• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾದಿಂದ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಗುಣಮುಖ

|

ಬೆಂಗಳೂರು, ಜುಲೈ 18: ಕೊರೊನಾ ವೈರಸ್‌ಗೆ ತುತ್ತಾಗಿದ್ದ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಗುಣಮುಖರಾಗಿದ್ದಾರೆ. ಈ ಕುರಿತು ಶರತ್ ಬಚ್ಚೇಗೌಡ ಅವರೇ ಪೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

   Corona ಹೋರಾಟದಲ್ಲಿ ಭಾರತ ಮುಖ್ಯ ಪಾತ್ರ | Oneindia Kannada

   ಶರತ್ ಬಚ್ಚೇಗೌಡ ಜೊತೆ ಅವರ ಪತ್ನಿಗೂ ಸೋಂಕು ತಗುಲಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕ 'ನಾನು ಹಾಗೂ ನನ್ನ ಧರ್ಮಪತ್ನಿ ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖ ಆಗಿದ್ದೇವೆ. ಇಂದು ಕೊರೊನಾ ಪರೀಕ್ಷೆಯ ಫಲಿತಾಂಶದಲ್ಲಿ ನೆಗಟಿವ್ ಎಂದು ಬಂದಿದೆ'' ಎಂದು ತಿಳಿಸಿದ್ದಾರೆ.

   ಹೊಸಕೋಟೆಯಲ್ಲಿ ಸಂಚಲನ ಮೂಡಿಸುತ್ತಿರುವ ಶರತ್ ಬಚ್ಚೇಗೌಡರ ಹೊಸ ಸುದ್ದಿ

   'ನಾವು ಬೇಗ ಗುಣಮುಖರಾಗಲೆಂದು ನೀವೆಲ್ಲರೂ ಮಾಡಿದ ಆಶೀರ್ವಾದಕ್ಕೆ ನಾವು ಮತ್ತು ನಮ್ಮ ಕುಟುಂಬ ಸದಾ ಚಿರಋಣಿಯಾಗಿರುತ್ತೇವೆ' ಎಂದು ಧನ್ಯವಾದ ತಿಳಿಸಿದ್ದಾರೆ.

   ಕೊರೊನಾ ಸೋಂಕಿತರನ್ನ ಅಪರಾಧಿಗಳ ರೀತಿ ಕಾಣುವುದು, ಸಾಮಾಜದ ನಿಂದನೆಗೆ ಗುರಿ ಮಾಡುವುದು ಸರಿಯಲ್ಲ. ಇದು ಒಂದು ಯುದ್ಧ, ಈ ಸಾಂಕ್ರಾಮಿಕ ರೋಗದ ವಿರುಧ್ದ ಎಲ್ಲರೂ ಧೈರ್ಯದಿಂದ ಒಗ್ಗಟ್ಟಾಗಿ ಹೋರಾಡೋಣ, ಯಾರು ಸಹಾ ತಾಳ್ಮೆಯನ್ನು ಕಳೆದುಕೊಂಡು ಧೃತಿಕೆಡಬಾರದೆಂದು ಮನವಿ ಮಾಡಿದ್ದಾರೆ.

   ಸೊಂಕಿತರು ಕ್ವಾರಂಟೈನ್ ಅವಧಿಯನ್ನು ಮತ್ತು ಸರ್ಕಾರದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯ ಹಾಗೂ ಅದು ನಮ್ಮ ಜವಾಬ್ದಾರಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ತಪ್ಪದೆ ಮುಖಕ್ಕೆ ಮಾಸ್ಕ್ ಧರಿಸುವುದನ್ನ ಮರಿಯಬೇಡಿ ಎಂದು ಸಲಹೆ ನೀಡಿದ್ದಾರೆ.

   English summary
   Hoskote MLA Sharath Bachegowda and wife recovered from COVID 19. earlier, MLA and his wife infected from coronavirus.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X