ಕೊರೊನಾ ಕಡಿಮೆಯಾದಂತೆ ಏರುತ್ತಲೇ ಇದೆ ಬೆಂಗಳೂರಿನಲ್ಲಿ ಬಾಡಿಗೆ ದರ!

ಬೆಂಗಳೂರು, ಡಿ. 12: ಸಿಲಿಕಾನ್ ಸಿಟಿಯಲ್ಲಿ ಕಳೆದಾರು ತಿಂಗಳಿನಿಂದ ಬಾಡಿಕೆ ಏರಿಕೆಯಾಗುತ್ತಿದೆ. ಕೊರೊನಾ ಪ್ರಕರಣಗಳು ಕಡಿಮೆಯಾದ ಹಾಗೆಯೇ ಮನೆ ಬಾಡಿಗೆ ಹೆಚ್ಚಾಗುತ್ತಲೇ ಇದೆ. ಇದು ಶೇಕಡಾ 5 ರಷ್ಟಲ್ಲ. ಬರೋಬ್ಬರಿ 25 ಪ್ರತಿಶತದಷ್ಟು.

ಕೊರೊನಾ ಕಾಲದಲ್ಲಿ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ವಾಪಸ್ ತೆರಳಿದ್ದ ಜನರು, ಈಗ ಮತ್ತೆ ನಗರಕ್ಕೆ ವಾಪಸ್ ಆಗಿದ್ದಾರೆ. ಈ ಹಿನ್ನೆಲೆ ಬೇಡಿಕೆ ಹೆಚ್ಚಾಗಿದ್ದು, ಬಾಡಿಗೆ ಮನೆಗಳ ಲಭ್ಯತೆ ಮೊದಲಿನಂತಿಲ್ಲ ಎಂಬ ಅಂಶಗಳು ಇಲ್ಲಿ ಗಮನಿಸಬೇಕಾಗುತ್ತದೆ.

"ಬೇಡಿಕೆ ಹೆಚ್ಚಳದೊಂದಿಗೆ, ವಸತಿ ಆಸ್ತಿಗಳ ಲಭ್ಯತೆಯ ಕೊರತೆಯಿದೆ. ಕೊರೊನಾ ಸಮಯದಲ್ಲಿ ಬಾಡಿಗೆಯನ್ನು ಕಡಿಮೆ ಮಾಡಿದ ಮಾಲೀಕರು, ಈಗ ಬಾಡಿಗೆಯನ್ನು ಕನಿಷ್ಠ 25 ಪ್ರತಿಶತದಷ್ಟು ಹೆಚ್ಚಾಗಿದೆ" ಎಂದು ಹಲವು ರಿಯಲ್ ಎಸ್ಟೇಟ್ ಉದ್ಯಮಿಗಳು ಹೇಳುತ್ತಾರೆ.

ಒಬ್ಬ ಬಾಡಿಗೆದಾರ ಹೊರಟುಹೋದರೆ, ಇನ್ನೊಬ್ಬರು ಬರುತ್ತಾರೆ

ಒಬ್ಬ ಬಾಡಿಗೆದಾರ ಹೊರಟುಹೋದರೆ, ಇನ್ನೊಬ್ಬರು ಬರುತ್ತಾರೆ

"ತಿಂಗಳಿಗೆ 30,000 ರೂಪಾಯಿ ವೆಚ್ಚದ ಸ್ಥಳಗಳು ಕೂಡ ಈಗ 38,000 ರಿಂದ 40,000 ರೂಪಾಯಿಗಳ ಬಾಡಿಗೆಯನ್ನು ಪಡೆಯುತ್ತಿವೆ. ಜನ ಕೂಡ ಅಷ್ಟು ಹಣವನ್ನು ಪಾವತಿಸಲು ಸಿದ್ಧರಿದ್ದಾರೆ. ಒಂದು ಫ್ಲಾಟ್‌ನಲ್ಲಿ ಕನಿಷ್ಠ ಐದರಿಂದ ಆರು ಮಂದಿ ಇರುತ್ತಾರೆ. ಆದ್ದರಿಂದ ಮಾಲೀಕರು ಬೆಲೆಗಳನ್ನು ಹೆಚ್ಚಿಸಬಹುದು" ಪ್ರಾಪರ್ಟಿ ಬ್ರೋಕರ್ ಮೊಹಮ್ಮದ್ ಹಲೀಮ್ ಹೇಳುತ್ತಾರೆ.

