Mango Mela: ಬೆಂಗಳೂರಿನ ಹೆಸರಘಟ್ಟದಲ್ಲಿ 'ತ್ರಿಫಲ ವೈವಿಧ್ಯತಾ ಮೇಳ 2024'
ಬೆಂಗಳೂರು, ಮೇ 28: ರಾಜ್ಯ ರಾಜಧಾನಿ ಬೆಂಗಳೂರಿನ ಮಾವು ಪ್ರಿಯರಿಗಾಗಿ ಮತ್ತೊಂದು ಮೇಳೆ ಆಯೋಜನೆಗೊಳ್ಳುತ್ತಿದೆ. ಭಾರತೀಯ ಕೃಷಿ ಸಂಶೋಧನಾ ಪರಿಷತ್ತು (ICAR) ವತಿಯಿಂದ ಮೂರು ದಿನಗಳ ಕಾಲ 'ತ್ರಿಫಲ ವೈವಿಧ್ಯ ಪ್ರದರ್ಶನ-2024' ನಡೆಯಲಿದೆ.
ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧಾನ ಸಂಸ್ಥೆ (IIHR)ಯ ಆವರಣದಲ್ಲಿ ಈ 'ತ್ರಿಫಲ ವೈವಿಧ್ಯ ಪ್ರದರ್ಶನ-2024' ಹಣ್ಣಿನ ಮೇಳವು ಮೇ 31ರಿಂದ ಜೂನ್ 2ರವರೆಗೆ ಜರುಗಲಿದೆ. ನಿತ್ಯ ಬೆಳಗ್ಗೆ 9.30ರಿಂದ ಸಂಜೆ 05 ಗಂಟೆವರೆಗೆ ಮೇಳ ನಡೆಯಲಿದೆ.

ಇಲ್ಲಿ ತರಹೇವಾರಿ ಮಾವಿನ ಹಣ್ಣಗಳು, ವಿವಿಧ ಜಾತಿಯ ಹಲಸು ಹಾಗೂ ಬಾಳೆ ಹಣ್ಣುಗಳು ಪ್ರದರ್ಶನ, ಮಾರಾಟವನ್ನು ಮೇಳ ಒಳಗೊಂಡಿರಲಿದೆ. ಈ ಪ್ರದರ್ಶನವು 11ನೇ ಆವೃತ್ತಿಯದ್ದಾಗಿದೆ. ಇದರಲ್ಲಿ 300 ವಿಶಿಷ್ಟ ಮಾವಿನ ತಳಿ, 100 ಹಳಸಿನ ತಳಿ, 100 ವಿವಿಧ ತಳಿಯ ಬಾಳೆ ಹಣ್ಣುಗಳನ್ನು ಪ್ರದರ್ಶನಗೊಳ್ಳಲಿವೆ. ಇವು ಗ್ರಾಹಕರಿಗೆ, ಮಾವು ಬೆಳೆಗಾರರಿಗೆ ಖರೀದಿಗೆ ಲಭ್ಯ ಇರಲಿವೆ ಎಂದು IIHR ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿ, ತೋಟಗಾರಿಕೆಗೆ ಮೇಳ ಉತ್ತೇಜನ
ಇಂತಹ ಮೇಳಗಳ ಮೂಲಕ ಹೆಚ್ಚಿನ ಆದಾಯದ ತೋಟಗಾರಿಕೆ ಉತ್ಪನ್ನ ಬೆಳೆಯಲು, ಕೃಷಿಯನ್ನು ಉತ್ತೇಜಿಸಲಿವೆ. ಅಲ್ಲದೆ ಇಂತಹ ಮೌಲ್ಯವರ್ಧಿತ ಬೆಳೆಗಳನ್ನು ಬೆಳೆದರು ಕೃಷಿಕರ ಜೀವನ ಮಟ್ಟ ಸುಧಾರಣೆ ಆಗುತ್ತದೆ. ಅಲ್ಲದೇ ರೈತರು ನೇರವಾಗಿ ತಾಜಾ ತೋಟಾರಿಕೆ ಉತ್ಪಾದನೆಯನ್ನು ಮಾರಾಟ ಮಾಡಲು ಸೂಕ್ತ ವೇದಿಕೆ ಸಿಕ್ಕಂತಾಗುತ್ತದೆ.
ಇದರೊಂದಿಗೆ ಒಂದು ಪ್ರದೇಶದ ಮಾವು, ಬಾಳೆ ಇನ್ನಿತರ ಹಣ್ಣಿನ ತಳಿಗಳು ಇತರೆ ಪ್ರದೇಶಗಳಿಗೆ ಪರಿಚಯವಾಗುತ್ತವೆ. ರೈತರು ಹೆಚ್ಚು ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ.

