ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳಲ್ಲಿ : ಎಎಪಿ ರೋಡ್ ಶೋ, ಫ್ರೀಡಂ ಪಾರ್ಕ್ ಟಾಕ್ ಶೋ

By Mahesh
|
Google Oneindia Kannada News

ಬೆಂಗಳೂರು, ಮಾ.16: ಬೆಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿ ಪುಳಕಿತರಾದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಭಾನುವಾರ ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮುಂದುವರೆದ ಪ್ರಚಾರ ಅಭಿಯಾನ ನಡೆಸಿದರು. ನಂತರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನ್ನಾಡಿದ ಕೇಜ್ರಿವಾಲ್ ಅವರು ಕರ್ನಾಟಕ ಪ್ರವಾಸಕ್ಕೆ ಅಂತ್ಯ ಹಾಡಿದರು.

ಭಾನುವಾರ ಬೆಳಗ್ಗೆ ಯಲಹಂಕದಿಂದ ತೆರೆದ ಜೀಪಿನಲ್ಲಿ ಹೊರಟು ಕೆಂಪೇಗೌಡ ವಿಮಾನ ನಿಲ್ದಾಣ ಮೂಲಕ ಚಿಕ್ಕಬಳ್ಳಾಪುರಕ್ಕೆ ತೆರಳುವ ಮಾರ್ಗದಲ್ಲಿ ನೂರಾರು ಮಂದಿ ಟೆಕ್ಕಿಗಳು ಪೊರಕೆಗಳನ್ನು ಹಿಡಿದು ಕೇಜ್ರಿವಾಲ್ ರನ್ನು ಸ್ವಾಗತಿಸಿದರು. ಇದೇ ವೇಳೆ ಮಾತನಾಡಿದ ಕೇಜ್ರಿವಾಲ್, ನಾವು ಕೇವಲ ನಗರ ಪ್ರದೇಶವಲ್ಲದೆ, ಗ್ರಾಮೀಣ ಪ್ರದೇಶದಲ್ಲೂ ಉತ್ತಮ ಸಾಧನೆ ಮಾಡುತ್ತೇವೆ. ಜನಬೆಂಬಲ ನಮ್ಮ ಕಡೆ ಇದ್ದು, ಮಾಧ್ಯಮಗಳ ಸಮೀಕ್ಷೆಗಳೆಲ್ಲಾ ಹುಸಿಯಾಗಲಿವೆ ಎಂದು ಹೇಳಿದರು.

ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಗುರಿಯನ್ನು ಹೊತ್ತಿದ್ದು, ಇದರಲ್ಲಿ ಯಶಸ್ವಿಯಾಗುತ್ತೇವೆ. ನಮ್ಮಲ್ಲಿ ಸದ್ಯ ಕೆಲವೊಂದು ಗೊಂದಲಗಳಿವೆ. ಅವೆಲ್ಲಾ ನಿವಾರಣೆಯಾಗಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು. ಭಾನುವಾರದ ರಜೆ ಕಾರಣ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಆದ್ದರಿಂದ ಆಮ್ ಆದ್ಮಿ ರೋಡ್ ಶೋಗೂ ಅಡಚಣೆ ಉಂಟಾಗದೆ ನಿರಾತಂಕವಾಗಿ ನಡೆಯಿತು. ಸತತ ರೋಡ್ ಶೋ ನಿಂದ ದಣಿದಂತೆ ಕಂಡು ಬಂದ ಕೇಜ್ರಿವಾಲ್ ಅವರು ಚಿಕ್ಕಬಳ್ಳಾಪುರದಲ್ಲೂ ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. [ಫ್ರೀಡಂ ಪಾರ್ಕಿನಲ್ಲಿ ಕೇಜ್ರಿವಾಲ್ ಭಾಷಣ]

ನಂತರ ಬೆಂಗಳೂರಿಗೆ ಪಯಣ ಬೆಳೆಸಿದರು. ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಆಮ್ ಆದ್ಮಿ ಕಾರ್ಯಕರ್ತರು ಟೋಪಿ ಧರಿಸಿ ಪೊರಕೆ ಹಿಡಿದು ಕೇಜ್ರಿವಾಲ್ ಪರ ಘೋಷಣೆಗಳನ್ನು ಕೂಗಿದರು. ಮಿಕ್ಕ ವಿವರ ಚಿತ್ರಗಳಲ್ಲಿ ನೋಡಿ..

