Bengaluru Traffic: ಹೋಳಿ ಹಬ್ಬ ಜಾಲಿ ಜಾಲಿ...ಪ್ರಮುಖ ರಸ್ತೆಗಳು ಖಾಲಿ..ಖಾಲಿ..
ಬೆಂಗಳೂರು, ಮಾರ್ಚ್ 14: ಭಾರೀ ಸಂಚಾರ ದಟ್ಟಣೆಯ ಕುಖ್ಯಾತಿ ಪಡೆದಿರುವ ರಾಜ್ಯ ರಾಜಧಾನಿ, ಮಹಾನಗರ ಬೆಂಗಳೂರಲ್ಲಿ ಶುಕ್ರವಾರ ಮಹತ್ವದ ಸಂಗತಿಗೆ ಸಾಕ್ಷಿಯಾಗಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳು, ಅದರಲ್ಲೂ ಹೊರ ವರ್ತುಲ ರಸ್ತೆ ಖಾಲಿ ಖಾಲಿಯಾಗಿದ್ದು ಕಂಡು ಬಂತು. ಬೆಂಗಳೂರಿನಲ್ಲಿ ಇಂತಹ ಅಸಮಾನ್ಯ ದೃಶ್ಯ ಕಾಣುವುದು ತೀರಾ ವಿರಳ. ರಸ್ತೆ ಖಾಲಿ ಇರುವುದನ್ನು
ಬೆಂಗಳೂರಿನ ಹೊರ ವರ್ತುಲ ರಸ್ತೆ (ORR) ಹೋಳಿ ಹಬ್ಬದಂದು ಅಸಾಮಾನ್ಯ ದೃಶ್ಯಕ್ಕೆ ಸಾಕ್ಷಿಯಾಗಿದೆ. ಈ ಕುರಿತು ನಮ್ಮ ಬೆಂಗಳೂರು ಎಕ್ಸ್ ಖಾತೆಯಲ್ಲಿ ORR ರಸ್ತೆಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದಲ್ಲೆ ನಕ್ಷೆ ಮ್ಯಾಪ್‌ನಲ್ಲಿ ಎಲ್ಲೂ ಸಂಚಾರ ದಟ್ಟಣೆಯ ಕೆಂಪು ಗುರುತು ಇಲ್ಲದ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಹೋಳಿ ಹಬ್ಬದಂದು ಸುಗಮ ಸಂಚಾರ ಹರಿವು ಕಂಡು ಬಂದಿದೆ.

