ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Bengaluru Traffic : ಬೆಂಗಳೂರಿನ ಸಂಚಾರ ನಿರ್ವಹಣೆಯಲ್ಲಿ ಸುಧಾರಣೆ: ನೆಟ್ಟಿಗರ ಮೆಚ್ಚುಗೆ

|
Google Oneindia Kannada News

ಬೆಂಗಳೂರಿನ ಸಂಚಾರ ನಿರ್ವಹಣೆಯಲ್ಲಿ ಭಾರಿ ಸುಧಾರಣೆಯಾಗಿದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಸ್ತೆಗಳಲ್ಲಿ ದಟ್ಟಣೆ ಮತ್ತು ಅವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಪ್ರಮುಖ ತಾಂತ್ರಿಕ ಪ್ರಗತಿಯ ಹೊಸ್ತಿಲಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Huge improvement in Traffic Management in Bengaluru says Netizens

ಬೆಂಗಳೂರಿನಲ್ಲಿ ಸಂಚಾರ ಮಾಡುವುದು ಅಂದರೆ ಅದು ದೊಡ್ಡ ಸಾಹಸದ ಕೆಲಸ. ಯಾಕೆಂದು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸಲು ಸುಮಾರು ಗಂಟೆಗಳು ತೆಗೆದುಕೊಳ್ಳುತ್ತವೆ ಎನ್ನುವುದು ಹಲವರ ಆರೋಪ. ಇದಕ್ಕೆ ಒಳಚರಂಡಿ, ಸರಿಯಾಗಿ ನಿರ್ಮಾಣ ಮಾಡದ ರಸ್ತೆಗಳೇ ಕಾರಣ ಎಂದು ದೂರುವವರ ನಡುವೆ ಒಂದು ಸಂತೋಷದ ವಿಚಾರ ಕೇಳಿ ಬಂದಿದೆ. ಸಂಚಾರ ದಟ್ಟನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಪ್ರಯತ್ನಗಳು ಫಲಕಾರಿಯಾಗುತ್ತಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.

ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಚಾರ ದಟ್ಟಣೆಯನ್ನು ತಡೆಯಲು ಹಲವಾರು ಪ್ರಯತ್ನಗಳು ಫಲ ನೀಡುತ್ತಿವೆ ಎಂದು ಹರ್ಷ ಎಂಬುವವರು ಕಾಮೆಂಟ್ ಮಾಡಿದ್ದಾರೆ.

ಬೆಂಗಳೂರು ದಟ್ಟಣೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈಗ ಪ್ರಯಾಣದ ಸಮಯ ಕಡಿಮೆಯಾಗಿದೆ. ಇದೇ ಸ್ಥಿತಿ ಮುಂದುವರೆಯಲಿ ಎಂದು ಭಾವಿಸುತ್ತೇವೆ ತಬಿಶ್ ಎಂಬುವವರು ಕಾಮೆಂಟ್ ಮಾಡಿದ್ದಾರೆ.

ಬೆಂಗಳೂರು ಪೊಲೀಸ್ ಮತ್ತು ಸಂಚಾರ ಪೊಲೀಸ್ ಇಲಾಖೆಗೆ ಧನ್ಯವಾದಗಳು. ಸಂಚಾರ ಯಶಸ್ವಿಯಾಗಿ ನಡೆಸುವಲ್ಲಿ ಸಹಾಯ ಮಾಡಿದ ಬಿಎಂಟಿಸಿ ಇಲಾಖೆಗೆ ಧನ್ಯವಾದಗಳು ಎಂದು ಸಜೇಶ್ ಬರೆದಿದ್ದಾರೆ.

ಇನ್ನೂ ಕೆಲವರು ಬೃಹತ್ ವಾಣಿಜ್ಯ ವಾಹನಗಳು ಸಂಚರಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮತ್ತೊಬ್ಬರು ಬೆಂಗಳೂರು ವಿಮಾನ ನಿಲ್ದಾಣದ ಬಸ್ ಬೆಳಿಗ್ಗೆ 1.35 ಕ್ಕೆ ಸಂಚಾರದಲ್ಲಿ ಸಿಲುಕಿಕೊಂಡಿದೆ. ಓಡಾಡೋ ದಾರಿಯಿಂದ ವಿಮಾನ ನಿಲ್ದಾಣಕ್ಕೆ ತಲುಪಲು ಸುಮಾರು 25 ನಿಮಿಷಗಳನ್ನು ತೆಗೆದುಕೊಂಡಿತು. ಬೆಂಗಳೂರು ಎಂದಿಗೂ ಬದಲಾಯಿಸಲಾಗುವುದಿಲ್ಲ ಎಂದು ಬರೆದಿದ್ದಾರೆ. ಹಲವೆಡೆ ವಾಹನಗಳನ್ನು ನೋಪಾರ್ಕಿಂಗ್‌ನಲ್ಲಿ ನಿಲ್ಲಿಸುವುದು, ಫುಟ್‌ಪಾತ್‌ ಮೇಲೆ ಸಂಚಾರ ಮಾಡುವುದು ಕಂಡುಬರುತ್ತದೆ ಎಂದು ಹಲವರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

English summary
Huge improvement in Traffic Management in Bengaluru says Netizens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X