ಅರವಿಂದ್ ಹೆಗಲೇರಿದ ರೈತರ ಹಸಿರು ವಸ್ತ್ರ

ಅರವಿಂದ್ ಹೆಗಲೇರಿದ ರೈತರ ಹಸಿರು ವಸ್ತ್ರ

ಯಲಹಂಕದಿಂದ ತೆರೆದ ಜೀಪಿನಲ್ಲಿ ಹೊರಟು ಕೆಂಪೇಗೌಡ ವಿಮಾನ ನಿಲ್ದಾಣ ಮೂಲಕ ಚಿಕ್ಕಬಳ್ಳಾಪುರಕ್ಕೆ ತೆರಳುವ ಮಾರ್ಗದಲ್ಲಿ ನೂರಾರು ಮಂದಿ ಟೆಕ್ಕಿಗಳು ಪೊರಕೆಗಳನ್ನು ಹಿಡಿದು ಕೇಜ್ರಿವಾಲ್ ರನ್ನು ಸ್ವಾಗತಿಸಿದರು.

ಎಎಪಿ ಕಾರ್ಯಕರ್ತರಿಂದ ಎಲ್ಲೆಡೆ ಪೊರೆಕೆ

ಎಎಪಿ ಕಾರ್ಯಕರ್ತರಿಂದ ಎಲ್ಲೆಡೆ ಪೊರೆಕೆ

ಎಎಪಿ ಕಾರ್ಯಕರ್ತರಿಂದ ಎಲ್ಲೆಡೆ ಪೊರೆಕೆ ಪ್ರದರ್ಶನ, ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಉತ್ಸಾಹ

ಚಿಕ್ಕಬಳ್ಳಾಪುರ ಮಾರ್ಗ ಮಧ್ಯದಲ್ಲಿ ಕೇಜ್ರಿವಾಲ್

ಚಿಕ್ಕಬಳ್ಳಾಪುರ ಮಾರ್ಗ ಮಧ್ಯದಲ್ಲಿ ಕೇಜ್ರಿವಾಲ್

ಚಿಕ್ಕಬಳ್ಳಾಪುರ ಮಾರ್ಗ ಮಧ್ಯದಲ್ಲಿ ಕೇಜ್ರಿವಾಲ್ ಅವರಿಂದ ಭಾಷಣ

 ಸತತ ರೋಡ್ ಶೋ ನಿಂದ ದಣಿದ ಅರವಿಂದ್

ಸತತ ರೋಡ್ ಶೋ ನಿಂದ ದಣಿದ ಅರವಿಂದ್

ಸತತ ರೋಡ್ ಶೋ ನಿಂದ ದಣಿದಂತೆ ಕಂಡು ಬಂದ ಕೇಜ್ರಿವಾಲ್ ಅವರು ಚಿಕ್ಕಬಳ್ಳಾಪುರದಲ್ಲೂ ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಫ್ರೀಡಂ ಪಾರ್ಕಿನಲ್ಲಿ ದೇಶಭಕ್ತಿ ಗೀತ ಗಾಯನ

ಫ್ರೀಡಂ ಪಾರ್ಕಿನಲ್ಲಿ ದೇಶಭಕ್ತಿ ಗೀತ ಗಾಯನ

ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಎಎಪಿ ಸದಸ್ಯರಿಂದ ದೇಶಭಕ್ತಿ ಗೀತ ಗಾಯನ

ಬಿಸಿಲಿನಲ್ಲಿ ಅರವಿಂದ್ ಗಾಗಿ ಕಾದು ಕುಳಿತ ಜನ

ಬಿಸಿಲಿನಲ್ಲಿ ಅರವಿಂದ್ ಗಾಗಿ ಕಾದು ಕುಳಿತ ಜನ

ಫ್ರೀಡಂ ಪಾರ್ಕಿಗೆ ಚಿಕ್ಕಬಳ್ಳಾಪುರದಿಂದ ಸುಮಾರು ಒಂದು ತಾಸು ತಡವಾಗಿ ಬಂದ ಅರವಿಂದ್ ಗಾಗಿ ಬಿಸಿಲಿನಲ್ಲಿ ಕಾದು ಕುಳಿತ ಜನ ಸಮೂಹ

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನಮನ

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನಮನ

ಸ್ವಾತಂತ್ರ್ಯ ಉದ್ಯಾನವನದಲ್ಲಿ ನೆರೆದಿದ್ದ ಜನತೆಗೆ ಹಿರಿಯ ಜೀವಿ ಎಚ್ ಎಸ್ ದೊರೆಸ್ವಾಮಿ ಅವರಿಂದ ನಮನ

