ಲಕ್ಷಾಂತರ ಸಂಬಳದ ಕೆಲಸ ಬಿಟ್ಟು, ಸಮೋಸಾ ಮಾರಿ 45 ಕೋಟಿ ಸಾಮ್ರಾಜ್ಯ ಕಟ್ಟಿದ ಬೆಂಗಳೂರಿನ ಸೈಂಟಿಸ್ಟ್ ದಂಪತಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ, ಲಕ್ಷಾಂತರ ರೂಪಾಯಿ ಸಂಬಳ ಬರುವ ನೆಮ್ಮದಿಯ ಉದ್ಯೋಗ ಬಿಟ್ಟು, ಹೊಸದೊಂದು ಉದ್ಯಮವನ್ನ ಶುರು ಮಾಡಬೇಕು ಎಂದು ಕೈ ಹಾಕುವುದು ದೊಡ್ಡ ಸಾಹಸವೇ ಸರಿ. ಬಹುತೇಕರು ಇಂತಹ ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ, ಬೆಂಗಳೂರಿನ ಈ ವಿಜ್ಞಾನಿ ದಂಪತಿ ತಮ್ಮ ಭವಿಷ್ಯವನ್ನು ಭಾರತೀಯರ ನೆಚ್ಚಿನ ತಿನಿಸಾದ ಸಮೋಸಾ ಮೇಲೆ ಹೂಡಿಕೆ ಮಾಡಿದರು.

2015ರಲ್ಲಿ ನಿಧಿ ಸಿಂಗ್ ಹಾಗೂ ಶಿಖರ್ ವೀರ್ ಸಿಂಗ್ ಅವರು ತಮ್ಮ ಐಷಾರಾಮಿ ಬಯೋಟೆಕ್ ಉದ್ಯೋಗಗಳನ್ನ ತೊರೆದು, ಸ್ಟಾರ್ಟ್‌ಅಪ್‌ಗಾಗಿ ಸ್ವಂತ ಮನೆಯನ್ನೇ ಮಾರಿ 'ಸಮೋಸಾ ಸಿಂಗ್' ಎಂಬ ಬ್ರ್ಯಾಂಡ್ ಅನ್ನು ಕಟ್ಟಿದರು. ಇಂದು ಈ ಬ್ರ್ಯಾಂಡ್ ಬಹು-ನಗರಗಳಲ್ಲಿ ವಿಸ್ತಾರಗೊಂಡು ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದೆ.

How a Bengaluru Couple Built a Rs 45-Crore Samosa Empire After Quitting High-Paying Biotech Jobs

ಅಡುಗೆಮನೆಯಲ್ಲಿ ಆರಂಭವಾದ ಸಮೋಸಾ ಸಿಂಗ್

ನಿಧಿ ಅವರು ಹೆಲ್ತ್‌ಕೇರ್ ಕಂಪನಿಯಲ್ಲಿ ದಶಕಗಳ ಕಾಲ ಕೆಲಸ ಮಾಡಿದ್ದರೆ, ಶಿಖರ್ ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಸಂಶೋಧಕರಾಗಿದ್ದರು. ಇಬ್ಬರೂ ಒಮ್ಮೆ ಫುಡ್ ಕೋರ್ಟ್‌ಗೆ ಭೇಟಿ ಕೊಟ್ಟಾಗ, ಪಿಜ್ಜಾ ಹಾಗೂ ಬರ್ಗರ್‌ಗಳಿಗೆ ಇರುವಂತೆ ಸಮೋಸಾಗಳಿಗೆ ಯಾವುದೇ ವ್ಯವಸ್ಥಿತ ಒಂದು ಒಳ್ಳೆಯ ದೊಡ್ಡ ಬ್ರ್ಯಾಂಡ್ ಇಲ್ಲದಿರುವುದನ್ನ ಗಮನಿಸಿದರು.

ಬೀದಿಬದಿಯ ಅಂಗಡಿಗಳಲ್ಲೇ ಹೆಚ್ಚು ಮಾರಾಟವಾಗುತ್ತಿದ್ದ ಸಮೋಸಾವನ್ನ ಒಂದು ಬ್ರ್ಯಾಂಡ್ ಆಗಿ ರೂಪಿಸುವ ಕನಸು ಕಂಡರು.

ಇದಕ್ಕಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ ಈ ದಂಪತಿ, ಬೆಂಗಳೂರಿನಲ್ಲಿ ಕೇವಲ 300 ಚದರ ಅಡಿ ವಿಸ್ತೀರ್ಣದ ಸಣ್ಣ ಅಡುಗೆಮನೆ ಹಾಗೂ ಒಬ್ಬನೇ ಒಬ್ಬ ಅಡುಗೆಯವನೊಂದಿಗೆ ತಮ್ಮ ಉದ್ಯಮವನ್ನು ಆರಂಭಿಸಿದರು. ಆರಂಭಿಕ ಬಂಡವಾಳಕ್ಕಾಗಿ ತಮ್ಮ ಸ್ವಂತ ಮನೆಯನ್ನೇ ಮಾರಾಟ ಮಾಡಿದರು.