ಇಷ್ಟು ದಿನ ಕಡಿಮೆ ಹಣಕ್ಕೆ ಬಾಡಿಗೆ ನೀಡಿದೆ. ಈಗ ಜನ ಜೀವನ ಸಹಜ ಸ್ಥಿಗೆ ಬಂದಿರುವ ಕಾರಣ ಬಾಡಿಗೆಯನ್ನು ಶೇಕಡಾ 20 ರಷ್ಟು ಹೆಚ್ಚಿಸಿದ್ದೇನೆ ಎಂದು ಮನೆ ಮಾಲೀಕರೊಬ್ಬರು ಹೇಳುತ್ತಾರೆ.

ಬಾಡಿಗೆದಾರರ ಸಂಕಷ್ಟ ಕೇಳುವಂತಿಲ್ಲ!

ಬಾಡಿಗೆದಾರರ ಸಂಕಷ್ಟ ಕೇಳುವಂತಿಲ್ಲ!

ಮನೆ ಮಾಲೀಕರು ಬಾಡಿಗೆ ಹೆಚ್ಚಿಸಲು ಹಲವು ಕಾರಣಗಳನ್ನು ನೀಡುತ್ತಾರೆ. ಆದರೆ, ಬಾಡಿಗೆದಾರರು ತಮ್ಮದೇ ಆದ ಸಂಕಟಗಳನ್ನು ಹೊಂದಿದ್ದಾರೆ. ಉದಾಹರಣೆಗೆ, ಅಖಿಲ್ ಅನಿಲ್ 2019 ರಲ್ಲಿ ಕೇರಳದಿಂದ ಕಾರ್ಪೊರೇಟ್ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು, ಪೇಯಿಂಗ್ ಗೆಸ್ಟ್ ಆಗಿ ಬದುಕುತ್ತಿದ್ದರು. 2020 ರಲ್ಲಿ ಅವರ ಮದುವೆಯ ನಂತರ, ಅವರು ಐಷಾರಾಮಿ ವೈಟ್‌ಫೀಲ್ಡ್ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು. ತಿಂಗಳಿಗೆ ಸುಮಾರು 30,000 ರೂಪಾಯಿ ಬಾಡಿಗೆಯಿತ್ತು.

ಆದರೆ ಸಾಂಕ್ರಾಮಿಕ ರೋಗದ ಬಳಿಕ ಈಗ ಏಕಾಏಕಿ 30 ಪ್ರತಿಶತದಷ್ಟು ಬಾಡಿಗೆ ಹೆಚ್ಚಳ ಮಾಡಲಾಗಿದೆ. ಈಗ ಅವರು ಹೆಚ್ಚುವರಿಯಾಗಿ 10,000 ರೂಪಾಯಿಗಳನ್ನು ಕಟ್ಟಬೇಕಾಗಿತ್ತು. ಆದರೆ ಅಖಿಲ್ ಮನೆ ಖಾಲಿ ಮಾಡಿ, ಬೇರೆ ಕಡೆ ಮನೆ ಬಾಡಿಗೆ ಹಿಡಿದಿದ್ದಾರೆ. ಇತ್ತ, ಮನೆ ಮಾಲೀಕರಿಗೂ ಹೊಸ ಬಾಡಿಗೆದಾರರು ಬೇಗನೆ ಸಿಕ್ಕಿದ್ದಾರೆ.