ಬೆಂಗಳೂರಿನ ಸಮಸ್ಯೆ ಬಗ್ಗೆ ಮಾತನಾಡಿದ ದೊರೆಸ್ವಾಮಿ

ಬೆಂಗಳೂರಿನ ಸಮಸ್ಯೆ ಬಗ್ಗೆ ಮಾತನಾಡಿದ ದೊರೆಸ್ವಾಮಿ

* ಬೆಂಗಳೂರಿನಲ್ಲಿ ಕಸ ಎತ್ತುವ ವ್ಯವಸ್ಥೆಯಿಲ್ಲ. ಬಿಬಿಎಂಪಿ ಕಟ್ಟಡ ಒತ್ತೆ ಇಡುವ ಮಾತನಾಡುತ್ತಾರೆ.
* ಪರಿಸರ ಹಾಳು ಮಾಡುವ ಬೆಂಗಳೂರಿನಲ್ಲಿ ಕಾರುಗಳು, ವಾಹನಗ್ಲ ಪರ್ಮೀಟ್ ಕ್ಯಾನ್ಸಲ್ ಮಾಡಬೇಕು
* ಬೇರೆ ದೇಶಗಳಿಂದ ಸಾಲ ಪಡೆದು ದಾಸ್ಯದಲ್ಲಿ ಬಾಳುವಂತೆ ಮಾಡಿದೆ ಇಲ್ಲಿನ ಸರ್ಕಾರಗಳು ಎಂದು ಕಿಡಿಕಾರಿದ ದೊರೆಸ್ವಾಮಿಗಳು

ಜನರಿಗೆ ಮನರಂಜನೆ ಪೊರಕೆ ಡ್ಯಾನ್ಸ್

ಜನರಿಗೆ ಮನರಂಜನೆ ಪೊರಕೆ ಡ್ಯಾನ್ಸ್

ಜನರಿಗೆ ಮನರಂಜನೆ ನೀಡಲು ಎರಡು ಬಾರಿ ಪೊರಕೆ ಡ್ಯಾನ್ಸ್ ಆಡಿಸಲಾಯಿತು.

ನಾಡಗೀತೆಯಿಂದ ಕಾರ್ಯಕ್ರಮ ಆರಂಭ

ನಾಡಗೀತೆಯಿಂದ ಕಾರ್ಯಕ್ರಮ ಆರಂಭ

ನಾಡಗೀತೆಯಿಂದ ಕಾರ್ಯಕ್ರಮ ಆರಂಭವಾಯಿತು. ಕೇಜ್ರಿವಾಲ್ ಜತೆಗೆ ಕರ್ನಾಟಕದ 13 ಅಭ್ಯರ್ಥಿಗಳು ಇದ್ದರು.

ಅರವಿಂದ್ ಕೇಜ್ರಿವಾಲ್ ಭಾಷಣದ ಭಂಗಿ

ಅರವಿಂದ್ ಕೇಜ್ರಿವಾಲ್ ಭಾಷಣದ ಭಂಗಿ

ನಾನು ಗುಜರಾತಿನಲ್ಲಿ ಪ್ರವಾಸ ಮಾಡಿ ಸತ್ಯಾಂಶ ತಿಳಿದುಕೊಂಡಿದ್ದೇನೆ. ಅಲ್ಲಿ ಪ್ರತಿಯೊಂದು ಸರ್ಕಾರಿ ಸೇವೆಗಳಿಗೂ ಇಂತಿಷ್ಟು ಲಂಚ ನೀಡಬೇಕಿದೆ. ತಮ್ಮ ಸಂಪುಟದಲ್ಲಿಯೇ ಭ್ರಷ್ಟ ಸಚಿವರನ್ನು ಉಳಿಸಿಕೊಂಡಿರುವ ನರೇಂದ್ರ ಮೋದಿ ಅವರು ಎಂತಹ ಭ್ರಷ್ಟಚಾರವನ್ನು ನಿರ್ಮೂಲನೆ ಮಾಡಿದ್ದಾರೆ? ಮೋದಿ ಸಂಪುಟದ ಬಾಬು ಭೋಖಾರಿಯಾ ಅವರು ಮೈನಿಂಗ್ ಪ್ರಕರಣದಲ್ಲಿ ಸಿಲುಕಿ 3 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದಾರೆ. ಅದೇ ರೀತಿ ಗುಜರಾತ್ ಗೃಹ ಸಚಿವ ಅಮಿತ್ ಶಾ ಅವರು ಮಹಿಳೆ ವಿರುದ್ಧ ಸ್ಪೈಯಿಂಗ್ ಪ್ರಕರಣ ವಿಚಾರಣೆ ಎದುರಿಸುತ್ತಿದ್ದಾರೆ. ಮತ್ತೋರ್ವ ಪುರುಷೋತ್ತಮ ಸೌಲಂಕಿ ಮೈನಿಂಗ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಇಂತಹವರನ್ನು ಮೋದಿ ಅವರು ತಮ್ಮ ಸಂಪುಟದಲ್ಲಿ ಸೇರಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದ ಅರವಿಂಡ್

ಮೋದಿ ನನ್ನನ್ನು ಏಕೆ ಭೇಟಿ ಮಾಡಲಿಲ್ಲ?

