Water Crisis: ವರ್ಕ್ ಫ್ರಂ ಹೋಮ್ ಕೊಟ್ಟು ಬೆಂಗಳೂರಿಗೆ ಉಪಕಾರ ಮಾಡಿ
ಬೆಂಗಳೂರು, ಮಾರ್ಚ್ 25: ಬೆಂಗಳೂರಿನಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುತ್ತಿದೆ. ಪರಿಸ್ಥಿತಿ ದಿನೇ ದಿನೆ ಬಿಗುಡಾಯಿಸುತ್ತಿದೆ. ಈ ಕಾರಣದಿಂದ ಬೆಂಗಳೂರಿನಲ್ಲಿ ಕೆಲಸ ಮಾಡುವ ಐಟಿ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು (WFH) ಅವಕಾಶ ಕಲ್ಪಿಸಿಕೊಡುವಂತೆ ಐಟಿ ಉದ್ಯಮ ಮತ್ತು ಸರ್ಕಾರದ ಮೇಲೆ ಒತ್ತಾಯ ಹೆಚ್ಚಾಗುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರದ ಪ್ರಕಾರ, ಬೆಂಗಳೂರು ದಿನಕ್ಕೆ ಸುಮಾರು 500 ಮಿಲಿಯನ್ (ಎಂಎಲ್‌ಡಿ) ಲೀಟರ್ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಮನೆಯಿಂದ ಕೆಲಸ ಮಾಡಲು (WFH)ಗೆ ಅವಕಾಶ ನೀಡುವುದರಿಂದ ದೇಶದ ಸಿಲಿಕಾನ್ ವ್ಯಾಲಿಯ ಜನರು ಕಡಿಮೆ ಆಗುತ್ತಾರೆ. ಆಗ ನೀರಿನ ಬಳಕೆ, ಬೇಡಿಕೆ ಪ್ರಮಾಣ ತಗ್ಗುತ್ತದೆ. ಇದರಿಂದ ನೀರಿನ ಬಿಕ್ಕಟ್ಟು ನಿವಾರಣೆಗೆ ಸಹಾಯವಾಗುತ್ತದೆ.

ಕೆಲ ನ್ಯಾಯಾಧೀಶರ ಅಭಿಪ್ರಾಯವೂ ಇದೆ
ಕಾನೂನು ವಿದ್ವಾಂಸರು ಮತ್ತು ಜಲ ತಜ್ಞರು ಸಹ ಕರ್ನಾಟಕ ಸರ್ಕಾರವು ನೀರಿನ ಬಿಕ್ಕಟ್ಟು ಎದುರಾದ ಹಿನ್ನೆಲೆ WFH ಕೈಗೊಳ್ಳಬಹುದು ಎಂದು ಸೂಚಿಸಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ನ್ಯಾಯಮೂರ್ತಿ ಕೆ ಶ್ರೀಧರ್ ರಾವ್ ಅವರು, ಕರ್ನಾಟಕ ಮತ್ತು ಅಸ್ಸಾಂ ಹೈಕೋರ್ಟ್‌ಗಳ ಮಾಜಿ ಹಂಗಾಮಿ ಮುಖ್ಯ ನ್ಯಾಯಾಧೀಶರು, ಬೆಂಗಳೂರಿನ ಸುಮಾರು 15 ಲಕ್ಷ ಐಟಿ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಅವಕಾಶ ಕೊಡುವುದರ ಕುರಿತು ಮಾತನಾಡಿದ್ದರು ಎಂದು 'ಇಟಿ' ವರದಿ ಮಾಡಿದೆ
ವರ್ಕ್ ಫ್ರಂ ಹೋಂ ಅವಕಾಶ ಜಾರಿಯಾದರೆ ಬೆಂಗಳೂರಿನಲ್ಲಿನ ಸಮಾರು ಸುಮಾರು 10 ಲಕ್ಷ ಜನರು ತಮ್ಮ ಊರುಗಳಿಗೆ ಮರಳಬಹುದು. ಇದು ಬೆಂಗಳೂರಿನ ಸಂಪನ್ಮೂಲಗಳ ಮೇಲಿನ ಸದ್ಯದ ಒತ್ತಡ ಕಡಿಮೆ ಮಾಡಲು ನೆರವಾಗುತ್ತದೆ ಎಂದು ನ್ಯಾಯಮೂರ್ತಿ ರಾವ್ ಅಭಿಪ್ರಾಯಪಟ್ಟರು.
ಬೆಂಗಳೂರಿಗೆ ಕೊಡುಗೆ ನೀಡಲಿದೆ WFH
ಸದ್ಯ ಬೆಂಗಳೂರಿನ ಜನಸಂಖ್ಯೆ 1.5 ಕೋಟಿಯಷ್ಟಿದೆ. ಕರ್ನಾಟಕ ರಾಜ್ಯವು 2003-04ರಲ್ಲಿ ಮೂರು ವರ್ಷಗಳ ಬರಗಾಲವನ್ನು ಎದುರಿಸುತ್ತಿದ್ದರೂ ಸಹ, ಆ ಸಮಯದಲ್ಲಿ ಕಡಿಮೆ ಜನಸಾಂದ್ರತೆಯ ಕಾರಣದಿಂದಾಗಿ ಪರಿಣಾಮವು ತೀವ್ರವಾಗಿ ಅನುಭವಿಸಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದರು.
ನ್ಯಾಯಮೂರ್ತಿಗಳ ಈ ಸಲಹೆಯನ್ನು ನೆಟ್ಟಿಗರು ಬೆಂಬಲಿಸಿದ್ದಾರೆ. ಮನೆಯಿಂದ ಕೆಲಸ ಮಾಡುವ (WFH) ತುರ್ತು ಅಗತ್ಯತೆ ಇದೆ. ಇದು ನೀರಿನ ಸಂರಕ್ಷಣೆಗೆ ಸಕ್ರಿಯವಾಗಿ ಕೊಡುಗೆ ನೀಡುತ್ತದೆ. ಜನರು ತಮ್ಮ ಊರಿಗೆ ಹಿಂತಿರುಗುತ್ತಾರೆ, ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಆಗುತ್ತಿದೆ ಎಂದಿದ್ದಾರೆ.

