ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Bengaluru Rains : ಮುಂದಿನ ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಮಳೆ ಬರುವ ಸಾಧ್ಯತೆ

|
Google Oneindia Kannada News

ಬೆಂಗಳೂರು, ಡಿಸೆಂಬರ್‌ 14: ಮಂಗಳವಾರ 7.6 ಮೀಲಿಮೀಟರ್‌ ಮಳೆ ದಾಖಲಿಸಿದ್ದ ಬೆಂಗಳೂರಿಗೆ ಮುಂದಿನ ಎರಡು ದಿನಗಳಲ್ಲಿ ಮಳೆ ಬರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಾಂಡೌಸ್‌ ಚಂಡಮಾರುತ ಕ್ಷೀಣಿಸುತ್ತಾ ಬರುತ್ತಿರುವ ಪರಿಣಾಮ ಬುಧವಾರ ಬೆಳಗ್ಗೆ ಬೆಂಗಳೂರಿನಲ್ಲಿ ಮಳೆ ಬರಲಿಲ್ಲ. ಆದರೆ ಅಲ್ಲಲ್ಲಿ ಬಿಸಲು ಕಂಡು ಜನರು ಹರ್ಷಚಿತ್ತರಾದರೂ ಮತ್ತೆ ಮೋಡ ಕವಿದ ವಾತಾವರಣ ಆವರಿಸಿತ್ತು. ಇದು ಬೆಳಗ್ಗೆ 12 ಗಂಟೆಯಾದರು ದಟ್ಟ ಮೋಡ ಆವರಿಸಿತ್ತು. ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ತುಂತುರು ಮಳೆಯಿಂದಾಗಿ ಹಲವು ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಇತ್ತೀಚೆಗಷ್ಟೇ ನಿರ್ಮಿಸಿದ ರಸ್ತೆಗಳಲ್ಲಿ ಹಲವು ಕಡೆ ಹೊಂಡಗಳು ಬಿದ್ದಿವೆ.

Bengaluru Rains : ಮಂಗಳವಾರ ಸಂಜೆ ಕೆಲವೆಡೆ ಜೋರು ಮಳೆ ದಾಖಲುBengaluru Rains : ಮಂಗಳವಾರ ಸಂಜೆ ಕೆಲವೆಡೆ ಜೋರು ಮಳೆ ದಾಖಲು

ನಾಲ್ಕು ದಿನಗಳಿಂದ ಸುರಿದ ಮಳೆಗೆ ಹಲವಾರು ಜನರಲ್ಲಿ ಶೀತ, ನೆಗಡಿ, ಜ್ವರದಂತಹ ಲಕ್ಷಣಗಳು ಕಂಡು ಬಂದಿವೆ. ಅನೇಕ ಉದ್ಯೋಗಿಗಳು ವರ್ಕ್‌ ಫ್ರಮ್‌ ಹೋಂ ತೆಗೆದುಕೊಂಡು ಮನೆಯಿಂದಲೇ ಕೆಲಸ ಮುಂದುವರಿಸಿದ್ದಾರೆ. ಮಳೆಯಿಂದ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಮುಂಭಾಗದಲ್ಲಿ ದೊಡ್ಡ ಹೊಂಡವೊಂದು ಕಾಣಿಸಿಕೊಂಡಿದೆ. ವಾರದ ಹಿಂದೆಯಷ್ಟೇ ಇಲ್ಲಿ ರಸ್ತೆಯನ್ನು ಹಾಕಲಾಗಿತ್ತು. ಕಾಜಿ ಬಜಾರ್, ನೇತಾಜಿ ರಸ್ತೆ, ನಾಗರಭಾವಿ, ಮೈಸೂರು ರಸ್ತೆಯ ಕೆಲವು ಭಾಗಗಳಲ್ಲಿಯೂ ಹೊಸ ಹೊಂಡಗಳು ಕಾಣಿಸಿಕೊಂಡಿವೆ.

IMD predictes Rain is likely to occur in Bengaluru in the next two days

ನಾಗರಭಾವಿ ನಿವಾಸಿ ಪ್ರದೀಪ್ ಮಾತನಾಡಿ, ತಮ್ಮ ಪ್ರದೇಶದಲ್ಲಿ ಗುಂಡಿಗಳು ಹೆಚ್ಚಾಗಿವೆ. ಕಳೆದ 20 ದಿನಗಳಿಂದ ನಾಗರಭಾವಿಯಲ್ಲಿ 80 ಅಡಿ ರಸ್ತೆಯನ್ನು ಬಿಬಿಎಂಪಿ ವೈಟ್‌ಟಾಪ್‌ ಮಾಡುತ್ತಿದೆ. ಕೆಲವು ಗುಂಡಿಗಳಲ್ಲಿ ಮಣ್ಣು, ಜಲ್ಲಿಕಲ್ಲು ತುಂಬಿದ್ದರೆ, ಇನ್ನು ಕೆಲವೆಡೆ ಹಾಗೇ ಬಿಡಲಾಗಿದೆ ಎಂದಿದ್ದಾರೆ ಎಂದು ಡಿಎಚ್‌ ವರದಿ ಮಾಡಿದೆ.

IMD predictes Rain is likely to occur in Bengaluru in the next two days

ಬೆಂಗಳೂರಿನಲ್ಲಿ ಬುಧವಾರ ಸಂಜೆ ಇಲ್ಲ ರಾತ್ರಿ ವೇಳೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಮತ್ತು ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಕೆಲವು ಪ್ರದೇಶಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ತುಂಬಾ ಸಾಧ್ಯತೆ ಇದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 25 ಮತ್ತು 19 ಡಿಗ್ರಿ ಸೆಲ್ಸಿಯಸ್ ಆಗಿದೆ.

English summary
The Indian Meteorological Department has predicted that Bangalore, which recorded 7.6 mm of rain on Tuesday, is likely to receive rain in the next two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X