BMTC: ಬಿಎಂಟಿಸಿ ಪ್ರಯಾಣಿಕರು ಗಮನಿಸಲೇಬೇಕಾದ ಸುದ್ದಿ
BMTC: ಬೆಂಗಳೂರು ಜೀವನಾಡಿ ಸಾರಿಗೆಗಳಲ್ಲಿ ಬಿಎಂಟಿಸಿ ಬಸ್ ಕೂಡ ಒಂದಾಗಿದೆ. ಈ ಬಸ್‌ಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಕರನ್ನು ಒಂದು ಕಡೆಯಿಂದ ಮತ್ತೊಂದೆಡೆಗೆ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಇನ್ನೂ ಈ ಸಾರಿಗೆಯೂ ಪ್ರಯಾಣಿಕರ ಅನುಕೂಲಕ್ಕೆ ವಿಶೇಷ ಬಸ್‌ಗಳ ಸೇವೆಯನ್ನು ಒದಗಿಸುತ್ತಲೇ ಇರುತ್ತದೆ. ಇದೀಗ ಇದು ಪ್ರಯಾಣಿಕರಿಗೆ ಮಹತ್ವದ ಸಂದೇಶವನ್ನು ರವಾನಿಸಿದೆ.
ವಾರ ಹೋಗಲಿ, ಒಂದೇ ಒಂದು ದಿನ ಈ ಸಾರಿಗೆ ಇಲ್ಲ ಅಂದ್ರೆ ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣಿಸುವ ಪ್ರಯಾಣಿಕರು ಪರದಾಡಬೇಕಾಗುತ್ತದೆ. ಇದೀಗ ಜನವರಿ 15ರಿಂದ 30ರ ವರೆಗೆ ನಮ್ಮ ಬಿಎಂಟಿಸಿ ಮೊಬೈಲ್ ಅಪ್ಲಿಕೇಶನ್ ಕಾರ್ಯನಿರ್ವಹಿಸುವುದಿಲ್ಲ. ಈ ವೇಳೆ ಅಪ್ಲಿಕೇಶನ್‌ನಲ್ಲಿ ಯಾವ ಮಾಹಿತಿಯೂ ಸಿಗುವುದಿಲ್ಲ. ಪ್ರಯಾಣಿಕರು ಸಂಸ್ಥೆ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದೆ.

ಬಿಎಂಟಿಸಿ ಪ್ರಯಾಣಿಕರು ತಮ್ಮ ಪ್ರಯಾಣಕ್ಕಾಗಿ ಬಸ್‌ಗಳ ಅಂದಾಜು ಆಗಮನ ಮತ್ತು ನಿರ್ಗಮನ ಸಮಯವನ್ನು ಪಾಲನೆ ಮಾಡಬೇಕಾಗುತ್ತದೆ. ಬಹುತೇಕ ಪ್ರಯಾಣಿಕರು ಬಸ್ ವೇಳಾಪಟ್ಟಿಯ ಮಾಹಿತಿಗಾಗಿ ನಮ್ಮ ಬಿಎಂಟಿಸಿ ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡುತ್ತಿದ್ದರು. ನಗರಕ್ಕೆ ಹೊಸದಾಗಿ ಬರುವ ಜನರಿಗೆ ಈ ಅಪ್ಲಿಕೇಶನ್ ಸಹಾಯಕ ಆಗಿದೆ. ಆದರೆ, ದತ್ತಾಂಶ ನಿರ್ವಹಣೆ ಹಿನ್ನೆಲೆ ಜನವರಿ 15ರಿಂದ 30ರ ವರೆಗೆ 'ನಮ್ಮ ಬಿಎಂಟಿಸಿ' ಮೊಬೈಲ್ ಅಪ್ಲಿಕೇಶನ್ ಕಾರ್ಯ ನಿರ್ವಹಿಸುವುದಿಲ್ಲ ಎಂದು ತಿಳಿಸಿದೆ.
ಈ ದಿನಗಳಲ್ಲಿ ಬಸ್‌ಗಳ ಮಾಹಿತಿ, ಯೋಜನೆ, ದರಗಳ ಪಟ್ಟಿ ಸೇರಿ ಯಾವುದೇ ಸೇವೆಗಳು ಕಾರ್ಯನಿರ್ಹಿಸುವುದಿಲ್ಲ. ಯಾವುದೇ ಸಮಸ್ಯೆಯಾದರೆ, ಬಿಎಂಟಿಸಿ ವಿಷಾದಿಸುತ್ತದೆ, ದತ್ತಾಂಶಗಳ ನಿರ್ವಹಣೆ ಪೂರ್ಣಗೊಂಡ ನಂತರ ಅಪ್ಲಿಕೇಶನ್ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನಗರದಲ್ಲಿ ಪ್ರತಿನಿತ್ಯ ಒಂದು ಕಡೆಯಿಂದ ಮತ್ತೊಂದಡೆಗೆ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣ ಮಾಡುವವರಿಗೆ ಬಸ್‌ಗಳ ಸಮಯ, ಮಾರ್ಗಗಳ ವಿವರದ ಬಗ್ಗೆ ಅಂದಾಜು ಇದ್ದೇ ಇರುತ್ತದೆ. ಆದರೆ, ಯಾವುದೇ ಮಾಹಿತಿ ಇಲ್ಲದವರು ಮಾತ್ರ ಈ ಅಪ್ಲಿಕೇಷನ್ ಅನ್ನು ಬಳಕೆ ಮಾಡುತ್ತಿದ್ದಾರೆ. ಪ್ರತಿನಿತ್ಯ ಸಂಚಾರ ಮಾಡುವವರು ಹೊಸ ಮಾರ್ಗಗಳಿಗೆ ಹೋಗಬೇಕಾದರೆ ಮಾತ್ರ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ.
ಒಟ್ಟಿನಲ್ಲಿ ಈ ಅಪ್ಲಿಕೇಷನ್ ಒಂದು ರೀತಿಯಲ್ಲಿ ನಗರದ ಹೊಸಬರಿಗೆ ಹಾಗೂ ಹಳಬರಿಗೂ ಕೂಡ ತುಂಬಾ ಉಪಯುಕ್ತ ಎಂದರೆ ತಪ್ಪಾಗಲಾರದು. ಇದೀಗ ಇದು ಮುಂದಿನ 15 ದಿನ ಕಾರ್ಯನಿರ್ವಹಿಸುವುದಿಲ್ಲ. ಈ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಬಿಎಂಟಿಸಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಈ ಮಹತ್ವದ ಮಾಹಿತಿಯನ್ನು ಮುಂಚಿತವಾಗಿ ನೀಡಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications