ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯಲ್ಲಿ ಮುಂಗಾರು ಚುರುಕು, ಬೆಂಗಳೂರಲ್ಲಿ ಭಾರಿ ಮಳೆ ಸಾಧ್ಯತೆ

By Nayana
|
Google Oneindia Kannada News

ಬೆಂಗಳೂರು, ಜು.9: ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕಾಗಿದ್ದು ಒಂದೆರೆಡು ದಿನಗಳಿಂದ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿತ್ತು. ಹಲವು ದಿನಗಳ ಬಳಿಕ ಮಳೆ ಬಂದಿದ್ದು, ತಂಪಾದ ವಾತಾವರಣ ಸೃಷ್ಟಿಯಾಗಿದೆ.

ಜು.9ರಿಂದ 12ರವರೆಗೆ ಬೆಂಗಳೂರಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೂನ್‌ ಮಧ್ಯಭಾಗದಿಂದಲೇ ನಗರದಲ್ಲಿ ಮಳೆ ನಿಂತುಹೋಗಿತ್ತು. ಮಳೆ ಸುರಿಸುವ ಮೋಡಗಳು ನಗರದಲ್ಲಿ ನಿರ್ಮಾಣವಾಗಿರದ ಕಾರಣ ಮಳೆ ಇಲ್ಲವಾಗಿತ್ತು.ಆದರೆ ತಾಪಮಾನವೇನೂ ಹೆಚ್ಚಳವಾಗಿರಲಿಲ್ಲ.

ಕರ್ನಾಟಕ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಸಾಧ್ಯತೆಕರ್ನಾಟಕ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಸಾಧ್ಯತೆ

ಕಳೆದ ವರ್ಷಕ್ಕೆ ಹೋಲಿಸಿದರೆ ನಗರದಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಜೂ.1ರಿಂದ ಜು.8ರವರೆಗೆ ನಗರದಲ್ಲಿ ಕೇವಲ 92 ಮಿ.ಮೀ ಮಳೆಯಾಗಿದೆ. ವಾಡಿಕೆಗಿಂತ 20 ಮಿ.ಮೀ ಮಳೆ ಕಡಿಮೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಸುರಿಯುತ್ತಿರುವ ಮಳೆ ನಗರದ ಮೇಲೂ ಪ್ರಭಾವ ಬೀರಲಿದೆ.

IMD forecast three days heavy rain in Bengaluru

ಮಳೆ ಇಲ್ಲದೇ ಹೋದರು ತಾಪಮಾನದಲ್ಲಿ ಏರಿಕೆ ಕಂಡು ಬಂದಿರಲಿಲ್ಲ.ಭಾಗಶಃ ಮೋಡ ಕವಿದ ವಾತಾವರಣವಿದ್ದ ಕಾರಣ ತಾಪಮಾನವೂ ವಾಡಿಕೆಯಷ್ಟೇ ಇತ್ತು. ಮಳೆ ಬಂದಿರುವುದರಿಂದ ತಾಪಮಾನದಲ್ಲೂ ಇಳಿಕೆಯಾಗಿದೆ.

ಬೆಂಗಳೂರು ನಗರದಲ್ಲಿ ಗಡಿಚ್ಠ 26.3 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 20.7ಡಿಗ್ರಿ ಸೆಲ್ಸಿಯಸ್‌, ಕೆಐಎಎಲ್‌ನಲ್ಲಿ ಗರಿಷ್ಠ 28.5 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 20.4ಡಿಗ್ರಿ ಸೆಲ್ಸಿಯಸ್‌, ಎಚ್‌ಎಎಲ್‌ನಲ್ಲಿ ಕನಿಷ್ಠ 26.7 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 20.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಇನ್ನೆರೆಡು ದಿನ ಬೆಂಗಳೂರಿನಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

English summary
Indian meteorological department has forecasted heavy rain in Bengaluru from July 9 to 11. The department also said rain will be continued in coastal and southern part of the state for a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X