ಮೋದಿ ನನ್ನನ್ನು ಏಕೆ ಭೇಟಿ ಮಾಡಲಿಲ್ಲ?

ಗುಜರಾತ್ ಪೊಲೀಸರು ನನ್ನನ್ನು ಐದು ಕಿಮಿ ದೂರದಲ್ಲೇ ತಡೆ ಹಿಡಿದರು.. ಭೇಟಿಗೆ ಅನುಮತಿ ಬೇಕೆಂದು ನನ್ನನ್ನು ಅಲ್ಲಿಯೇ ತಡೆ ಹಿಡಿದರು. ನಾನು ಮುಂಗಡವಾಗಿ ಭೇಟಿ ಅನುಮತಿ ಪಡೆದುಕೊಂಡು ಹೋಗಿದ್ದೆ. ನಾನು ಬರುವ 5 ಕಿ.ಮೀ ದೂರದಿಂದಲೇ ಸಾವಿರಾರು ಪೊಲೀಸರ ಪಡೆಯನ್ನು ನಿಲ್ಲಿಸಿದ್ದರು. ನಾನು ಮಾಡಿದ ತಪ್ಪೇನು/

ಮೋದಿ ಅವರ ಗುಜರಾತ್ ಅಭಿವೃದ್ಧಿಯಾಗಿದೆಯೆ?

ಮೋದಿ ಅವರ ಗುಜರಾತ್ ಅಭಿವೃದ್ಧಿಯಾಗಿದೆಯೆ?

ನರೇಂದ್ರ ಮೋದಿ ಅವರು ರೈತರಿಂದ ಭೂಮಿಗಳನ್ನು ಕಸಿದುಕೊಂಡು ಅಂಬಾನಿ ಮತ್ತು ಅದಾನಿ ಸಂಸ್ಥೆಗೆ ನೀಡುತ್ತಿದ್ದಾರೆ. ಮೋದಿ ಮುಖ್ಯಮಂತ್ರಿಯಾದ ನಂತರ ಗುಜರಾತ್ ನಲ್ಲಿ ಸುಮಾರು 8000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿಯಲ್ಲಿ ಶೇ.11 ರಷ್ಟು ಅಭಿವೃದ್ದಿಯಾಗಿದೆ ಎಂದು ಮೋದಿ ಹೇಳಿದ್ದಾರೆ. ಕಳೆದ 5 ವರ್ಷಗಳಿಂದ ಗುಜರಾತ್ ಕೃಷಿ ನಕಾರಾತ್ಮಕ ಅಭಿವೃದ್ದಿಯಾಗಿದೆ.

ಮಾಧ್ಯಮಗಳು ಏಕೆ ಮೋದಿಯನ್ನು ಪ್ರಶ್ನಿಸುವುದಿಲ್ಲ

ಮಾಧ್ಯಮಗಳು ಏಕೆ ಮೋದಿಯನ್ನು ಪ್ರಶ್ನಿಸುವುದಿಲ್ಲ

ಗುಜರಾತ್ ಅಭಿವೃದ್ಧಿ ತಪ್ಪು ಮಾಹಿತಿ ನೀಡುತ್ತಿರುವ ಮೋದಿ ಬಗ್ಗೆ ನಾನು ಮಾಧ್ಯಮಗಳನ್ನು ಪ್ರಶ್ನಿಸಿದರೆ, ನನ್ನ ವಿರುದ್ಧವೇ ಹರಿಹಾಯುತ್ತಾರೆ. ಮೋದಿ ಅವರಿಗೆ ನಾನು ಕೇಳಬಯಸಿರುವ ಪ್ರಶ್ನೆಗಳನ್ನು ಮಾಧ್ಯಮಗಳು ಪ್ರಶ್ನಿಸುವ ಧೈರ್ಯ ಮಾಡುತ್ತವೆಯೇ? ಎಂದು ಅರವಿಂದ್ ಕೇಳಿದರು.

English summary
In Pictures : Former Delhi CM Arvind Kejriwal led Aam Admi party held road show Chikkaballapur Lok Sabha constituency today(Mar.16) later rally in Bangalore followed by a public gathering at Freedom Park in Bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X