ಮೇಳದ ಮೂರು ವಿಶೇಷತೆಗಳು
ಮೇಳದ 'ಮಾವಿನ ಮಹೋತ್ಸವ'ದಲ್ಲಿ ಹಲವಾರು ಪ್ರದೇಶಗಳ ಮಾವಿನ ಪ್ರಭೇದಗಳು ರುಚಿ ಸವಿದು ಅನ್ವೇಷಿಸಬಹುದಾಗಿದೆ. 'ಹಲಸಿನ ಹಬ್ಬ'ದಲ್ಲಿ ಮಾಗಿದ ಮತ್ತು ರಸಭರಿತ ಹಣ್ಣುಗಳನ್ನು ಆಸ್ವಾಧಿಸುವ ಅನೇಕ ವಿಧಾನಗಳನ್ನು ತಿಳಿಯಬಹುದು. 'ಬಾಳೆ ಹಣ್ಣಿನ ವೈಭವ'ದಲ್ಲಿ ಬಾಳೆ ಹಣ್ಣಿನ ದೇಶಿ-ವಿದೇಶಿ ಪ್ರಬೇಧಗಳನ್ನು ಅನ್ವೇಷಿಸಿ ಹಾಘೂ ಅದರ ವಿವಿಧ ಉತ್ಪನಗನಳನ್ನು ಆನಂದಿಸಬಹುದು.
ರೈತರಿಗೆ, ವ್ಯಾಪಾರಿಗಳಿಗೆ ಮೇಳ ಸಹಕಾರಿ
ಮೇಳದಲ್ಲಿ ಬೇಸಿಗೆಯ ಸವಿರುಚಿಗಳಾದ ಮಾವಿನ ಪಾನೀಯ, ಹಲಸಿನ ಹಣ್ಣಿನ ಜಾಮ್, ಬಾರ್, ಬಾಳೆ ಕಾಯಿ, ಚೀಪ್ಸ್ ಇತ್ಯಾದಿಗಳನ್ನು ಖರೀದಿಸಬಹುದು. ಮುಖ್ಯವಾಗಿ ಈ ಮೇಳವು ರೈತರು, ವ್ಯಾಪಾರಿಗಳು, ರಫ್ತುದಾರರು, ಸರ್ಕಾರಿ ಅಧಿಕಾರಿಗಳು ಮತ್ತು ಇನ್ನಿತರ ಸಂಸ್ಥೆಗಳು ಮುಖ್ಯಸ್ಥರು ಭೇಟಿ ಆಗಲು ಸಂಪರ್ಕ ಹೊಂದಲು ಇದೊಂದು ಒಳ್ಳೆಯ ವೇದಿಕೆ ಆಗಿದೆ. ಹೆಚ್ಚಿನ ಮಾಹಿತಿ/ಸ್ಟಾಲ್ ಬುಕ್ಕಿಂಗ್‌ಗೆ 9448813662, 9211828515 ಗೆ ಸಂಪರ್ಕಿಸುವಂತೆ ಐಐಎಚ್‌ಆರ್ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಶುಕ್ರವಾರದಿಂದ ಮೂರು ದಿನ ಹೆಸಘಟ್ಟದಲ್ಲಿ ಮೂರು ಹಣ್ಣುಗಳ ವೈವಿಧ್ಯತಾ ಮೇಳೆ ಆರಂಭವಾಗಿದೆ. ಐಐಎಚ್‌ಆರ್ ನಿರ್ದೇಶಕರು ಸೇರಿದಂತೆ ಅತಿಥಿಗಳು ಈ ಮೇಳಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಲಕ್ಷಾಂತರ ರೈತರು, ಯುವ ವ್ಯವಸಾಯಗಾರರು, ತೋಟಗಾರಿಕೆ ಬೆಳೆಗಾರರು, ಗ್ರಾಹಕರು ಮೇಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಐಐಎಚ್‌ಆರ್ ತಿಳಿಸಿದೆ.












Click it and Unblock the Notifications