ಏನೇ ಆದರೂ ಸದ್ಯಕ್ಕೆ ಸಂಪುಟ ವಿಸ್ತರಣೆ ಆಗಲ್ಲ: ಎಸ್‌ಆರ್ ವಿಶ್ವನಾಥ್

ಬೆಂಗಳೂರು, ಜನವರಿ 18: ಏನೇ ಆದರೂ ಸದ್ಯಕ್ಕೆ ಸಂಪುಟ ವಿಸ್ತರಣೆಯಾಗುವುದಿಲ್ಲ ಎಂದು ಎಸ್‌ಆರ್ ವಿಶ್ವನಾಥ್ ಭವಿಷ್ಯ ನುಡಿದಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾಕೆಂದರೆ ಸಿಎಂ ಯಡಿಯೂರಪ್ಪ ನಾಳೆ ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ. ಅವರು ಬಂದ ನಂತರವೇ ಸಂಪುಟ ವಿಸ್ತರಣೆಯಾಗಲಿದೆ. ಎಷ್ಟು ಜನರಿಗೆ ಸಚಿವ ಸ್ಥಾನ ಕೊಡುತ್ತಾರೋ ಗೊತ್ತಿಲ್ಲ, ಬಹುಶಃ 33 ಸ್ಥಾನವನ್ನು ಕೂಡ ತುಂಬುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಹೇಳಿದರು.

ಇಂದೇ ಸಚಿವ ಸಂಪುಟ ವಿಸ್ತರಣೆ ಕುರಿತು ತೀರ್ಮಾನವಾಗುತ್ತದೆ. ಅಮಿತ್ ಶಾ ಹಾಗೂ ಯಡಿಯೂರಪ್ಪ ಈ ಕುರಿತು ಚರ್ಚೆ ನಡೆಸುತ್ತಾರೆ. ಅವಕಾಶ ಸಿಕ್ಕಿದ್ರೆ ಒಂದು ಸಚಿವ ಸ್ಥಾನ ಕೊಡಿ ಸರ್ ಕೆಲಸ ಮಾಡುಇ ತೋರಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.

However The Cabinet Is Currently Not Expanding

ಆಗಲೇಬೇಕು ಎಂದು ನಾನೇನು ಲಾಭಿ ಮಾಡೋಕೆ ಹೋಗಲ್ಲ, ನಾನು ಯಾವತ್ತು ಸರಿ ಇಲ್ಲ ಅಂತಾ ಹೇಳ್ತೀನೋ ಅವತ್ತು ನಾನು ಬಿಟ್ಟು ಬಿಡ್ತೇನೆ, ಬಹಳ ಆಸೆ ಅಂತಾ ಏನು ಇಲ್ಲ , ಆದರೆ ಒಳಗಡೆ ಅಂತೂ ಆಸೆ ಇದ್ದೆ ಇದೆ.ಆದರೆ ಈ ಮಾತನ್ನು ಬಹಿರಂಗ ವಾಗಿ ಹೇಳೋಕೆ ಆಗಲ್ಲ.ಕೆಲವರ ಹಣೆಯಲ್ಲಿ ದೊಡ್ಡದಾಗಿ ಅದೃಷ್ಟ ಇರುತ್ತೆ,ಅವರಿಗೆ ಬೇಗ ಅದೃಷ್ಟ ಬರುತ್ತೆ.ಆದರೆ ನಮಗೆ ನಿಧಾನವಾಗಿ ಅದೃಷ್ಟ ಬರುತ್ತೆ.ಅಲ್ಲಿಯವರೆಗೂ ಕಾಯೋಣ ಎಂದು ನುಡಿದರು.

ಯಲಹಂಕದ ಸೃಷ್ಟಿ ಆರ್ಟ್ಸ್ ಕಾಲೇಜಿನ ಗೋಡೆಗಳಲ್ಲಿ ಮೋದಿಯವರ ಕುರಿತು ಅವಹೇಳನಕಾರಿ ಪೋಸ್ಟ್‌ ಗಳ ಕುರಿತು ಮಾತನಾಡಿರುವ ಅವರು, ಕಾಲೇಜಿನ ವಿದ್ಯಾರ್ಥಿಗಳು ರಸ್ತೆಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದರು.

ರಸ್ತೆಯಲ್ಲಿ, ಸಾರ್ವಜನಿಕವಾಗಿ ಕಾಲೇಜು ಯುವಕರು ಸಿಗರೇಟು ಸೇದುತ್ತಿದ್ದರು.ಇದರ ಬಗ್ಗೆ ಸಾರ್ವಜನಿಕರು ದೂರು ಕೊಟ್ಟಿದ್ದರು. ಇದರ ಬಗ್ಗೆ ಚರ್ಚಿಸಲು ಮೊನ್ನೆ ಕಾಲೇಜಿಗೆ ಹೋಗಿದ್ವಿ. ಕಾಲೇಜಿನ ಮ್ಯಾನೇಜ್ಮೆಂಟ್ ಜೊತೆ ಮಾತುಕತೆ ನಡೆಸಿ ಇದನ್ನೆಲ್ಲ ಮಾಡದಂತೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿ ಅಂತ ಹೇಳಿ ಬಂದಿದ್ದೇವೆ ಎಂದು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+