ಬಣ್ಣದೋಕುಳಿಯಲ್ಲಿ ಮಿಂದು ಜನ ಜಾಲಿ, ರಸ್ತೆಗಳು ಖಾಲಿ..
ಹೋಳಿ ಹಬ್ಬದಂದು ಶುಕ್ರವಾರ ಅನೇಕ ಕಂಪನಿಗಳಿಗೆ ರಜೆ ನೀಡಲಾಗಿದೆ. ಕೆಲವೆಡೆ ಅಂಗಡಿ ಮುಂಗಟ್ಟುಗಳು, ಶಾಲೆ ಮತ್ತು ಕಾಲೇಜುಗಳು, ಬ್ಯಾಂಕ್‌ಗಳಿಗೆ ರಜೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜನರು ರಜೆಯ ಮೋಜು ಮಸ್ತಿಯಲ್ಲಿ ಜಾಲಿ ಮಾಡುತ್ತಿದ್ದಾರೆ. ಕೆಲವರಂತು ಸ್ನೇಹಿತರ ಜೊತೆಗೂಡು ಬಣ್ಣದೋಕುಳಿ ಆಡಿ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದಾಗಿ ಐಟಿ ಕೇಂದ್ರಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ಮುಖ್ಯವಾಗಿ ಹೊರ ವರ್ತುಲ ರಸ್ತೆಗಳು ಖಾಲಿ ಹೊಡೆಯುತ್ತಿದ್ದವು. ಎಂದಿನಂತೆ ದಟ್ಟಣೆ, ವಾಹನಗಳ ಸಂಚಾರ ಇರಲಿಲ್ಲಿಲ್ಲ.
ನಿತ್ಯ ಜನಜಂಗುಳಿ, ಸಿಗ್ನಲ್, ಟ್ರಾಫಿಕ್, ವಾಹನಗಳು ಹೆಚ್ಚಿರುವ ORR ರಸ್ತೆ ಇಂದು ಶುಕ್ರವಾರ ಪೀಕ್ ಸಮಯದಲ್ಲೇ ಖಾಲಿ ಖಾಲಿ ಇದ್ದದ್ದು ಕಂಡು ಬಂತು. ಒಂದೇ ದಿನದಲ್ಲಿ ಇಷ್ಟೊಂದು ವ್ಯತ್ಯಾಸ, ಸುಗಮ ಸಂಚಾರಕ್ಕೆ ಬೆಂಗಳೂರು ಸಾಕ್ಷಿಯಾಗಿದೆ. 'ಹೋಳಿ ಪ್ರಯುಕ್ತ ಬೆಂಗಳೂರು ಓಆರ್‌ಆರ್ ರಸ್ತೆ ನೋಡಿ' ಎಂದು ಪೋಸ್ಟ್‌ನೊಂದಿಗೆ ಬರೆಯಲಾಗಿದೆ.
364 ದಿನವು ಹೋಳಿ ಆಚರಿಸಬೇಕು!
ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ ಕೆಲವರಲ್ಲಿ ಒಬ್ಬರು 364 ದಿನವು ನಾವು ಹೋಳಿ ಆಚರಿಸಬಹುದೆ ಎಂದು ಕೇಳಿದ್ದಾರೆ. ಬೆಂಗಳೂರಿನ ದಟ್ಟಣೆಗೆ ಬೇಸತ್ತು, ಆರಾಮದಾಯಕ ಸಂಚಾರ ಎದುರು ನೋಡುತ್ತಾ ಈ ರೀತಿ ಹೇಳಿದ್ದಾರೆ. ಸುಗಮ ಸಂಚಾರ ಸಿಗಬೇಕಾದರೆ ವರ್ಷವಿಡೀ ಹೋಳಿ ಮಾಡಬೇಕು ಎಂಬ ಅರ್ಥದಲ್ಲಿ ತಿಳಿಸಿದ್ದಾರೆ.
Today’s Holi, Namma Bengaluru ORR Traffic has taken a Holi-Day 😍 pic.twitter.com/tNnbsY9cWH
— ನಮ್ಮ ಬೆಂಗಳೂರು Namma Bengaluru (@NammaBengaluroo) March 14, 2025
20 ಕಿಮೀ ಕ್ರಮಿಸಲು 35 ನಿಮಿಷ
ಇಂದು 20 ಕಿಮೀ ಕ್ರಮಿಸಲು ಬರೀ 35 ನಿಮಿಷಗಳನ್ನು ತೆಗೆದುಕೊಂಡಿದ್ದೇವೆ. ಇದೇ ಸಾಮಾನ್ಯ ದಿನಗಳಲ್ಲಿ ಆದರೆ 1 ಕಿಮೀ 35 ನಿಮಿಷಗಳನ್ನು ತೆಗೆದುಕೊಳ್ಳುತ್ತಿತ್ತು. ಇದಕ್ಕೆಲ್ಲ ಹೆಚ್ಚು ಸಮಯ, ಇಂಧನ ವ್ಯರ್ಥ ಆಗುತ್ತಿದೆ ಎಂದು ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕುರಿತು ಟೀಕಿಸಿದರು.

ಬೆಂಗಳೂರಿನ ಹೊರ ವರ್ತುಲ ರಸ್ತೆಯಾದ ಸಿಲ್ಕ್ ಬೋರ್ಡ್ ನಿಂದ ಹೆಬ್ಬಾಳವರೆಗೆ ನಮ್ಮ ಮೆಟ್ರೋದ ನೀಲಿ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ಇದು ವಾಣಿಜ್ಯ ಕಾರ್ಯಾಚರಣೆಗೆ ತೆರೆದರೆ ಉತ್ತಮ, ಸುಗಮ ಸಂಚಾರ ಸಾಧ್ಯವಾಗುತ್ತದೆ. ಸರ್ಕಾರ ರಸ್ತೆಗುಂಡಿ ದುರಸ್ಥಿ, ರಸ್ತೆಗಳ ಸುಧಾರಣೆ, ಅಗತ್ಯ ಮೂಲ ಸೌಕರ್ಯ ಕಲ್ಪಿಸಿದರೆ ಉತ್ತಮ ಸಂಚಾರ ಸಂಚಾರಕ್ಕೆ ಅವಕಾಶ ಸಿಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಆದ್ಯತೆ ನೀಡಬೇಕು.












Click it and Unblock the Notifications