ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರೆ, ಸಿ.ಟಿ.ರವಿ ಏಕೆ ಹೀಗಂದರು? ಬಹುಮತ ಸಾಬೀತು ಆಗಲ್ವಾ?

By Manjunatha
|
Google Oneindia Kannada News

ಬೆಂಗಳೂರು, ಮೇ 18: ಬಿಜೆಪಿಯ ಯಾರೇ ಶಾಸಕರು, ಮುಖಂಡರನ್ನು ಮಾತನಾಡಿಸಿದರೂ ಹೇಳುತ್ತಿರುವುದು ಒಂದೇ ನಾವು ಬಹುಮತ ಸಾಬೀತು ಮಾಡಿಯೇ ತಿರುತ್ತೇವೆ ಎಂದು, ಆದರೆ ಸಿ.ಟಿ.ರವಿ ಮಾತ್ರ ಯಾಕೋ ಸ್ವಲ್ಪ ಭಿನ್ನವಾದ ಹೇಳಿಕೆ ನೀಡುತ್ತಿದ್ದಾರೆ ಇದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಹೌದು, ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, '1996ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಬಹುಮತ ಸಾಬೀತಾಗದಿದ್ದಾಗ ರಾಜಿನಾಮೆ ಕೊಟ್ಟು ಹೊರ ಹೊಗಿದ್ದರು, ಅದು ರಾಜಮಾರ್ಗ, ನಾವು ಆ ಮಾರ್ಗದಲ್ಲೇ ನಡೆಯುತ್ತೇವೆ' ಎಂದಿದ್ದಾರೆ.

ಅಖಾಡಕ್ಕಿಳಿದ ಜನಾರ್ದನ ರೆಡ್ಡಿ, ಕಾಂಗ್ರೆಸ್‌ ಶಾಸಕನಿಗೆ ಗಾಳ?ಅಖಾಡಕ್ಕಿಳಿದ ಜನಾರ್ದನ ರೆಡ್ಡಿ, ಕಾಂಗ್ರೆಸ್‌ ಶಾಸಕನಿಗೆ ಗಾಳ?

ಯಡಿಯೂರಪ್ಪ, ಅನಂತ್‌ಕುಮಾರ್, ಶೋಭಾ ಕರಂದ್ಲಾಜೆ, ಈಶ್ವರಪ್ಪ ಎಲ್ಲರೂ ಖಂಡಿತ ಬಹುಮತ ಸಾಬೀತು ಮಾಡುತ್ತೇವೆ ಎಂದು ವಿಶ್ವಾಸದಿಂದ ಹೇಳುತ್ತಿರುವಾಗ ಸಿ.ಟಿ.ರವಿ ಅವರ ಈ ಹೇಳಿಕೆ ಅನುಮಾನ ಮೂಡಿಸಿದ್ದು, ನಾಳೆ ಬಹುಮತ ಸಾಬೀತಾಗದಿದ್ದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುತ್ತಾರೆಯೇ ಎಂಬ ಅನುಮಾನ ಮೂಡಿದೆ.

If we fail to prove majority we will resighn : CT Ravi

ಮುಂದುವರೆದು ಮಾತನಾಡಿರುವ ಸಿ.ಟಿ.ರವಿ ಅವರು, ಸಿದ್ದರಾಮಯ್ಯ ಅವರು ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಏಳು ಶಾಸಕರಿಂದ ಮತ ಹಾಕಿಸಿಕೊಂಡಿದ್ದರು ಆದರೆ ಈಗ ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರೆ' ಎಂದರು.

ಕೈ-ತೆನೆ ಬೇಟೆಯ ಭಯ, 'ರೆಸಾರ್ಟ್ ರಾಜಕೀಯ'ಕ್ಕೆ ಮೊರೆ ಹೋದ ಬಿಜೆಪಿಕೈ-ತೆನೆ ಬೇಟೆಯ ಭಯ, 'ರೆಸಾರ್ಟ್ ರಾಜಕೀಯ'ಕ್ಕೆ ಮೊರೆ ಹೋದ ಬಿಜೆಪಿ

ಕಾಂಗ್ರೆಸ್ ಶಾಸಕರಿಗೆ ಜೀವ ಬೆದರಿಕೆ ಎಂಬ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಹೇಳಿಕೆಗೆ ಸಿಟ್ಟಾದ ಸಿಟಿ ರವಿ, ಯಾವ ಶಾಸಕರಿಗೆ ಬೆದರಿಕೆ ಇದೆ ಎಂದು ಹೇಳಲಿ, ರಮ್ಯಾ ಅವರಿಗೆ ಬೆದರಿಕೆ ಇದ್ದರೂ ಹೇಳಲಿ ನಾನೇ ಭದ್ರತೆ ಕೊಡಿಸುತ್ತೇನೆ ಎಂದರು.

English summary
BJP MLA CT Ravi said If we fail to prove majority, in 1996 what ex prime minister Atal Bihari vajapayi did we repeat it it here. He also said we wont use short cut rote to prove majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X