ಗಣೇಶ ಹಬ್ಬ: ಮೆಜೆಸ್ಟಿಕ್ ಸುತ್ತಮುತ್ತ ಶುಕ್ರವಾರ ರಾತ್ರಿ ಹೆವೀ ರಷ್..
ಬೆಂಗಳೂರು, ಸೆಪ್ಟಂಬರ್ 15: ಕರ್ನಾಟಕದಾದ್ಯಂತ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮನೆಯಲ್ಲಿ ಮತ್ತು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಸಿದ್ಧತೆಗಳು ನಡೆದಿವೆ. ವಾರಾಂತ್ಯವಾದ್ದರಿಂದ ಊರುಗಳಿಗೆ ತೆರಳುವವರು ಬಸ್‌ಗಾಗಿ ಕಾದು ಹೈರಾಣಾಗಿದ್ದು, ಇಡಿ ಬಸ್‌ನಿಲ್ದಾಣವೇ ಬಸ್ ಮತ್ತು ಪ್ರಯಾಣಿಕರಿಂದ ತುಂಬಿ ತುಳುಕಿದ ಘಟನೆ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಶುಕ್ರವಾರ ರಾತ್ರಿ ಕಂಡು ಬಂತು.
ವಾರಾಂತ್ಯದ ಜೊತೆಗೆ ಸೋಮವಾರವೇ ಗಣೇಶ ಚತುರ್ಥಿ ಇರುವುದರಿಂದ ಗುರುವಾರದಿಂದ ಊರುಗಳತ್ತೆ ತೆರಳುವವರ ಸಂಖ್ಯೆ ಹೆಚ್ಚಿತ್ತು. ಶುಕ್ರವಾರ ವಂತೂ ಮಧ್ಯಾಹ್ನ ನಂತರ ಮೆಜೆಸ್ಟಿಕ್ ಸುತ್ತಮುತ್ತ ಸರ್ಕಾರಿ ಮತ್ತು ಖಾಸಗಿ ಬಸ್‌ಗಳದ್ದೆ ಖಾರು ಬಾರು. ಎಲ್ಲಿ ನೋಡಿದರಲ್ಲಿ ಪ್ರಯಾಣಿಕರೇ ತುಂಬಿ ಹೋಗಿದ್ದರು.

ಹಬ್ಬದ ಹಿನ್ನಲೆಯಲ್ಲಿ ಪ್ರತಿ ಬಾರಿಯೂ ಎಲ್ಲ ಬಸ್‌ಗಳೂ ರಷ್ ಇರುತ್ತವೆ. ಹೀಗಾಗಿಯೇ ಬಸ್‌ಗಳ ಟಿಕೆಟ್ ಬುಕ್ ಮಾಡಿರಲಾಗುತ್ತದೆ. ಟಿಕೆಟ್ ಕಾಯ್ದಿರಿಸದೇ ಇದ್ದ ಕೆಲವರು ಬಸ್‌ಗಳ ಜೊತೆಗೆ ಸೀಟಿಗಾಗಿ ಪರದಾಡಿದರು.
ಬೆಂಗಳೂರಿನಲ್ಲಿ ಉದ್ಯೋಗ ಅರಸಿ ಬಂದ ಅನೇಕರು ಹಬ್ಬಗಳ ಸಂದರ್ಭದಲ್ಲಿ ತಮ್ಮ ಊರುಗಳಿಗೆ ಹೊರಡುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಮ್ಮೆಲ್ಲೆ ಬಸ್‌ನಿಲ್ದಾಣಗಳತ್ತ ದಾಂಗುಡಿ ಇಡುವುದರಿಂದ ಜನದಟ್ಟಣೆ ಕಂಡು ಬರುತ್ತದೆ.
Huge crowds at Majestic ahead of weekend and Ganesha Chaturthi.
— Muthi-ur-Rahman Siddiqui (@ever_pessimist) September 15, 2023
Passengers struggling to get seats. @KSRTC_Journeys staff not very helpful. @NammaBengaluroo @BBPVedike pic.twitter.com/g3Bav6IcIf
ಖಾಸಗಿ ಬಸ್ ಪ್ರಯಾಣ ಬಲು ದುಬಾರಿ
ಬೆಂಗಳೂರಿನಿಂದ ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ರಾಯಚೂರು, ಕಲಬುರಗಿ, ಬೀದರ್, ಮಂಗಳೂರು, ಹೈದರಾಬಾದ್, ಚೆನ್ನೈ ಹೀಗೆ ಅನೇಕ ಕಡೆಗಳಲ್ಲಿಗೆ ತೆರಳುವವರ ಸಂಖ್ಯೆ ವೀಕೆಂಡ್ ಮತ್ತು ಹಬ್ಬದ ದಿನಗಳಲ್ಲಿ ಹೆಚ್ಚಿರುತ್ತದೆ. ಖಾಸಗಿ ಬಸ್ ಪ್ರಯಾಣಿಕರು ಹಬ್ಬದ ಲಾಭ ಪಡೆದು ಟಿಕೆಟ್ ದರವನ್ನು ದುಪ್ಪಟ್ಟು ಏರಿಕೆ ಮಾಡುತ್ತಾರೆ.
ದಟ್ಟಣೆ, ಪ್ರಯಾಣಿಕರಿಗೆ ಆರ್ಥಿಕ ನಷ್ಟವಾಗದಂತೆ ತಡೆಯಲು ಗಣೇಶ ಚತುರ್ಥಿ ವೇಳೆ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) 1200 ಬಸ್‌ಗಳನ್ನು ಬಿಟ್ಟಿದೆ. ಮುಂಗಾಡ ಬುಕ್ಕಿಂಗ್ ಟಿಕೆಟ್ ಮೇಲೆ ರಿಯಾಯಿತಿ ಘೋಷಿಸಿದೆ. ಹೀಗಿದ್ದರೂ ಸಂಚಾರ ದಟ್ಟಣೆ ಉಂಟಾಗಿದೆ. ಇನ್ನೂ ಹಬ್ಬ ಮುಗಿಸಿ ಮರಳಿ ಬರುವವರಿಗೆ ಅನುಕೂಲವಾಗಲು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಹುಬ್ಬಳ್ಳಿ ಹಾಗೂ ಇನ್ನಿತರ ಕಡೆಗಳಿಂದ ಬೆಂಗಳೂರಿಗೆ ಬರಲಿವೆ.












Click it and Unblock the Notifications