ನಾರ್ಥಿಗಳಿಂದ ಮತ್ತೆ ಕನ್ನಡಿಗರಿಗೆ ಅವಮಾನ: ಆಕ್ರೋಶ
ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಪ್ರಯತ್ನವನ್ನು ಕೆಲವು ನಾರ್ಥಿಗಳು ಮುಂದುವರಿಸಿದ್ದಾರೆ. ಕನ್ನಡಿಗರು ಹಾಗೂ ಕನ್ನಡ ಭಾಷೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವುದು ಮುಂದುವರಿದಿದೆ. ಆದರೆ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ವಿಷಯದಲ್ಲಿ ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸಲಾಗುತ್ತಿದೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರೂ ಸಹ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.
ಕನ್ನಡಿಗರು ಹಾಗೂ ಕನ್ನಡ ಭಾಷೆಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಕೆಲವು ಬೇಕೆಂದೇ ಕೆಟ್ಟದಾಗಿ ಪೋಸ್ಟ್ ಮಾಡುವುದು ಹಾಗೂ ಹೀಯಾಳಿಸುವುದು ಕೆಟ್ಟ ಅಭ್ಯಾಸವಾಗಿ ಬಿಟ್ಟಿದೆ. ಅಲ್ಲದೇ ಈ ರೀತಿ ಕನ್ನಡಿಗರ ಬಗ್ಗೆ ಕೆಟ್ಟದಾಗಿ ಬರೆದರೆ, ಮಾತಾಡಿದರೆ ಹೆಚ್ಚು ಪ್ರಸಿದ್ಧಿ ಗಳಿಸಬಹುದು ಎನ್ನುವ ಕೆಟ್ಟ ಚಾಳಿಯನ್ನೂ ಕೆಲವು ನಾರ್ಥಿಗಳು ಬೆಳೆಸಿಕೊಂಡಿದ್ದಾರೆ. ಇದಕ್ಕೆ ಮತ್ತೊಂದು ಸಾಕ್ಷಿ ಎಂದರೆ, ಇದೀಗ ಕೋಲ್ಡ್ ಪ್ಲೇ (Coldplay) ಹೆಸರಿನಲ್ಲಿ ಕನ್ನಡಿಗರಿಗೆ ಅವಮಾನ ಮಾಡುತ್ತಿರುವುದು. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ವಾಯ್ಸ್ ಆಫ್ ಹಿಂದುತ್ವ ಎನ್ನುವ ಖಾತೆಯಿಂದ ಮಾಡಿರುವ ಟ್ವೀಟ್ ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈ ಖಾತೆಯನ್ನು 91.6ಕೆ ಫಾಲೋವರ್ಸ್ ಫಾಲೋ ಮಾಡ್ತಾ ಇದ್ದಾರೆ. ಈ ಖಾತೆ ಹೊಂದಿರುವವರು ಮೂಲತಃ (ಎನ್‌ಸಿಆರ್) ಉತ್ತರ ಪ್ರದೇಶದ ನೋಯ್ಡದವನು ಎಂದು ಹೇಳಿಕೊಂಡಿದ್ದಾರೆ. ಈ ಖಾತೆಯನ್ನು ಕೆಲವು ಕನ್ನಡಿಗರೂ ಸಹ ಫಾಲೋ ಮಾಡ್ತಾ ಇದ್ದಾರೆ. ಇಷ್ಟಾದರೂ ಈ ಖಾತೆಯಿಂದ ಪದೇ ಪದೇ ಕನ್ನಡಿಗರ ತಾಳ್ಮೆಯ ಪರೀಕ್ಷೆ ಮಾಡುವ ಕೆಲಸ ಮಾಡಲಾಗುತ್ತಿದೆ.

