ ರೆಡ್ಡಿ ಅವರು ತಮ್ಮ ನೆಚ್ಚಿನ ನೀಲಿ ಶರ್ಟ್ ಧರಿಸಿದ್ದರು.ಕಪ್ಪು ಬಣ್ಣದ ಮರ್ಸಿಡೀಸ್ ಬೆಂಜ್ ಕಾರಿನ ಮಧ್ಯಭಾಗದಲ್ಲಿ ಕುಳಿತ ರೆಡ್ಡಿ ಮುಖದಲ್ಲಿ ಅಂಥ ಬಳಲಿಕೆ ಕಾಣಲಿಲ್ಲ.[ಗಾಲಿ ರೆಡ್ಡಿ ಬೆಂಜ್ ನಲ್ಲಿ ಹೊರಟ್ರು]

ಜೈಲಿನಿಂದ ಪಾರಿಜಾತ ಅಪಾರ್ಟ್ಮೆಂಟ್ ಗೆ ತೆರಳುವ ಮುನ್ನ ಸಿಐಡಿ ಕಚೇರಿ ಮುಂದಿನ ಗಣೇಶನಿಗೆ ನಮಿಸಿದ ರೆಡ್ಡಿ ಮಾಧ್ಯಮದವರತ್ತ ತಿರುಗಿ ನೋಡಲೇ ಇಲ್ಲ. ಎಂದಿನ ಡೈಲಾಗ್,'ಸತ್ಯಮೇಯ ಜಯತೇ' ಮಿಸ್ ಆಗಿತ್ತು. [ರೆಡ್ಡಿ ಜೊತೆ ಬಿಜೆಪಿ ಕೈಜೋಡಿಸದಿರಲು 7 ಕಾರಣ]

ಇನ್ನು ಕೆಲವು ದಿನಗಳ ಕಾಲ ವಿಶೇಷ ಪೂಜೆ, ಪುನಸ್ಕಾರದಲ್ಲಿ ತೊಡಗಿಕೊಳ್ಳುವ ಸೂಚನೆ ಸಿಕ್ಕಿದ್ದು, ರೆಡ್ಡಿ ಅವರ ಬೆಂಗಾವಲಾಗಿ ಶ್ರೀರಾಮುಲು, ನಾಗೇಂದ್ರ, ಸುರೇಶ್ ಬಾಬು, ಸೋಮಶೇಖರ ರೆಡ್ಡಿ ಎಂದಿನಂತೆ ನಿಂತಿದ್ದಾರೆ. ಪರಪ್ಪನ ಅಗ್ರಹಾರ ಹಾಗೂ ಗಾಲಿ ರೆಡ್ಡಿ ಬಿಡುಗಡೆ ಚಿತ್ರಗಳು ನಿಮ್ಮ ಮುಂದೆ...

ಯಮಗಂಡಕಾಲದ ವಿಳಂಬವಾಗಿತ್ತು

ಯಮಗಂಡಕಾಲದ ವಿಳಂಬವಾಗಿತ್ತು

ಶುಕ್ರವಾರ ಮಧ್ಯಾಹ್ನ 3.10 ರಿಂದ 4.29 ರ ತನಕ ಯಮಗಂಡಕಾಲವಿತ್ತು. ಹೀಗಾಗಿ ಜನಾರ್ದನ ರೆಡ್ಡಿ 4.40ರ ನಂತರ ಜೈಲಿನಿಂದ ಹೊರಬಂದರು.

