• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಅಧ್ಯಕ್ಷ ಸ್ಥಾನದ ರೇಸಿನಲ್ಲಿ ನಾನಿಲ್ಲ : ಶೋಭಾ ಕರಂದ್ಲಾಜೆ

|
   ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಶೋಭಾ ಕರಂದ್ಲಾಜೆ ಹೇಳಿದ್ದೇನು?

   ಬೆಂಗಳೂರು, ಮೇ 3: ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಲಾಗಿರುವ ಬೆಂಗಳೂರು ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು, ಲೋಕಸಭೆ ಚುನಾವಣೆ ನಂತರ ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನ ಬದಲಾಗಲಿದೆ ಎಂಬ ಸುದ್ದಿಗೆ ಪ್ರತಿಕಿಯಿಸಿ, ಬಿಜೆಪಿ ಅಧ್ಯಕ್ಷ ಸ್ಥಾನದ ರೇಸಿನಲ್ಲಿ ನಾನಿಲ್ಲ ಎಂದು ಸ್ಪಷ್ಟಪಡಿಸಿದರು.

   ಬೆಂಗಳೂರು ಉತ್ಸವ 2019ರಲ್ಲಿ ಚೆಂದದ ಸೀರೆ ಖರೀದಿಸಿದ ಸಂಸದೆ ಶೋಭಾ

   ನಗರದ ಚಿತ್ರಕಲಾ ಪರಿಷತ್ತಿನಲ್ಲಿ 10 ಕಾಲ ಆಯೋಜಿಸಲಾಗಿರುವ "ಬೆಂಗಳೂರು ಉತ್ಸವವನ್ನು" ಉದ್ಘಾಟಿಸಿ ಅವರು ಮಾತನಾಡಿದರು.ಕಲಾವಿದರ ಕೈಚಳಕದ ಹೊಸ ಜಗತ್ತು ನಿರ್ಮಾಣವಾಗಿದೆ. ಚಿತ್ರಕಲಾ ಪರಿಷತ್ತು ಕಲಾಜಗತ್ತಿನಲ್ಲಿ ತನ್ನದೇ ಆದಂತ ವಿಶಿಷ್ಟ ಜಾಗವನ್ನು ಹೊಂದಿದೆ. ಕಲಾವಿದರಿಗೆ ಪೋಷಣೆ, ಅವರ ಕಲೆಗೆ ಸೂಕ್ತ ವೇದಿಕೆ ಕಲ್ಪಿಸುವುದು ಇಂತಹ ಅನೇಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದಾರೆ. ಈ ಆವರಣದಲ್ಲಿ ದೇಶದ ವಿವಿಧ ಭಾಗಗಳ ಕಲಾವಿದರಿಂದ ತಯಾರಾಗಿರುವ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡುತ್ತಿರುವುದು ಸಂತಸ ತಂದಿದೆ ಎಂದರು.

   ಆಗಸ್ಟ್‌ ತನಕ ಕರ್ನಾಟಕ ಬಿಜೆಪಿ ಅಧ್ಯಕ್ಷರ ಬದಲಾವಣೆ ಇಲ್ಲ!

   ಯಡಿಯೂರಪ್ಪ ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಮೂರು ವರ್ಷ ಪೂರೈಸಿದ್ದಾರೆ. ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸ್ಥಾನವನ್ನು ಹೊಂದಿದ್ದಾರೆ. ಆದರೆ, ಆಗಸ್ಟ್‌ ತಿಂಗಳ ತನಕ ರಾಜ್ಯಾಧ್ಯಕ್ಷರ ಬದಲಾವಣೆ ಆಗುವುದಿಲ್ಲ ಎಂಬ ಸುದ್ದಿ ಬಂದಿದೆ. ಕಾರ್ಯಕ್ರಮದಲ್ಲಿ ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರೊ ಜೆ ಕಮಲಾಕ್ಷಿ, ಕ್ಯೂರೇಟರ್ ಅಪ್ಪಾಜಯ್ಯ, ಆಯೋಜಕರಾದ ಅಫ್ತಾಬ್ ಮಜೀದ್ ಸೇರಿದಂತೆ ಹಲವರು ಭಾಗವಹಿಸಿದ್ದರು.

   ರಾಜಕೀಯದಲ್ಲಿ ಇರುವವರಿಗೆ ಚುನಾವಣೆಗಳು ಸಾಮಾನ್ಯ

   ರಾಜಕೀಯದಲ್ಲಿ ಇರುವವರಿಗೆ ಚುನಾವಣೆಗಳು ಸಾಮಾನ್ಯ

   ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಲ್ಲಿ ಇರುವವರಿಗೆ ಚುನಾವಣೆಗಳು ಸಾಮಾನ್ಯ. ಒಂದು ಚುನಾವಣೆ ಮುಗಿದ ಕೂಡಲೇ ಇನ್ನೊಂದು ಚುನಾವಣೆ ಪ್ರಾರಂಭವಾಗುತ್ತವೆ. ಆದರೆ, ಈ ಬಾರಿಯ ಲೋಕಸಭಾ ಚುನಾವಣೆ ಮುಗಿಸಿದ ನಂತರ ಇಂತಹ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಭಾಗವಹಿಸಿ ಶಾಪಿಂಗ್ ಮಾಡಿದ್ದು ಖುಷಿಯಾಯಿತು ಎಂದರು. ಕಾಶ್ಮೀರಿ ಸೀರೆಗಳನ್ನು ಬಹಳ ಆಸಕ್ತಿಯಿಂದ ನೋಡಿದ ಅವರು ಹಲವಾರು ಸೀರೆಗಳನ್ನು ಖರೀದಿಸಿದರು. ಅಲ್ಲದೆ, ರಾಮ ಲಕ್ಷಣ ಹಾಗೂ ಸೀತೆಯ ವಿಗ್ರಹಗಳನ್ನು ಬಹಳ ಆಸಕ್ತಿಯಿಂದ ಕೊಂಡುಕೊಂಡರು.