 45,000 ಇದ್ದ ಮನೆ ಈಗ 65,000 ರೂಪಾಯು ಬಾಡಿಗೆ

45,000 ಇದ್ದ ಮನೆ ಈಗ 65,000 ರೂಪಾಯು ಬಾಡಿಗೆ

ಐಟಿ ಕೈಗಾರಿಕೆಗಳ ಸಮೀಪವಿರುವ ಸೊಸೈಟಿಗಳ ಬಾಡಿಗೆ ಸುಮಾರು 30 ಪ್ರತಿಶತದಷ್ಟು ಹೆಚ್ಚಾಗಿದೆ. ರಿಂಗ್ ರಸ್ತೆ, ಎಂಎನ್‌ಸಿ ಕಂಪನಿಗಳಿಗೆ ಸಮೀಪವಿರುವ ಪ್ರದೇಶಗಳು ಈಗ ವಾಸಿಸಲು ಅತ್ಯಂತ ದುಬಾರಿ ಪ್ರದೇಶಗಳಲ್ಲಿ ಒಂದಾಗಿವೆ. ಇಂದಿರಾನಗರ ಮತ್ತು ಕೋರಮಂಗಲದಲ್ಲೂ ಬಾಡಿಗೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.

ಇನ್ನು, ತಿಂಗಳಿಗೆ ಸುಮಾರು 45,000 ರೂಪಾಯಿ ಬಾಡಿಗೆ ನೀಡುತ್ತಿದ್ದ ಮನೆಗಳಿಗೆ ಇಂದು 65,000 ರೂಪಾಯಿ ಬಾಡಿಗೆ ನೀಡಬೇಕಾಗಿದೆ. ಕೊರೊನಾ ಕಾಲದಲ್ಲಿ ಬಾಡಿಗೆ ಕಡಿಮೆ ಮಾಡಿದ್ದ ಕಾರಣ ಈ ಕ್ರಮವನ್ನು ಮನೆ ಮಾಲೀಕರು ಅಳವಡಿಸಿಕೊಂಡಿದ್ದಾರೆ.

ಮನೆ ಬಾಡಿಗೆ ಒಪ್ಪಂದ ಪತ್ರವನ್ನು ಸರಿಯಾಗಿ ಮಾಡಿಸಿ

ಮನೆ ಬಾಡಿಗೆ ಒಪ್ಪಂದ ಪತ್ರವನ್ನು ಸರಿಯಾಗಿ ಮಾಡಿಸಿ

ಇನ್ನು, ಇಂತಹ ಬಾಡಿಗೆ ಏಕಾಏಕಿ ಏರಿಸುವ ಮನೆ ಮಾಲೀಕರ ವಿರುದ್ಧ ಮಾತನಾಡಲು ಅಥವಾ ಅದನ್ನು ಸರಿಯಾಗಿ ಪ್ರಶ್ನೆ ಮಾಡಲು ಬಾಡಿಗೆದಾರರ ಬಳಿ ಸರಿಯಾದ ಮಾಹಿತಿ, ದಾಖಲೆ ಇರಬೇಕು. ಈ ಕಾರಣಕ್ಕೆ ಮನೆ ಬಾಡಿಗೆ ತೆಗೆದುಕೊಳ್ಳುವಾಗ ಎಚ್ಚರ ವಹಿಸುವುದು ಉತ್ತಮ.

ಮನೆ ಒಪ್ಪಂದ ಪತ್ರವನ್ನು ಸರಿಯಾಗಿ ಓದಿ, ಅದರಲ್ಲಿ ಏನೇನಿದೆ ಎಂಬುದನ್ನು ತಿಳಿದುಕೊಂಡು ಸಹಿ ಮಾಡಬೇಕು. ಮನೆ ಹುಡುಕಲು ಸರಿಯಾದ ಬ್ರೋಕರ್‌ಗಳನ್ನು ಹುಡುಕುವುದು ಕೂಡ ಅಗತ್ಯ. ಯಾವುದೇ ಸಮಸ್ಯೆಗಳಿದ್ದರೇ ಒಮ್ಮೆ ನೆರೆಹೊರೆಯವರೊಂದಿಗೆ ಪರಿಶೀಲಿಸುವುದು ಉತ್ತಮ. ವಕೀಲರೊಂದಿಗೂ ಮಾತನಾಡುವುದು ಬಾಡಿಗೆದಾರರಿಗೆ ಅವಶ್ಯಕವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+