ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂದಕಾಳೂರಿನಲ್ಲಿ ಇದ್ದ ಕೆರೆಗಳು: ನುಂಗಿದ ನಂತರ ಆಗಿದ್ದು

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಪ್ರಸಕ್ತ ವಿಧಾನಮಂಡಲದ ಅಧಿವೇಶನದಲ್ಲಿ ರಾಜಕೀಯ ಪಕ್ಷಗಳ 'ಕೆರೆ ಫೈಟ್' ಜೋರಾಗಿದೆ. ಮಳೆ ಬಂದಾಗ ಬೆಂಗಳೂರಿನ ಇಂದಿನ ಪರಿಸ್ಥಿತಿಗೆ ಉತ್ತರದಾಯಿ ಯಾರು ಎನ್ನುವ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತಿನ ಸಮರ ಜೋರಾಗಿ ನಡೆಯುತ್ತಿದೆ.

ಕಳೆದ ತಿಂಗಳ ಮಳೆಯ ಆವಾಂತರದ ನಂತರ ಎಚ್ಚೆತ್ತುಕೊಂಡ ಬೊಮ್ಮಾಯಿ ಸರಕಾರ, ಒತ್ತುವರಿ ವಿಚಾರದಲ್ಲಿ ಆರಂಭಿಕ ಶೂರತ್ವನ್ನು ಪ್ರದರ್ಶಿಸಿತ್ತು. ಮತ್ತದೇ, ಒತ್ತಡದ ಹಿನ್ನಲೆಯಲ್ಲಿ ಕಾರ್ಯಾಚರಣೆ ಆಮೆಗತಿಯಲ್ಲಿ ಸಾಗಲು ಆರಂಭಿಸಿದೆ.

Big Scam: 23 ಕೆರೆ ನಾಶ ಮಾಡಿ, 3,530 ನಿವೇಶನ ನಿರ್ಮಿಸಿದ ಬಿಡಿಎ!
ಸದನದಲ್ಲಿ ಸುದೀರ್ಘವಾಗಿ ಒತ್ತುವರಿ ವಿಚಾರದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್.ಅಶೋಕ್, ಇಂದಿನ ಸಮಸ್ಯೆಗಳಿಗೆ ಅಂದಿನ ಸರಕಾರಗಳು ಕಾರಣ ಎಂದು ದಾಖಲೆ ಸಮೇತ ಸದನದಲ್ಲಿ ಮಾತನಾಡಿ, ನಮ್ಮದೇನೂ ತಪ್ಪಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಕೆರೆ ಒತ್ತುವರಿಯಾಗಿರುವುದನ್ನು ಒಪ್ಪಿಕೊಂಡಿರುವ ಬಿಜೆಪಿ ಸರಕಾರ, ಬಿಬಿಎಂಪಿ, ಬಿಡಿಎ, ಪ್ರಭಾವೀಗಳು ಸೇರಿದಂತೆ ಒಟ್ಟು 42ಗಳನ್ನು ಮುಚ್ಚಲಾಗಿದೆ/ಒತ್ತುವರಿ ಮಾಡಲಾಗಿದೆ ಎಂದು ಅಶೋಕ್ ಅಂಕಿಅಂಶವನ್ನು ಸದನದ ಮುಂದಿಟ್ಟಿದ್ದಾರೆ. ಬೆಂಗಳೂರು ಅಥವಾ ಹಿಂದಿನ ಬೆಂದಕಾಳೂರಿನಲ್ಲಿ ಎಷ್ಟು ಕೆರೆಗಳಿದ್ದವು, ಈಗ ಅದು ಯಾವ ಪ್ರದೇಶವಾಗಿದೆ ಎನ್ನುವ, ಕೆಲವು ಕೆರೆಗಳ ಮಾಹಿತಿಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ಬೆಂಗಳೂರು ಪ್ರವಾಹ: ಸಾವಿರ ಕೆರೆಗಳ ನಗರದಲ್ಲಿ 126 ಕೆರೆಗಳು ಭರ್ತಿಬೆಂಗಳೂರು ಪ್ರವಾಹ: ಸಾವಿರ ಕೆರೆಗಳ ನಗರದಲ್ಲಿ 126 ಕೆರೆಗಳು ಭರ್ತಿ

 ಕಂದಾಯ ಸಚಿವರು ಸದನದಲ್ಲಿ ನೀಡಿದ ಮಾಹಿತಿ

ಕಂದಾಯ ಸಚಿವರು ಸದನದಲ್ಲಿ ನೀಡಿದ ಮಾಹಿತಿ

ಕಂದಾಯ ಸಚಿವರು ಸದನದಲ್ಲಿ ನೀಡಿದ ಮಾಹಿತಿಯಂತೆ, ಒಟ್ಟು 42 ಕೆರೆಗಳನ್ನು ಒತ್ತುವರಿ ಮಾಡಲಾಗಿದೆ. ಇದರಲ್ಲಿ ಬಿಡಿಎ 28, ಬಿಬಿಎಂಪಿ 5, ಬಿಡಿಯ ಅನುಮೋದಿತ ಕೆರೆ ಒಂದು ಮತ್ತು ಖಾಸಗಿಯವರು ಏಳು ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. 1963ರಿಂದಲೇ ಕೆರೆ ಒತ್ತುವರಿ ಆರಂಭವಾಗಿದ್ದು, ಮೊದಲು ಒತ್ತುವರಿಯಾಗಿದ್ದು ರಾಜಾಜಿನಗರದ ಭಾಗದಲ್ಲಿ, ಇದಾದ ನಂತರ 1965ರಲ್ಲಿ ಕೋರಮಂಗಲ. ಯಾವಯಾವ ಪ್ರಮುಖ ಕೆರೆಗಳು ಇಂದು ಯಾವ ಪ್ರದೇಶವಾಗಿದೆ? ಮುಂದಿನ ಸ್ಲೈಡಿನಲ್ಲಿ..

