ನನಗೆ ಮಾತಿಗಿಂತ ಕೆಲಸದಲ್ಲಿ ನಂಬಿಕೆ ಇದೆ: ಯಡಿಯೂರಪ್ಪ
ಬೆಂಗಳೂರು, ಡಿಸೆಂಬರ್ 11: ನಾನು ಮಾತಿಗಿಂತ ಕೆಲಸದಲ್ಲಿ ನಂಬಿಕೆ ಇರುವವನು. ನನ್ನ ಸಾಧನೆ ಮಾತನಾಡಬೇಕು, ಮಾತನಾಡುವುದೇ ಸಾಧನೆ ಆಗಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬುಧವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಾತನಾಡಿದ ಮುಖ್ಯಮಂತ್ರಿ, ನಮ್ಮ ಸರ್ಕಾರದ ಧ್ಯೇಯವಾಕ್ಯವೇ ಸಾಧನೆ ಮಾತನಾಡಬೇಕು ಅನ್ನೋದು, ಅದಕ್ಕಾಗಿ ನಮ್ಮ ಮೇಲೆ ಜನರು ವಿಶ್ವಾಸವಿಟ್ಟಿದ್ದಾರೆ. ನಾವೆಲ್ಲಾ ಸೇರಿ ರಾಜ್ಯದ ಅಭಿವೃದ್ದಿಯಲ್ಲಿ ಪಾಲ್ಗೊಳ್ಳೋಣವೆಂದು ಕರೆ ನೀಡಿದರು.
ಬೆಂಗಳೂರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವುದು ನನ್ನ ಕನಸು, ಅದಕ್ಕಾಗಿ ಶ್ರಮಿಸುತ್ತಿದ್ದೇನೆ ಎಂದರು. ನಿನ್ನೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯದ ರಸ್ತೆಗಳ ಅಭಿವೃದ್ದಿಗೆ 50 ಸಾವಿರ ರೂಪಾಯಿಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

ನಾವು ಜನರ ತೆರಿಗೆ ಹಣದಿಂದ ಮೆಡಿಕಲ್ ಕಾಲೇಜು, ಇಂಜಿನಿಯರ್ ಕಾಲೇಜು ಕಟ್ಟಿಸಿ ಶಿಕ್ಷಣ ನೀಡಿರುತ್ತೇವೆ, ಆದರೆ ವೈದ್ಯಕೀಯ ಶಿಕ್ಷಣ ಪಡೆದ ನಂತರ ಯುವ ಜನೆತೆ ಅವರವರ ತಾಲ್ಲೂಕು, ಹಳ್ಳಿಗಳಿಗೆ ಹೋಗುವುದಿಲ್ಲ ಎಂದರು.
ಇಂದಿನ ದಿನಗಳಲ್ಲಿ ಎಲ್ಲರಿಗೂ ಹೊರದೇಶದ ಹುಚ್ಚು ಹಿಡಿದಿದೆ. ಫಾರೀನ್ ವ್ಯಾಮೋಹದಿಂದ ಹೊರಗೆ ಬರಬೇಕು. ನಮ್ಮತನವನ್ನು ನಾವು ಉಳಿಸದೇ ಮತ್ಯಾರು ಉಳಿಸಬೇಕು ಎಂದರು. ಇಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ವಿದೇಶಕ್ಕೆ ಹೋಗುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.











Click it and Unblock the Notifications