ಕೋಲ್ಡ್ ಪ್ಲೇ ಹೆಸರಲ್ಲಿ: ಇದೀಗ ಕೋಲ್ಡ್ ಪ್ಲೇ (ಹಾಡು) ಹೆಸರಿನಲ್ಲಿ ಕನ್ನಡಿಗರನ್ನು ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ನೂರಾರು ಜನ ನೆಗೆಟಿವವ್ ಕಾಮೆಂಟ್ ಮಾಡುತ್ತಿದ್ದಾರೆ. ಕನ್ನಡದಲ್ಲಿ ಹಾಡುವಂತೆ ಅಭಿಮಾನಿಗಳು ಕೇಳಿಕೊಂಡ ಹಿನ್ನೆಲೆಯಲ್ಲಿ ಕೋಲ್ಡ್‌ಪ್ಲೇ ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಿದೆ ಎಂದು ಟ್ವೀಟ್ ಮಾಡಲಾಗಿದೆ. ಈ ಟ್ವೀಟ್‌ಗೆ ಬಂದ ಬಹುತೇಕ ಕಾಮೆಂಟ್‌ಗಳು ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡುವಂತಿದೆ. ಅದರಲ್ಲಿ ನಾನು ಕನ್ನಡದಲ್ಲಿ ನಗಬೇಕು, ನಾನು ಕನ್ನಡದಲ್ಲಿ ಹೇಗೆ ನಗಲಿ ಹೇಳಿ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಇದೇ ಕಾರಣಕ್ಕೆ ಚೆನ್ನೈನಲ್ಲೂ ಕೋಲ್ಡ್ ಪ್ಲೇ ಶೋ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
Coldplay cancels concert in Bengaluru after fans asked them to sing in Kannada pic.twitter.com/b7clF4pT7m
— Voice of Hindus (@Warlock_Shabby) September 22, 2024
ಏನಿದು ಕೋಲ್ಡ್ ಪ್ಲೇ: ಕೋಲ್ಡ್ ಪ್ಲೇ ಎನ್ನುವುದು ಲಂಡನ್‌ನಲ್ಲಿ ರೂಪುಗೊಂಡ ಬ್ರಿಟಿಷ್ ರಾಕ್ ಬ್ಯಾಂಡ್ ಆಗಿದೆ. ಈ ಬ್ಯಾಂಡ್‌ನ ಮೂಲಕ ಇಂಗ್ಲಿಷ್‌ನಲ್ಲಿ ಹಾಡು ಹಾಡಲಾಗುತ್ತದೆ. ಆದರೆ, ಈ ಬ್ಯಾಂಡ್‌ನ (ಗ್ರೂಪ್) ಅವರು ಬೆಂಗಳೂರಿನಲ್ಲಿ ಬಂದಾಗ ಕನ್ನಡದಲ್ಲಿ ಹಾಡುವಂತೆ ಕೇಳುತ್ತಾರೆ ಎಂದು ಕೋಲ್ಡ್ ಪ್ಲೇ ನವರು ಕಾರ್ಯಕ್ರಮವನ್ನೇ ರದ್ದು ಮಾಡಿದರು ಎಂದು ಮೀಮ್ಸ್ ಮಾಡಲಾಗಿದೆ.
ಬೆಂಗಳೂರು ಪೊಲೀಸ್‌ಗೆ ಟ್ಯಾಗ್ ಮಾಡಿ ಪ್ರಶ್ನೆ: ಈ ರೀತಿಯ ಮೀಮ್ಸ್, ಟ್ರೋಲ್ ಹಾಗೂ ಟ್ವೀಟ್‌ಗಳಿಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹಲವರು ಬೆಂಗಳೂರು ಪೊಲೀಸರಿಗೆ ಈ ಟ್ವೀಟ್ ಅನ್ನು ಟ್ಯಾಗ್ ಮಾಡಿ ಬೆಂಗಳೂರು ಪೊಲೀಸರೇ ಇವನ ವಿರುದ್ಧ ಕ್ರಮ ತೆಗೆದುಕೊಂಡಿದ್ದೀರಾ, ಇಲ್ಲ ನೋಟೆಡ್ ಎಂದಷ್ಟೇ ಹಾಕಿ ಸುಮ್ಮನಾಗಿದ್ದೀರಾ ದಯವಿಟ್ಟು ತಿಳಿಸಿ ಎಂದು ಬೆಂಗಳೂರು ಪೊಲೀಸರ ವಿರುದ್ಧವೂ ತಮ್ಮ ಅಸಮಾಧನವನ್ನು ಹೊರ ಹಾಕಿದ್ದಾರೆ.












Click it and Unblock the Notifications