ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸಕೋಟೆ ಉಪಚುನಾವಣೆ: ಯಾವ ಜಾತಿಯ ಎಷ್ಟು ಮತದಾರರಿದ್ದಾರೆ?

|
Google Oneindia Kannada News

ಹೊಸಕೋಟೆ, ನವೆಂಬರ್ 27: ರೌಡಿ ರಾಜಕೀಯದಿಂದಾಗಿ ಕರ್ನಾಟಕದ ಮಿನಿ ಬಿಹಾರ ಎಂದೇ ಕರೆಯಲ್ಪಡುವ ಹೊಸಕೋಟೆಯಲ್ಲಿ ಉಪಚುನಾವಣೆ ಭಾರಿ ಕುತೂಹಲ ಕೆರಳಿಸಿದೆ. ಹಣ, ಆರೋಪ-ಪ್ರತ್ಯಾರೋಪ, ತಂತ್ರ-ಪ್ರತಿತಂತ್ರ ಎಲ್ಲವೂ ಸಾಮಾನ್ಯತೆ ದಾಟಿ ಚುನಾವಣೆಗೆ ಕದನದ ಕಳೆ ತಂದಿಟ್ಟಿದೆ.

ಹೊಸಕೋಟೆ ರಾಜಕೀಯದಲ್ಲಿ ಎರಡೇ ವಿಷಯ ಮುಂಚಿನಿಂದಲೂ ನಡೆದುಕೊಂಡು ಬಂದಿದೆ. ಮೊದಲನೆಯದು ತೋಳ್ಬಲ, ಎರಡನೇಯದ್ದು ಹಣಬಲ, ಆದರೆ ಸಮಯ ಕಳೆದಂತೆ, ಜನರು ಪ್ರತಿರೋಧತನವನ್ನು ಬೆಳೆಸಿಕೊಂಡ ನಂತರ ತೋಳ್ಬಲದ ರಾಜಕೀಯ ಸ್ವಲ್ಪ ಹಿನ್ನಲೆಗೆ ಸರಿದು, ಆ ಸ್ಥಾನವನ್ನು ಜಾತಿ ಆಕ್ರಮಿಸಿಕೊಂಡಿದೆ.

ಮತ ಖರೀದಿಗೆ ಎಂಬಿಟಿ ನಾಗರಾಜ್ ದರಪಟ್ಟಿ ಹೀಗಿದೆ!ಮತ ಖರೀದಿಗೆ ಎಂಬಿಟಿ ನಾಗರಾಜ್ ದರಪಟ್ಟಿ ಹೀಗಿದೆ!

ಈ ಉಪಚುನಾವಣೆಯಲ್ಲಿಯೂ ಜಾತಿ ಅತ್ಯಂತ ಮಹತ್ವದ ಪಾತ್ರ ವಹಿಸಲಿದ್ದು, ಹೊಸಕೋಟೆಯಲ್ಲಿಯಂತೂ ಕಣದಲ್ಲಿರುವ ಪ್ರಮುಖ ಮೂರೂ ಅಭ್ಯರ್ಥಿಗಳು ಜಾತಿ ಧೃವೀಕರಣಕ್ಕೆ ಬಹುವಾಗಿ ಪ್ರಯತ್ನಿಸುತ್ತಿದ್ದಾರೆ.

ಕಣದಲ್ಲಿರುವ ಪ್ರಮುಖರು ಯಾವ ಸಮುದಾಯದವರು?

ಕಣದಲ್ಲಿರುವ ಪ್ರಮುಖರು ಯಾವ ಸಮುದಾಯದವರು?

ಕಣದಲ್ಲಿರುವ ಪ್ರಮುಖ ಮೂವರು ಅಭ್ಯರ್ಥಿಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ 'ಅನರ್ಹ' ಎಂ.ಟಿ.ಬಿ.ನಾಗರಾಜು ಮತ್ತು ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಪದ್ಮಾವತಿ ಸುರೇಶ್ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದರೆ. ಶರತ್ ಬಚ್ಚೇಗೌಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಒಕ್ಕಲಿಗ, ಕುರುಬ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳು ಹೊಸಕೋಟೆ ಕ್ಷೇತ್ರದ ಮುಕ್ಕಾಲು ಪಾಲು ಮತವನ್ನು ಹೊಂದಿದ್ದು, ಈ ಮೂರೂ ಸಮುದಾಯವರ ಬೆಂಬಲ ಇಲ್ಲದೆ ಗೆಲುವು ಕಷ್ಟ.

ಒಕ್ಕಲಿಗ ಮತ ಧೃವೀಕರಣ ಮಾಡುವತ್ತ ಶರತ್ ಚಿತ್ತ

ಒಕ್ಕಲಿಗ ಮತ ಧೃವೀಕರಣ ಮಾಡುವತ್ತ ಶರತ್ ಚಿತ್ತ

ಕುರುಬ ಮತಗಳ ಮೇಲೆ ಎಂಟಿಬಿ ನಾಗರಾಜು ಮತ್ತು ಪದ್ಮಾವತಿ ಸುರೇಶ್ ಕಣ್ಣಿಟ್ಟಿದ್ದಾರಾದ್ದರಿಂದ ಒಕ್ಕಲಿಗ ಮತಗಳನ್ನು ಧೃವೀಕರಣ ಮಾಡಿ ಆ ಮೂಲಕ ಜಯಗಳಿಸುವ ಲೆಕ್ಕಾಚಾರದಲ್ಲಿ ಶರತ್ ಬಚ್ಚೇಗೌಡ ಇದ್ದಾರೆ. ಇದಕ್ಕೆಂದೇ ನಿರ್ಮಲಾನಂದ ಸ್ವಾಮೀಜಿಗಳನ್ನು ಸಹ ಶರತ್ ಭೇಟಿಯಾಗಿ ಬಂದಿದ್ದಾರೆ.