 ಕದಿರೇನಹಳ್ಳಿ ಕೆರೆಯ ಭಾಗದಲ್ಲಿ ಬನಶಂಕರಿ ಎರಡನೇ ಹಂತ

ಕದಿರೇನಹಳ್ಳಿ ಕೆರೆಯ ಭಾಗದಲ್ಲಿ ಬನಶಂಕರಿ ಎರಡನೇ ಹಂತ

ಸಾರಕ್ಕಿ ಅಗ್ರಹಾರ ಕೆರೆಯು ಈಗಿನ ಜೆ.ಪಿ.ನಗರ ನಾಲ್ಕನೇ ಫೇಸ್. ಚಿನ್ನಗಾರ ಕೆರೆ ಹೋಗಿ ಈಗಿನ ಈಜಿಪುರ, ಚಲ್ಲಘಟ್ಟ ಕೆರೆಯ ಭಾಗದಲ್ಲಿ ಈಗ ಕರ್ನಾಟಕ ಗಾಲ್ಫ್ ಅಸೋಶಿಯೇಶನ್ ಇದೆ. ದೊಮ್ಮಲೂರು ಕೆರೆ ಇದ್ದ ಜಾಗದಲ್ಲಿ ಈಗ ದೊಮ್ಮಲೂರು ಎರಡನೇ ಸ್ಟೇಜ್ ಇದೆ. ಕದಿರೇನಹಳ್ಳಿ ಕೆರೆಯ ಭಾಗದಲ್ಲಿ ಬನಶಂಕರಿ ಎರಡನೇ ಹಂತವಿದೆ.

 ಧರ್ಮಾಂಬುದಿ ಕೆರೆಯ ಜಾಗದಲ್ಲಿ ಈಗಿನ ಕೆಂಪೇಗೌಡ ಬಸ್ ನಿಲ್ದಾಣ

ಧರ್ಮಾಂಬುದಿ ಕೆರೆಯ ಜಾಗದಲ್ಲಿ ಈಗಿನ ಕೆಂಪೇಗೌಡ ಬಸ್ ನಿಲ್ದಾಣ

ರಾಮಶೆಟ್ಟಿ ಪಾಳ್ಯ ಕೆರೆಯ ಜಾಗದಲ್ಲಿ ಮಿಲ್ಕ್ ಕಾಲೋನಿಯಿದೆ, ಅಗಸನ ಕೆರೆಯ ಭಾಗದಲ್ಲಿ ಗಾಯತ್ರಿದೇವಿ ಪಾರ್ಕ್ ಇದೆ. ಈಗಿನ ರಾಜಾಜಿನಗರ ಹಿಂದಿನ ಕೇತಮಾರನಹಳ್ಳಿ ಕೆರೆ. ಧರ್ಮಾಂಬುದಿ ಕೆರೆಯ ಜಾಗದಲ್ಲಿ ಈಗಿನ ಕೆಂಪೇಗೌಡ ಬಸ್ ನಿಲ್ದಾಣವಿದೆ. ಕಂಠೀರವ ಸ್ಟೇಡಿಯಂ ಜಾಗದಲ್ಲಿ ಸಂಪಿಗೆ ಕೆರೆಯಿತ್ತು. ಕೋರಮಂಗಲ ಕೆರೆಯ ಜಾಗದಲ್ಲಿ ನ್ಯಾಶನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ ಇದೆ.

 ಹಾಳನಾಯಕನಹಳ್ಳಿ ಕೆರೆಯ ಭಾಗದಲ್ಲಿ ರೈನ್ ಬೋ ಲೇಔಟ್

ಹಾಳನಾಯಕನಹಳ್ಳಿ ಕೆರೆಯ ಭಾಗದಲ್ಲಿ ರೈನ್ ಬೋ ಲೇಔಟ್

ಸೊನ್ನೇನಹಳ್ಳಿ ಕೆರೆಯು ಆಸ್ಟಿನ್ ಟೌನ್ ಆಗಿದೆ, ಈಗಿನ ನಾಗಾವರ ಹಿಂದಿನ ಹೆಣ್ಣೂರು ಕೆರೆ. ರಾಜರಾಜೇಶ್ವರಿ ಲೇಔಟ್ ಹಿಂದಿನ ಕೊಟ್ಟೂರು ಕೆರೆ. ಪರಂಗಿಪಾಳ್ಯ ಕೆರೆ ಈಗಿನ ಎಚ್ ಎಸ್ ಆರ್ ಲೇಔಟ್, ಬಸವೇಶ್ವರನಗರ ಹಿಂದಿನ ಕುರುಬರಹಳ್ಳಿ ಕೆರೆ. ಹಾಳನಾಯಕನಹಳ್ಳಿ ಕೆರೆಯ ಭಾಗದಲ್ಲಿ ರೈನ್ ಬೋ ಲೇಔಟ್, ಇಕೋಸ್ಪೇಶ್. ಮಹದೇವಪುರ ವ್ಯಾಪ್ತಿಯ ಮುನೇನಕೊಳಲು ಕೆರೆ, ಬೆಳತ್ತಗೂರು ಕೆರೆ, ನಲ್ಲೂರಹಳ್ಳಿ ಕೆರೆ, ಗರುಡಾಚಾರ್ ಪಾಳ್ಯ ಕೆರೆ, ಯಮಲೂರು ಕೋಡಿ ಕೆರೆಯನ್ನೂ ಒತ್ತುವರಿ ಮಾಡಲಾಗಿದೆ.

English summary
How Many Lake Has Been Encroached In Bengaluru City And Name. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X