 ಎಸ್ ಪಿ ರೋಹಿಣಿ ನೇತೃತ್ವದ ಪೊಲೀಸ್ ತಂಡ

ಎಸ್ ಪಿ ರೋಹಿಣಿ ನೇತೃತ್ವದ ಪೊಲೀಸ್ ತಂಡ

ಪರಪ್ಪನ ಅಗ್ರಹಾರ ಜೈಲಿನ ಸುತ್ತಾ ಮುತ್ತಾ 1 ಕಿ.ಮೀ ವ್ಯಾಪ್ತಿಯಲ್ಲಿ ಗುರುವಾರದಿಂದಲೇ ನಿಷೇಧಾಜ್ಞೆ ಹೇರಲಾಗಿತ್ತು. ಶುಕ್ರವಾರ ಜೈಲಿನ ಬಳಿಗೆ ಬಂದ ರೆಡ್ಡಿ ಅಭಿಮಾನಿಗಳನ್ನು ತಡೆಗಟ್ಟಲಾಯಿತು.

ಪೋಸ್ಟರ್ ಗೆ ಹಾಲಿನ ಅಭಿಷೇಕ

ಪೋಸ್ಟರ್ ಗೆ ಹಾಲಿನ ಅಭಿಷೇಕ

ಬಳ್ಳಾರಿಯಿಂದ ಬಂದಿದ್ದ ಮುನ್ನೂರಕ್ಕೂ ಅಧಿಕ ಅಭಿಮಾನಿಗಳು, ಸ್ಥಳೀಯ ಫ್ಯಾನ್ಸ್ ಎಲ್ಲಾ ಸೇರಿ ಗಾಲಿ ರೆಡ್ಡಿ ಭಾವಚಿತ್ರವಿರುವ ಪೋಸ್ಟರ್ ಗೆ ಹಾಲಿನ ಅಭಿಷೇಕ ಮಾಡಿದರು.

ಕಾತುರದ ಕ್ಷಣ ಬಂದೇ ಬಿಟ್ಟಿತು

ಕಾತುರದ ಕ್ಷಣ ಬಂದೇ ಬಿಟ್ಟಿತು

ಯಮಗಂಡಕಾಲ ಕಳೆದ ನಂತರ ಕೆಲವು ಕಾರುಗಳಿಗೆ ಮಾತ್ರ ಜೈಲಿನ ತನಕ ಹೋಗಲು ಅನುಮತಿ ನೀಡಲಾಗಿತ್ತು. ಜೈಲಿನಿಂದ ಹೊರ ಕಾರುಗಳ ಚಿತ್ರ ಇಲ್ಲಿದೆ