ಮತದಾರರ ಬೆರಳು ಸೇರಲು ತಯಾರಾಗಿವೆ ಒಂದು ಲಕ್ಷ ಚಿನ್ನದುಂಗುರ!ಮತದಾರರ ಬೆರಳು ಸೇರಲು ತಯಾರಾಗಿವೆ ಒಂದು ಲಕ್ಷ ಚಿನ್ನದುಂಗುರ!

ಭಿನ್ನ ಯೋಜನೆ ರೂಪಿಸಿರುವ ಎಂಟಿಬಿ ನಾಗರಾಜು

ಭಿನ್ನ ಯೋಜನೆ ರೂಪಿಸಿರುವ ಎಂಟಿಬಿ ನಾಗರಾಜು

ಎಂಟಿಬಿ ನಾಗರಾಜು ಇದಕ್ಕಿಂತ ಭಿನ್ನವಾಗಿ ಯೋಜಿಸಿದ್ದು, ಕುರುಬ ಸಮುದಾಯದ ಮತಗಳ ಜೊತೆಗೆ ಎಸ್‌ಸಿ,ಎಸ್‌ಟಿ ಮತಗಳ ಮೇಲೆ ಕಣ್ಣಿಟ್ಟು ಈ ಎರಡೂ ಸಮುದಾಯದ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನಗಳನ್ನು ನಡೆಸಿದ್ದಾರೆ. ಇದಕ್ಕಾಗಿ ಹಣವನ್ನು ಯಥೇಚ್ಛವಾಗಿ ಬಳಸುತ್ತಿದ್ದಾರೆ ಕೂಡಾ.

ಪದ್ಮಾವತಿ ಸುರೇಶ್ ಲೆಕ್ಕಾಚಾರಗಳೇನು?

ಪದ್ಮಾವತಿ ಸುರೇಶ್ ಲೆಕ್ಕಾಚಾರಗಳೇನು?

ಇನ್ನು ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಪದ್ಮಾವತಿ ಸುರೇಶ್ ಅವರು ಕುರುಬ ಮತಗಳ ಜೊತೆಗೆ ಕಾಂಗ್ರೆಸ್‌ನೊಂದಿಗೆ ಹಿಂದಿನಿಂದಲೂ ಇರುವ ದಲಿತ ಸಮುದಾಯ ಹಾಗೂ ಮುಸ್ಲಿಂ ಸಮುದಾಯದ ಮತಗಳನ್ನು ನೆಚ್ಚಿಕೊಂಡಿದ್ದಾರೆ. ಕ್ಷೇತ್ರದ ಸಾಕಷ್ಟು ಒಕ್ಕಲಿಗ ಮತದಾರರು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರಾಗಿರುವುದು ಪದ್ಮಾವತಿ ಅವರಿಗೆ ಇರುವ ಇನ್ನೊಂದು ಧನಾತ್ಮಕ ಅಂಶ.

ಯಾವ ಜಾತಿಯ ಎಷ್ಟು ಮತದಾರರಿದ್ದಾರೆ?

ಯಾವ ಜಾತಿಯ ಎಷ್ಟು ಮತದಾರರಿದ್ದಾರೆ?

ಒಕ್ಕಲಿಗ ಮತಗಳು 41740
ಎಸ್‌ಸಿ-ಎಸ್‌ಟಿ ಮತಗಳು 39475
ಕುರುಬ ಮತಗಳು 30789
ಮುಸ್ಲಿಂ ಮತಗಳು 24515
ತಿಗಳ ಮತಗಳು 15975
ಗೊಲ್ಲ ಮತಗಳು 9437
ಲಿಂಗಾಯತ ಮತಗಳು 7302
ಇತರೆ 34,982

ಹೊಸಕೋಟೆ ಕ್ಷೇತ್ರದಲ್ಲಿನ ಒಟ್ಟು ಮತದಾರರೆಷ್ಟು?

ಹೊಸಕೋಟೆ ಕ್ಷೇತ್ರದಲ್ಲಿನ ಒಟ್ಟು ಮತದಾರರೆಷ್ಟು?

ಹೊಸಕೋಟೆ ಕ್ಷೇತ್ರದಲ್ಲಿ ಒಟ್ಟು 2,13,397 ಮತದಾರರು ಇದ್ದಾರೆ. ಇದರಲ್ಲಿ 1,07,881 ಪುರುಷರು, 1,05,489 ಮಹಿಳೆಯರು, 23 ಮಂದಿ ಇತರರು ಇದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 1,93,071 ಮತಗಳು ಚಲಾವಣೆ ಆಗಿದ್ದವು. ಆಗ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜು ಬಿಜೆಪಿಯಿಂದ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಅವರನ್ನು 7597 ಅಲ್ಪ ಮತಗಳ ಅಂತರದಿಂದ ಸೋಲಿಸಿದ್ದರು.

English summary
Caste calculations are high in Hosakote assembly constituency. Here is the detail of which caste voters are high.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X