   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುವರ್ಣ ಭುಜ ಬೋಟ್ ನ್ನು ಪತ್ತೆಹಚ್ಚಿರುವ ಜಲಸೇನಾ ಅಧಿಕಾರಿಗಳ ಕಾರ್ಯ ಶ್ಲಾಘನೀಯ. ಕೇಂದ್ರದ ರಕ್ಷಣಾ ಮಂತ್ರಿ ಅವರ ಬಳಿ ನಾವು ಮಾಡಿಕೊಂಡಿದ್ದ ಮನವಿ ಸಫಲವಾಗಿದೆ ಎಂದರು.

   ಅಧ್ಯಕ್ಷರಾದ ಬಿ ಎಲ್ ಶಂಕರ್ ಮಾತನಾಡಿ

   ಅಧ್ಯಕ್ಷರಾದ ಬಿ ಎಲ್ ಶಂಕರ್ ಮಾತನಾಡಿ

   ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಬಿ ಎಲ್ ಶಂಕರ್ ಮಾತನಾಡಿ, ಕಲಾವಿದರಿಗೆ ಸೂಕ್ತ ವೇದಿಕೆಯನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಈ ರೀತಿಯ ಉತ್ಸವಗಳ ಮೂಲಕ ಜನರು ಹಾಗೂ ಕಲಾವಿದರ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಕಲಾವಿದರಿಗೆ ತಮ್ಮ ಕಲಾಕೃತಿಗಳನ್ನು ಮಾರಾಟ ಮಾಡುವು ಸದಾವಕಾಶ ಹಾಗೂ ಜನರಿಗೆ ಕಲಾವಿದರಿಂದಲೇ ಕಲಾಕೃತಿಗಳನ್ನು ಕೊಂಡುಕೊಳ್ಳುವು ಅವಕಾಶ ಇದಾಗಿದೆ. ಮೇ 3 ರಿಂದ ಮೇ 12 ರ ವರೆಗೆ ಈ ಬೆಂಗಳೂರು ಉತ್ಸವ ನಡೆಯಲಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕಾಗಿದೆ ಎಂದರು.

   ಆಗಸ್ಟ್‌ ತನಕ ಕರ್ನಾಟಕ ಬಿಜೆಪಿ ಅಧ್ಯಕ್ಷರ ಬದಲಾವಣೆ ಇಲ್ಲ!

   ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ

   ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ

   ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ರಾಷ್ಟ್ರಮಟ್ಟದಲ್ಲಿ ನಡೆಯುವ ಪ್ರಕ್ರಿಯೆ. 2016ರಲ್ಲಿ ಕರ್ನಾಟಕ ಸೇರಿ 4 ರಾಜ್ಯಗಳಿಗೆ ಒಟ್ಟಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಈಗ ಕೇವಲ ಒಂದು ರಾಜ್ಯದ ಅಧ್ಯಕ್ಷರನ್ನು ಬದಲಾವಣೆ ಮಾಡುವುದಿಲ್ಲ, ಎಲ್ಲಾ ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ಬದಲಾವಣೆ ಪ್ರಕ್ರಿಯೆ ಆರಂಭಿಸಲಿದ್ದಾರೆ. ಆಯಾ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಹಕಾರಿಯೇ, ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು, ಪಕ್ಷ ಸಂಘಟನೆಯ ಹೊಣೆ ಹೊರಬಲ್ಲರೇ ಹೀಗೆ ಅನೇಕ ಅಂಶಗಳನ್ನು ಪರಿಗಣಿಸಲಾಗುತ್ತದೆ.

   "ಬೆಂಗಳೂರು ಉತ್ಸವ-2019" ಸಮ್ಮರ್ ಶಾಪಿಂಗ್ ಕಾರ್ನಿವಲ್

   ಬೆಂಗಳೂರಿನಲ್ಲಿ ಬೇಸಿಗೆ ರಜಾವನ್ನು ಗಮನದಲ್ಲಿಟ್ಟುಕೊಂಡು "ಬೆಂಗಳೂರು ಉತ್ಸವ-2019" ಸಮ್ಮರ್ ಶಾಪಿಂಗ್ ಕಾರ್ನಿವಲ್ ಮೇಳವನ್ನು ಮೇ 3 ರಿಂದ ಮೇ 12 ರ ವರೆಗೆ 10 ದಿವಸಗಳ ಕಾಲ ಚಿತ್ರಕಲಾ ಪರಿಷತ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿಗೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು 10 ದಿವಸಗಳ ಈ ವಿಶಿಷ್ಟ ಬೆಂಗಳೂರು ಉತ್ಸವ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಉತ್ಪಾದಕರನ್ನು ಪ್ರೋತ್ಸಾಹಿಸಬೇಕೆಂದು ಈ ಮೂಲಕ ಕೋರಲಾಗಿದೆ. ಮೇಳಕ್ಕೆ ಪ್ರವೇಶವನ್ನು ಉಚಿತವಾಗಿ ಕಲ್ಪಿಸಲಾಗಿದೆ.

   ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ "ಬೆಂಗಳೂರು ಉತ್ಸವ"

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   MP Shobha Karandlaje inaugurated "BENGALURU UTSAVA" organised in Karnataka Chitrakala Parishath Today and said I am not in the race for Karnataka BJP President post. She was in relaxing mood and bought some kashmiri saris. She described her happiness about the Art & Craft Display by the artisans.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more