WFH ಬೆಂಗಳೂರಿಗೆ ಸಹಕರಿಸಿ
ನಗರದ ಐಟಿ ಕಂಪನಿಗಳು ವಲಸೆ ಉದ್ಯೋಗಿಗಳಿಗೆ ತಮ್ಮ ಸ್ಥಳೀಯ ಸ್ಥಳಕ್ಕೆ ಹೋಗಲು WFH ಗೆ ಅವಕಾಶ ನೀಡಬೇಕು. ಬೇಸಿಗೆ ಮುಗಿಯುವವರೆಗೆ ಮನೆಯಲ್ಲಿಯೇ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು ಎಂದು ಮತ್ತೊಬ್ಬ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ಕೋವಿಡ್ ಸಾಂಕ್ರಾಮಿಕದಲ್ಲಿ WFH ಕ್ರಮವನ್ನು ಐಟಿ ಕಂಪನಿಗಳು ಅನುಸರಿಸಿದ್ದವು. ಸದ್ಯ ಅದೇ ಕಂಪನಿಗಳ ಕಚೇರಿಯಿಂದ ಕೆಲಸ ಮಾಡುವಂತೆ ಸೂಚಿವೆ. ಮಳೆ ಕೊರತೆಯಿಂದ ಹಲವು ಕೊಳವೆಬಾವಿಗಳು ಬತ್ತಿ ಹೋಗಿವೆ. ಕಾವೇರಿ ನೀರು ಸರಬರಾಜು ಆಗುತ್ತಿದ್ದರು ಸಮಸ್ಯೆ ಉದ್ಭವಿಸಿದೆ.
ಪ್ರಸಕ್ತ 2024 ವರ್ಷದ ಮುಂಗಾರು ಉತ್ತಮವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಹೀಗಾಗಿ ಕೆಲವು ತಿಂಗಳು ಮನೆಯಿಂದ ಉದ್ಯೋಗಿಗಳಿಗೆ ಕೆಲಸಕ್ಕೆ ಸೂಚಿಸುವುದು ಅನಿವಾರ್ಯ ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
ಬೆಂಗಳೂರಿನ 14,000 ಬೋರ್‌ವೆಲ್‌ಗಳಲ್ಲಿ ಅರ್ಧದಷ್ಟು ನೀರು ಬತ್ತಿ ಹೋಗಿವೆ. ಕಾವೇರಿ ನದಿಯಿಂದ ನಿತ್ಯ ಬೆಂಗಳೂರಿಗೆ 1,470 ಎಂಎಲ್‌ಡಿ ನೀರನ್ನು ಪಡೆಯುತ್ತದೆ. ಕಾವೇರಿ ಯೋಜನೆಯ 5ನೇ ಹಂತದ ಕಾಮಗಾರಿಯನ್ನು ಜೂನ್ ವೇಳೆಗೆ ಪೂರ್ಣಗೊಳಿಸಿದರೆ ಬೆಂಗಳೂರಿನ ನೀರಿನ ಬಿಕ್ಕಟ್ಟನ್ನು ದೊಡ್ಡ ಮಟ್ಟದಲ್ಲಿ ನಿವಾರಿಸಲು ಸಾಧ್ಯವಾಗಲಿದೆ.












Click it and Unblock the Notifications