ವಿಜ್ಞಾನದ ತಂತ್ರಜ್ಞಾನ: ಗರಿಗರಿಯಾದ ಸಮೋಸಾದ ಗುಟ್ಟು

ಸಮೋಸಾಗಳನ್ನ ಪಾರ್ಸೆಲ್ ತೆಗೆದುಕೊಂಡು ಹೋದಾಗ ಅಥವಾ ಸ್ವಲ್ಪ ಸಮಯದ ನಂತರ ಅವು ಬೇಗನೆ ಮೆತ್ತಗಾಗುತ್ತಿದ್ದವು. ಈ ಸಮಸ್ಯೆಯನ್ನ ಪರಿಹರಿಸಲು ದಂಪತಿ ತಮ್ಮ ವಿಜ್ಞಾನದ ಹಿನ್ನೆಲೆಯನ್ನ ಬಳಸಿಕೊಂಡರು. ಹಿಟ್ಟಿನಲ್ಲಿರುವ ಗ್ಲುಟೆನ್ ಬಂಧಗಳನ್ನ ಒಡೆಯಲು ವಿಶೇಷ ರೋಲರ್‌ಗಳನ್ನ ಬಳಸುವ ತಂತ್ರವನ್ನ ಅಭಿವೃದ್ಧಿಪಡಿಸಿದರು.

ಈ ವೈಜ್ಞಾನಿಕ ವಿಧಾನದಿಂದಾಗಿ ಸಮೋಸಾಗಳು ಕಡಿಮೆ ಎಣ್ಣೆಯನ್ನ ಹೀರಿಕೊಳ್ಳುತ್ತಿದ್ದವು ಮತ್ತು ಸುಮಾರು ಆರು ಗಂಟೆಗಳ ಕಾಲ ಗರಿಗರಿಯಾಗಿಯೇ ಇರುತ್ತಿದ್ದವು. ಈ 'ಕ್ರಿಸ್ಪಿ ಸಮೋಸಾ' ತಂತ್ರವು ಮಾರುಕಟ್ಟೆಯಲ್ಲಿ ಅವರಿಗೆ ದೊಡ್ಡ ಯಶಸ್ಸನ್ನೇ ತಂದುಕೊಟ್ಟಿತು ಎನ್ನಬಹುದು. ಕೇವಲ ಬಾಯಿರುಚಿ ಮಾತ್ರವಲ್ಲದೆ, ಗುಣಮಟ್ಟದಲ್ಲೂ ರಾಜಿಯಾಗದ ಕಾರಣ ಗ್ರಾಹಕರ ಸಂಖ್ಯೆ ದಿನೇ ದಿನೇ ಹೆಚ್ಚಾಯಿತು.

ದಿನಕ್ಕೆ 50 ಸಾವಿರ ಸಮೋಸಾ ಮಾರಾಟ

ಕೇವಲ ಒಂದು ಸಣ್ಣ ಔಟ್‌ಲೆಟ್‌ನಿಂದ ಶುರುವಾದ 'ಸಮೋಸಾ ಸಿಂಗ್' ಇಂದು ಬೆಂಗಳೂರು, ಹೈದರಾಬಾದ್, ಚೆನ್ನೈ, ಮೈಸೂರು ಸೇರಿದಂತೆ ಎಂಟು ನಗರಗಳಿಗೆ ವಿಸ್ತರಿಸಿದೆ. ಆಲೂ ಮಸಾಲಾ, ಮಂಚೂರಿಯನ್, ಕಡಾಯ್ ಪನೀರ್, ಚೀಸ್ ಚಿಲ್ಲಿ ಸೇರಿದಂತೆ ಹಲವು ಬಗೆಯ ನವೀನ ಸಮೋಸಾಗಳನ್ನು ಇವರು ಪರಿಚಯಿಸಿದ್ದಾರೆ.

ಪ್ರಸ್ತುತ ಈ ಬ್ರ್ಯಾಂಡ್ ಪ್ರತಿದಿನ ಬರೋಬ್ಬರಿ 50,000 ಸಮೋಸಾಗಳನ್ನ ಮಾರಾಟ ಮಾಡುತ್ತಿದ್ದು, ಏರ್ ಇಂಡಿಯಾ ಸೇರಿದಂತೆ ದೊಡ್ಡ ಕಾರ್ಪೊರೇಟ್ ಕಚೇರಿಗಳು, ಕೆಫೆಗಳು ಹಾಗೂ ರೆಸ್ಟೋರೆಂಟ್‌ಗಳಿಗೆ ತಮ್ಮ ಉತ್ಪನ್ನಗಳನ್ನ ಪೂರೈಸುತ್ತಿದೆ. ಒಂದು ಹಂತದಲ್ಲಿ ವಾರ್ಷಿಕ 45 ಕೋಟಿ ರೂಪಾಯಿ ವಹಿವಾಟು ನಡೆಸುವ ಮೂಲಕ ಈ ದಂಪತಿ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದಾರೆ.

ಕನಸು ಕಂಡು ಅದನ್ನು ನನಸಾಗಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಈ ದಂಪತಿಯೇ ಉತ್ತಮ ಉದಾಹರಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+