ಪೊಲೀಸ್ ವಾಹನದ ನಡುವೆ ರೆಡ್ಡಿ ಕಾರು

ಪೊಲೀಸ್ ವಾಹನದ ನಡುವೆ ರೆಡ್ಡಿ ಕಾರು

ಪೊಲೀಸ್ ವಾಹನದ ನಡುವೆ ರೆಡ್ಡಿ ಅವರಿದ್ದ ಕಪ್ಪು ಬಣ್ನದ ಮರ್ಸೀಡಿಸ್ ಕಾರು ಬರುತ್ತಿರುವ ಚಿತ್ರ

ಸ್ವತಂತ್ರ ಹಕ್ಕಿ ರೆಡ್ಡಿ ಅಭಿಮಾನಿಗಳತ್ತ ಕೈ ಬೀಸಿದ್ದು

ಸ್ವತಂತ್ರ ಹಕ್ಕಿ ರೆಡ್ಡಿ ಅಭಿಮಾನಿಗಳತ್ತ ಕೈ ಬೀಸಿದ್ದು

ಜೈಲಿನಿಂದ ಹೊರ ಬಂದ ಸ್ವತಂತ್ರ ಹಕ್ಕಿ ರೆಡ್ಡಿ ಅಭಿಮಾನಿಗಳತ್ತ ಕೈ ಬೀಸಿದ್ದು ಹೀಗೆ

ಬಿಕೋ ಎನ್ನುತ್ತಿದ್ದ ರಸ್ತೆಗಳು

ಬಿಕೋ ಎನ್ನುತ್ತಿದ್ದ ರಸ್ತೆಗಳು

ರೆಡ್ಡಿ ಬಿಡುಗಡೆಗೂ ಮುನ್ನ ಬಿಕೋ ಎನ್ನುತ್ತಿದ್ದ ರಸ್ತೆಗಳು, ಬಿಡುಗಡೆ ಕ್ಷಣ ಬರುವಷ್ಟರಲ್ಲಿ ಜನರಿಂದ ತುಂಬಿ ಹೋಗಿತ್ತು. ಪೊಲೀಸರ ಸಮರ್ಥ ನಡೆಯಿಂದ ಜನರನ್ನು ನಿಯಂತ್ರಿಸಲು ಸಾಧ್ಯವಾಯಿತು.

ನೆರೆದಿದ್ದ ಜನರಲ್ಲಿ ಕಾತುರದ ಪ್ರಶ್ನೆ

ನೆರೆದಿದ್ದ ಜನರಲ್ಲಿ ಕಾತುರದ ಪ್ರಶ್ನೆ

ಯಾವಾಗ ಬಿಡುಗಡೆ ಎಂಬ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಿದ್ದರು. ಮಧ್ಯಾಹ್ನದ ವೇಳೆಗೆ ಬಿಡುಗಡೆಯಾಗಬೇಕಿದ್ದ ರೆಡ್ಡಿಗಾಗಿ ಜನರು ಕಾದು ನಿಂತಿದ್ದರು. ಅಕ್ಕ ಪಕ್ಕ ಶಾಲೆಗಳು ಮುಂಚಿತವಾಗೇ ದಿನದ ಕಾರ್ಯ ಮುಗಿಸಿದ್ದವು. ಹೊಸ ರೋಡಿನ ತನಕ ರೆಡ್ಡಿ ಬಿಡುಗಡೆ ಬಗ್ಗೆ ಜನರ ಮಾತುಗಳು ಕೇಳಿ ಬಂದವು

ಗಾಲಿ ರೆಡ್ಡಿ ಮುಂದಿನ ನಡೆ ಏನು?

ಗಾಲಿ ರೆಡ್ಡಿ ಮುಂದಿನ ನಡೆ ಏನು?

ಜನಾರ್ದನ ರೆಡ್ಡಿ ಅವರು ಬೆಂಗಳೂರಿನಲ್ಲಿರುವ ಪಾರಿಜಾತ ಅಪಾರ್ಟ್ಮೆಂಟ್ ಗೆ ತೆರಳಿದ್ದು, ನಾಳೆ ತಿರುಪತಿಗೆ ಹೋಗುವ ನಿರೀಕ್ಷೆಯಿದೆ. ನಂತರ ಚಿತ್ರದುರ್ಗದಲ್ಲಿ ಅಥವಾ ಬೆಂಗಳೂರಲ್ಲೇ ನೆಲೆಸುವ ಸಾಧ್ಯತೆಗಳಿವೆ.

ಸೋಮಶೇಖರ ರೆಡ್ಡಿ ಹೇಳಿಕೆ

ಸೋಮಶೇಖರ ರೆಡ್ಡಿ ಹೇಳಿಕೆ

ನನ್ನ ಸೋದರನಿಗೆ ವಿಶ್ರಾಂತಿ ಅಗತ್ಯವಿದೆ. ಸುಮಾರು ವರ್ಷಗಳ ನಂತರ ಕುಟುಂಬದೊಡನೆ ಸೇರಿದ್ದಾನೆ. ಅವನಿಗೆ ಕೆಲ ಕಾಲ ಸಂತಸದಿಂದ ಇರಲು ಬಿಡಿ. ನಮಗೆ ಹಬ್ಬದ ವಾತಾವರಣ ತಂದಿದೆ. ಕಾನೂನು ಹೇಳಿದಂತೆ ನಾವು ನಡೆದುಕೊಳ್ಳಬೇಕಿದೆ ಎಂದು ಜನಾರ್ದನ ರೆಡ್ಡಿ ಸೋದರ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+